CM of Karnataka (@CMofKarnataka) header
CM of Karnataka (@CMofKarnataka) profile picture

Official Page of the Chief Minister's Office, Karnataka

Bengaluru, Karnataka
Joined August 2014
Photo by CM of Karnataka (@CMofKarnataka)Photo by CM of Karnataka (@CMofKarnataka)Photo by CM of Karnataka (@CMofKarnataka)Photo by CM of Karnataka (@CMofKarnataka)Photo by CM of Karnataka (@CMofKarnataka)Photo by CM of Karnataka (@CMofKarnataka)Photo by CM of Karnataka (@CMofKarnataka)Photo by CM of Karnataka (@CMofKarnataka)Photo by CM of Karnataka (@CMofKarnataka)Photo by CM of Karnataka (@CMofKarnataka)
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ಇಂದು ಸಂವಿಧಾನ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು. ಈ ವೇಳೆ ವಿಧಾನ ಪರಿಷತ್ತಿನ ಸಭಾಪತಿಗಳಾದ ಶ್ರೀ ಸಲೀಂ ಅಹ್ಮದ್, ಸಚಿವರಾದ ಶ್ರೀ ಕೆ. ಹೆಚ್.‌ ಮುನಿಯಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಹಾಗೂ ಗಣ್ಯರು ಉಪಸ್ಥಿತರಿದ್ದರು. Hon’ble Chief Minister Shri D.K. Shivakumar paid floral tributes to Dr. B.R. Ambedkar, the architect of the Indian Constitution, at his statue on the Vidhana Soudha premises on the occasion of Constitution Day. Chairman of the Karnataka Legislative Council Shri Saleem Ahmed, Social Welfare Minister Shri K.H. Muniyappa, Chief Secretary Dr. Shalini Rajneesh and other dignitaries were present.
1
7
2,219
2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯು ದೇಶದ ಇತಿಹಾಸದಲ್ಲಿ ಮರೆಯಲಾಗದ ಕರಾಳ ಅಧ್ಯಾಯ. ಈ ದಾಳಿಯಲ್ಲಿ ಪ್ರಾಣತೆತ್ತ ಅಮಾಯಕರು ಹಾಗೂ ದೇಶದ ರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರ ತ್ಯಾಗ ಭಾರತದ ಸ್ಮೃತಿಯಲ್ಲಿ ಸದಾ ಅಚ್ಚಳಿಯದೆ ಉಳಿಯಲಿದೆ. ಭಯೋತ್ಪಾದನೆಗೆ ಎಂದಿಗೂ ಮಣಿಯದ ರಾಷ್ಟ್ರೀಯ ಸಂಕಲ್ಪದೊಂದಿಗೆ, ಶಾಂತಿ, ಏಕತೆ ಮತ್ತು ನಾಗರಿಕರ ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಮತ್ತಷ್ಟು ಬಲಪಡಿಸೋಣ.
4
1
17
3,085
ಭಾರತೀಯ ಸಂವಿಧಾನವು ನಮ್ಮ ಪ್ರಜಾಪ್ರಭುತ್ವದ ಅಡಿಪಾಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದಾರಿದೀಪ. ಸಂವಿಧಾನದ ಆಶಯಗಳನ್ನು ಗೌರವಿಸಿ, ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಕರ್ತವ್ಯಗಳನ್ನು ಪಾಲಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಸಂವಿಧಾನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಸಂವಿಧಾನ ಸಭೆಯ ಎಲ್ಲ ಮಹನೀಯರ ದೂರದೃಷ್ಟಿ ಮತ್ತು ಕೊಡುಗೆಗಳನ್ನು ಸ್ಮರಿಸುತ್ತಾ, ಸಂವಿಧಾನದ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ.
2
8
42
3,589
ಮಂಜಿನ ನಗರಿ ಕೊಡಗಿನ ಹಸಿರು ಗದ್ದೆಗಳಲ್ಲಿ ಹೊಸ ಭತ್ತದ ತೆನೆಗಳು ಬಾಗಿ ನಿಂತು, ಮನೆಮನೆಗಳಲ್ಲಿ ಸಂಭ್ರಮದ ದೀಪ ಬೆಳಗಿಸುವ ಶುಭ ಸಂದರ್ಭವೇ ಹುತ್ತರಿ (ಪುತ್ತರಿ) ಹಬ್ಬ. ಜಾಗತೀಕರಣದ ಈ ಕಾಲಘಟ್ಟದಲ್ಲೂ ತಮ್ಮ ಮೂಲ ಸಂಸ್ಕೃತಿ, ಐನ್‌ಮನೆಗಳ ಒಗ್ಗಟ್ಟು, ಹುತ್ತರಿ ಕೋಲಾಟ ಮತ್ತು ಜಾನಪದ ಕಲೆಗಳನ್ನು ಅತ್ಯಂತ ಶಿಸ್ತು ಹಾಗೂ ಅಭಿಮಾನದಿಂದ ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಕೊಡಗಿನ ಜನತೆಯ ಸಂಸ್ಕೃತಿ ಪ್ರೇಮ ಇಡೀ ನಾಡಿಗೆ ಮಾದರಿ. ಭೂಮಿತಾಯಿಯ ಮಡಿಲನ್ನು ಹಸಿರಾಗಿಸಿ, ನಾಡಿನ ಅನ್ನದ ಬಟ್ಟಲನ್ನು ತುಂಬಿಸುವ ಪ್ರತಿಯೊಬ್ಬ ರೈತನ ಶ್ರಮಕ್ಕೂ ಈ ಹಬ್ಬ ಗೌರವ ಸಲ್ಲಿಸುತ್ತದೆ. ಕಾವೇರಿ ತಾಯಿಯ ಆಶೀರ್ವಾದದಿಂದ ನಾಡಿನೆಲ್ಲೆಡೆ ಉತ್ತಮ ಮಳೆ-ಬೆಳೆಯಾಗಿ, ಪ್ರತಿಯೊಬ್ಬರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ. ಸಮಸ್ತ ಕೊಡವ ಜನತೆಗೂ ಹುತ್ತರಿ (ಪುತ್ತರಿ) ಹಬ್ಬದ ಶುಭಾಶಯಗಳು.
3
7
30
4,106
ತ್ಯಾಜ್ಯದಿಂದ ಇಂಧನ, ಪುರಸಭೆಯ ಘನತ್ಯಾಜ್ಯ ನಿರ್ವಹಣೆ ಮತ್ತು ನಗರ ಮೂಲಸೌಲಭ್ಯ ಕ್ಷೇತ್ರಗಳಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವ ಸಲುವಾಗಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ. ಬಿ. ಪಾಟೀಲ್ ಅವರು ಜಪಾನ್‌ನಲ್ಲಿ 'ಜೆಎಫ್‌ಇ ಎಂಜಿನಿಯರಿಂಗ್ ಕಾರ್ಪೊರೇಷನ್' ವ್ಯವಸ್ಥಾಪಕ ನಿರ್ದೇಶಕ ಶ್ರೀ ಕೀಚಿ ನಾಗಯಾ ಮತ್ತು ಕಂಪನಿಯ ಹಿರಿಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಚರ್ಚಿಸಿದರು. ಜಪಾನ್ ಹಾಗೂ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಪುರಸಭೆಯ ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವಲ್ಲಿ ಜೆಎಫ್‌ಇ ಎಂಜಿನಿಯರಿಂಗ್ ಹೊಂದಿರುವ ಅನುಭವದ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು. ಕಸ ವಿಲೇವಾರಿ ಪ್ರದೇಶಗಳಿಗೆ ಸೇರುವ ತ್ಯಾಜ್ಯದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವುದರ ಜೊತೆಗೆ, ಅಂದಾಜು 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿರುವ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕಗಳನ್ನು ಅಭಿವೃದ್ಧಿಪಡಿಸುವಲ್ಲಿ ತನಗಿರುವ ಪರಿಣತಿಯನ್ನು ಕಂಪನಿಯು ಹಂಚಿಕೊಂಡಿತು. ತ್ಯಾಜ್ಯ ಸಂಸ್ಕರಣೆ, ಇಂಧನ ಮರುಪಡೆಯುವಿಕೆ ಮತ್ತು ದೀರ್ಘಕಾಲೀನ ಕಾರ್ಯಾಚರಣೆಗಳನ್ನು ಸಂಯೋಜಿಸುವ ಮೂಲಕ, ಜೆಎಫ್‌ಇ ಸಂಸ್ಥೆಯ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ಮಾದರಿಗಳನ್ನು ಕರ್ನಾಟಕದ ನಗರ ತ್ಯಾಜ್ಯ ನಿರ್ವಹಣಾ ಅಗತ್ಯಗಳಿಗೆ ತಕ್ಕಂತೆ ಅಳವಡಿಸಿಕೊಳ್ಳುವ ಸಾಧ್ಯತೆಗಳ ಕುರಿತು ನಿಯೋಗವು ಪರಿಶೀಲಿಸಿತು. ಅಲ್ಲದೆ, ಆಯಾ ನಗರಗಳ ತ್ಯಾಜ್ಯದ ಸ್ವರೂಪ, ಸಂಗ್ರಹಣಾ ವ್ಯವಸ್ಥೆಗಳು, ಪ್ರಮಾಣ ಮತ್ತು ಮೂಲಸೌಲಭ್ಯಗಳ ಅಗತ್ಯಗಳಿಗೆ ಅನುಗುಣವಾಗಿ ವಿಶೇಷ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಚರ್ಚೆ ನಡೆಯಿತು. ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ಕರ್ನಾಟಕದ ಇತರ ಪ್ರಮುಖ ನಗರಗಳಿಗೂ ಸುಧಾರಿತ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಪರಿಹಾರಗಳನ್ನು ವಿಸ್ತರಿಸಲು ನಮ್ಮ ಸರ್ಕಾರವು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿತು. ಯೋಜನೆಯ ಅಭಿವೃದ್ಧಿ, ಅನುಷ್ಠಾನ ಮತ್ತು ದೀರ್ಘಕಾಲೀನ ನಿರ್ವಹಣೆಗಾಗಿ ಜಪಾನಿನ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಪರಿಣತಿಯನ್ನು ಸ್ಥಳೀಯ ಸಾಮರ್ಥ್ಯಗಳೊಂದಿಗೆ ಸಂಯೋಜಿಸಲು ಸೂಕ್ತ ಸ್ಥಳೀಯ ಪಾಲುದಾರರನ್ನು ಗುರುತಿಸುವ ಕುರಿತೂ ಚರ್ಚಿಸಲಾಯಿತು. ರಾಜ್ಯಾದ್ಯಂತ ಕಾರ್ಯಸಾಧುವಾದ ತ್ಯಾಜ್ಯದಿಂದ ಇಂಧನ ಮತ್ತು ನಗರ ಮೂಲಸೌಲಭ್ಯ ಯೋಜನೆಗಳನ್ನು ಅನ್ವೇಷಿಸಲು ಜೆಎಫ್‌ಇ ಎಂಜಿನಿಯರಿಂಗ್ ಸಂಸ್ಥೆಯೊಂದಿಗೆ ಮುಂದಿನ ಹಂತದ ಮಾತುಕತೆಗಳಿಗೆ ಸರ್ಕಾರವು ಅಗತ್ಯ ಸಹಕಾರ ನೀಡಲಿದೆ.
Hon’ble Chief Minister Shri D. K. Shivakumar, along with Minister for Large & Medium Industries and Infrastructure Development Shri M. B. Patil, met Mr. Keiichi Nagaya, Managing Director of JFE Engineering Corporation, and senior representatives of the company in Japan to explore opportunities for collaboration in waste-to-energy, municipal solid waste management and urban infrastructure. The discussions covered JFE Engineering’s experience in converting municipal solid waste into energy in Japan and other markets, including India. The company shared its expertise in developing waste-to-energy facilities capable of generating approximately 15 MW of power while significantly reducing the volume of waste sent to landfills. The delegation explored the potential to adapt JFE’s technology and operating models to Karnataka’s urban waste-management requirements, integrating waste processing, energy recovery and long-term operations. The discussions also focused on developing customised solutions based on the waste profile, collection systems, scale and infrastructure needs of individual cities. Our government expressed its interest in extending advanced waste-to-energy solutions beyond Bengaluru to other major cities across Karnataka. Both sides also discussed identifying suitable local partners to combine Japanese technology and engineering expertise with local capabilities for project development, implementation and long-term operations. We will facilitate further engagement with JFE Engineering to explore viable waste-to-energy and urban-infrastructure projects across the state.
1
6
4,284
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಕೈಗಾರಿಕಾ ಸಚಿವರಾದ ಶ್ರೀ ಎಂ. ಬಿ. ಪಾಟೀಲ್ ಅವರೊಂದಿಗೆ ಜಪಾನ್‌ನಲ್ಲಿ ಜೆಎಫ್‌ಇ ಸ್ಟೀಲ್ ಕಾರ್ಪೊರೇಷನ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಒಗಾವಾ ಹಿರೋಯುಕಿ ಹಾಗೂ ಜೆಎಫ್‌ಇ ಸ್ಟೀಲ್ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕರ್ನಾಟಕದಲ್ಲಿ ಉಕ್ಕು ಮತ್ತು ಉತ್ಪಾದನಾ ವಲಯದ ಬೆಳವಣಿಗೆಯಲ್ಲಿ ಸಂಸ್ಥೆಗಳ ಪಾತ್ರ, ಜೆಎಫ್‌ಇ–ಜೆಎಸ್‌ಡಬ್ಲ್ಯು ನಡುವಿನ ದೀರ್ಘಕಾಲದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ರಾಜ್ಯದಲ್ಲಿ ಹೂಡಿಕೆ ವಿಸ್ತರಣೆಯ ಅವಕಾಶಗಳ ಕುರಿತು ಚರ್ಚಿಸಿದರು. ಇದೇ ವೇಳೆ ಸುಧಾರಿತ ಉಕ್ಕು ಉತ್ಪಾದನೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಕರ್ನಾಟಕದಲ್ಲಿರುವ ಕೈಗಾರಿಕಾ ಅವಕಾಶಗಳನ್ನು ಆ ಸಂಸ್ಥೆಗಳ ಗಮನಕ್ಕೆ ತಂದು, ಪ್ರಸ್ತುತ ಹಾಗೂ ಮುಂದಿನ ಹೂಡಿಕೆ ಯೋಜನೆಗಳಿಗೆ ಅಗತ್ಯ ಅನುಮತಿಗಳು, ಮೂಲಸೌಕರ್ಯ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುವ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು. ಜೆಎಫ್‌ಇ–ಜೆಎಸ್‌ಡಬ್ಲ್ಯು ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ಮುಂದುವರಿಸಿ, ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೊಸ ಹೂಡಿಕೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಮಾತುಕತೆಗಳನ್ನು ನಡೆಸಲು ಉಭಯ ಸಂಸ್ಥೆಗಳು ಒಲವು ವ್ಯಕ್ತಪಡಿಸಿದವು. ಜಾಗತಿಕ ಕೈಗಾರಿಕಾ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ವಿಸ್ತರಿಸುವ ಮೂಲಕ ಕರ್ನಾಟಕದಲ್ಲಿ ಉತ್ಪಾದನಾ ಸಾಮರ್ಥ್ಯ, ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ.
Hon’ble Chief Minister Shri D. K. Shivakumar, along with Minister for Large & Medium Industries and Infrastructure Development Shri M. B. Patil, met Mr. Ogawa Hiroyuki, Executive Vice President of JFE Steel Corporation, and senior representatives of JFE Steel and JSW Steel in Japan to discuss strengthening their longstanding partnership and expanding their presence in Karnataka. The discussions focused on the strategic importance of Karnataka in the companies’ steel and manufacturing operations, opportunities to strengthen the existing JFE-JSW partnership and explore further investments in the State. The delegation highlighted Karnataka’s strong industrial and manufacturing ecosystem and encouraged the companies to consider new opportunities in advanced steel manufacturing and value-added products. The Chief Minister reiterated the Government’s full support in facilitating JFE-JSW Steel’s existing and future investments, including assistance with approvals, infrastructure and other project requirements. Both sides expressed interest in continuing their engagement and taking forward the long-term partnership to create new opportunities for industrial growth in Karnataka.
2
18
972

39
5,603
Hon’ble Chief Minister Shri D. K. Shivakumar, along with Minister for Large & Medium Industries and Infrastructure Development Shri M. B. Patil, met Mr. Keiichi Nagaya, Managing Director of JFE Engineering Corporation, and senior representatives of the company in Japan to explore opportunities for collaboration in waste-to-energy, municipal solid waste management and urban infrastructure. The discussions covered JFE Engineering’s experience in converting municipal solid waste into energy in Japan and other markets, including India. The company shared its expertise in developing waste-to-energy facilities capable of generating approximately 15 MW of power while significantly reducing the volume of waste sent to landfills. The delegation explored the potential to adapt JFE’s technology and operating models to Karnataka’s urban waste-management requirements, integrating waste processing, energy recovery and long-term operations. The discussions also focused on developing customised solutions based on the waste profile, collection systems, scale and infrastructure needs of individual cities. Our government expressed its interest in extending advanced waste-to-energy solutions beyond Bengaluru to other major cities across Karnataka. Both sides also discussed identifying suitable local partners to combine Japanese technology and engineering expertise with local capabilities for project development, implementation and long-term operations. We will facilitate further engagement with JFE Engineering to explore viable waste-to-energy and urban-infrastructure projects across the state.
1
6
1
28
4,389
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ. ಬಿ. ಪಾಟೀಲ್ ಅವರೊಂದಿಗೆ ಜಪಾನ್‌ನಲ್ಲಿ ಪ್ಯಾನಾಸೋನಿಕ್ ಆಟೋಮೋಟಿವ್ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಶ್ರೀ ಮೈಕ್ ನಾಗಯಾಸು ಅವರ ನೇತೃತ್ವದ ಆಡಳಿತ ಮಂಡಳಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸುಧಾರಿತ ಉತ್ಪಾದನಾ ವಲಯದಲ್ಲಿ ಕರ್ನಾಟಕದ ಸಾಮರ್ಥ್ಯ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಗೆ ರಾಜ್ಯದಲ್ಲಿರುವ ಅವಕಾಶಗಳನ್ನು ಈ ವೇಳೆ ಸಂಸ್ಥೆಯ ಗಮನಕ್ಕೆ ತಂದರು. ಕರ್ನಾಟಕದಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಹಾಗೂ ಹೊಸ ಹೂಡಿಕೆಗಳನ್ನು ಕೈಗೊಳ್ಳುವ ಸಾಧ್ಯತೆಗಳ ಕುರಿತು ಚರ್ಚಿಸಿ, ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡುವ ಭರವಸೆ ನೀಡಿದರು. 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ – ಇನ್ವೆಸ್ಟ್ ಕರ್ನಾಟಕ 2027’ರಲ್ಲಿ ಭಾಗವಹಿಸುವಂತೆ ಪ್ಯಾನಾಸೋನಿಕ್ ಆಟೋಮೋಟಿವ್ ಸಂಸ್ಥೆಯ ಪ್ರತಿನಿಧಿಗಳನ್ನು ಆಹ್ವಾನಿಸಿ, ಕರ್ನಾಟಕ ಮತ್ತು ಜಪಾನ್ ನಡುವಿನ ಕೈಗಾರಿಕಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಸುದೀರ್ಘವಾಗಿ ಚರ್ಚಿಸಿದರು.
Hon’ble Chief Minister Shri D. K. Shivakumar, along with Minister for Large & Medium Industries and Infrastructure Development Shri M. B. Patil, met the leadership team of Panasonic Automotive in Japan, led by its President and CEO, Mr. Mike Nagayasu. The discussions focused on presenting Karnataka’s strengths as a destination for advanced manufacturing and Global Capability Centres (GCCs), and exploring opportunities for Panasonic Automotive to expand its presence and operations in the State. The delegation assured the company of the Government’s full support in facilitating investments and future collaborations. The Chief Minister and the Industries Minister also invited Panasonic Automotive to participate in Global Investors Meet – Invest Karnataka 2027, and expressed interest in continuing the engagement to explore investment opportunities and strengthen industrial collaboration between Karnataka and Japan.
1
15
3,354

5
1
33
3,767
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ. ಬಿ. ಪಾಟೀಲ್ ಅವರು ಮತ್ತು ಕರ್ನಾಟಕದ ನಿಯೋಗದೊಂದಿಗೆ ಜಪಾನ್‌ನ ಪ್ರಮುಖ ವಾಸ್ತುಶಿಲ್ಪ, ಎಂಜಿನಿಯರಿಂಗ್ ಮತ್ತು ನಗರ ಯೋಜನಾ ಸಂಸ್ಥೆಯಾದ 'ನಿಕ್ಕೆನ್ ಸೆಕ್ಕೈ' ಸಹಯೋಗದಲ್ಲಿ, ಪ್ರತಿಷ್ಠಿತ ಸಮಗ್ರ ನಗರ ಅಭಿವೃದ್ಧಿ ಯೋಜನೆಯಾದ 'ಟೋಕಿಯೊ ಮಿಡ್‌ಟೌನ್ ರೊಪ್ಪೊಂಗಿ'ಗೆ ಭೇಟಿ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ನಿಯೋಗವು ಯೋಜನೆಯ ಮಾಸ್ಟರ್ ಪ್ಲಾನಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿಕ್ಕೆನ್ ಸೆಕ್ಕೈ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಾಗತಿಕ ವ್ಯವಹಾರ ವಿಭಾಗದ ಮುಖ್ಯಸ್ಥರಾದ ಶ್ರೀ ವಟಾರು ತನಕಾ ಅವರೊಂದಿಗೆ ಸಂವಾದ ನಡೆಸಿತು. ಸುಮಾರು 25 ಎಕರೆಯ ಹಳೆಯ ರಕ್ಷಣಾ ಇಲಾಖೆ ಭೂಮಿಯಲ್ಲಿ ಶೇ. 50 ರಷ್ಟನ್ನು ಹಸಿರು ಮತ್ತು ತೆರೆದ ಜಾಗವಾಗಿ ಉಳಿಸಿಕೊಂಡು, ಕಚೇರಿ, ವಸತಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನೊಳಗೊಂಡ ಆಧುನಿಕ ನಗರ ಪ್ರದೇಶವಾಗಿ ಹೇಗೆ ರೂಪಿಸಲಾಗಿದೆ ಎಂಬುದನ್ನು ತಂಡವು ಅಧ್ಯಯನ ಮಾಡಿತು. ಸಮಗ್ರ ಮಾಸ್ಟರ್ ಪ್ಲಾನಿಂಗ್, ವರ್ಟಿಕಲ್ ಡೆವಲಪ್‌ಮೆಂಟ್, ಭೂಮಿಯ ಸಮರ್ಪಕ ಬಳಕೆ, ಪಾದಚಾರಿ ಸ್ನೇಹಿ ಸಾರ್ವಜನಿಕ ಸ್ಥಳಗಳು, ಸುಗಮ ಸಾರ್ವಜನಿಕ ಸಾರಿಗೆ ಸಂಪರ್ಕ ಮತ್ತು ಉನ್ನತ ದರ್ಜೆಯ ನಗರ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಂದಾಜು 2.5 ರಿಂದ 3 ವರ್ಷಗಳಲ್ಲಿ ಸಾಕಾರಗೊಂಡಿರುವ ಈ ಮಾದರಿಯು, ಸಮಗ್ರ ಸಂಪರ್ಕ, ವಾಸಯೋಗ್ಯ ಪರಿಸರ ಮತ್ತು ಸುಸ್ಥಿರ ನಗರ ನಿರ್ಮಾಣಕ್ಕೆ ಸ್ಪಷ್ಟ ದಿಕ್ಸೂಚಿಯಾಗಿದೆ. ವಿಶ್ವದರ್ಜೆಯ ನಗರ ಮೂಲಸೌಕರ್ಯ ನಿರ್ಮಾಣದಲ್ಲಿ ಜಪಾನ್ ಹೊಂದಿರುವ ಅನುಭವವನ್ನು ಬಳಸಿಕೊಂಡು, ಇಂತಹ ಆಧುನಿಕ ಮಾದರಿಗಳನ್ನು ಬೆಂಗಳೂರಿನ ಅಭಿವೃದ್ಧಿ ಮತ್ತು ಭವಿಷ್ಯದ ಯೋಜನೆಗಳಿಗೆ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ನಿಯೋಗವು ಸಮಾಲೋಚನೆ ನಡೆಸಿತು.
Hon’ble Chief Minister Shri D. K. Shivakumar, along with Minister for Large & Medium Industries and Infrastructure Development Shri M. B. Patil and the Karnataka delegation, visited Tokyo Midtown Roppongi, a landmark mixed-use urban development, in collaboration with Nikken Sekkei, one of Japan’s leading architecture, engineering and urban-planning firms. During the visit, the delegation interacted with Mr. Wataru Tanaka, Senior Executive Officer and Head of the Global Business Department at Nikken Sekkei, who was closely involved in the project’s master planning. The team studied how the approximately 25-acre development transformed a former defence land parcel into a vibrant urban district, integrating offices, residences, retail, hospitality and cultural facilities while retaining nearly 50% of the area as open and green spaces. The discussions focused on integrated master planning, vertical development, efficient land use, pedestrian-friendly public spaces, seamless public transport connectivity and high-quality urban infrastructure. Completed in approximately 2.5 to 3 years, the project offers valuable insights into creating well-connected, liveable and sustainable urban spaces. The delegation also explored how these principles could be adapted to Bengaluru’s strategic redevelopment and future urban development projects, drawing on Japan’s experience in delivering world-class urban infrastructure and mixed-use developments.
1
1
15
5,209
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 5ನೇ ಹಂತದಲ್ಲಿರುವ 'ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ ಪ್ರೈವೇಟ್ ಲಿಮಿಟೆಡ್' ಘಟಕದ ವಿಸ್ತರಣೆಗಾಗಿ, 'ಕವಾಸಕಿ ಹೆವಿ ಇಂಡಸ್ಟ್ರೀಸ್' ಮುಂದಿನ 10 ವರ್ಷಗಳಲ್ಲಿ ₹800 ಕೋಟಿವರೆಗೆ ಹೂಡಿಕೆ ಮಾಡಲು ಬದ್ಧತೆ ತೋರಿದ್ದು, ಇದು ಕರ್ನಾಟಕದ ಉತ್ಪಾದನೆ ಮತ್ತು ಎಂಜಿನಿಯರಿಂಗ್ ವಲಯಕ್ಕೆ ದೊಡ್ಡ ಉತ್ತೇಜನ ನೀಡಿದೆ. ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ. ಬಿ. ಪಾಟೀಲ್ ಅವರ ಸಮ್ಮುಖದಲ್ಲಿ ಟೋಕಿಯೊದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕವಾಸಕಿ ಹೆವಿ ಇಂಡಸ್ಟ್ರೀಸ್‌ನ ಶ್ರೀ ಕೆಂಜಿ ಮಟ್ಸುಶಿತಾ ಮತ್ತು ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿಯ ಸಿಇಒ ಶ್ರೀ ಮಿನೋರು ಹಟ್ಸುಡಾ ಅವರು ಒಪ್ಪಂದವನ್ನು ವಿನಿಮಯ ಮಾಡಿಕೊಂಡರು. ಪ್ರಸ್ತಾವಿತ ಘಟಕವು ನಿರ್ಮಾಣ ಸಲಕರಣೆಗಳ ಉದ್ಯಮಕ್ಕೆ ಅಗತ್ಯವಿರುವ ಹೈಡ್ರಾಲಿಕ್ ಪಂಪ್‌ಗಳು, ಸ್ವಿಂಗ್ ಮೋಟಾರ್‌ಗಳು ಮತ್ತು ಸಂಬಂಧಿತ ಬಿಡಿಭಾಗಗಳನ್ನು ತಯಾರಿಸಲಿದೆ. ಈ ಹೂಡಿಕೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲಾಗುವುದು; ಮೊದಲ ಹಂತದಲ್ಲಿ ₹200–400 ಕೋಟಿ ಮತ್ತು ಎರಡನೇ ಹಂತದಲ್ಲಿ ₹400–800 ಕೋಟಿ ಹೂಡಿಕೆಯಾಗಲಿದ್ದು, ಇದರಿಂದ ಸುಮಾರು 600 ಉತ್ತಮ ಗುಣಮಟ್ಟದ ಉತ್ಪಾದನಾ ಉದ್ಯೋಗಗಳು ಸೃಷ್ಟಿಯಾಗಲಿವೆ. 2012 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ, ಭಾರತದ ಎಕ್ಸ್‌ಕವೇಟರ್ ಹೈಡ್ರಾಲಿಕ್ ಪಂಪ್ ಮಾರುಕಟ್ಟೆಯಲ್ಲಿ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ವಿಸ್ತರಣೆಯು ಈ ಯಶಸ್ವಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದ್ದು, ಕರ್ನಾಟಕದ ನಿರ್ಮಾಣ ಸಲಕರಣೆಗಳು ಮತ್ತು ಬಂಡವಾಳ ಸರಕುಗಳ ಇಕೋಸಿಸ್ಟಮ್ ಇನ್ನಷ್ಟು ಸದೃಢಗೊಳಿಸಲಿದೆ. 2016 ರಿಂದೀಚೆಗೆ 101 ಜಪಾನೀಸ್ ಗ್ರೀನ್‌ಫೀಲ್ಡ್ ಯೋಜನೆಗಳು ಮತ್ತು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 525 ಕ್ಕೂ ಹೆಚ್ಚು ಜಪಾನೀಸ್ ಸಂಸ್ಥೆಗಳೊಂದಿಗೆ, ಕರ್ನಾಟಕವು ಜಪಾನೀಸ್ ಹೂಡಿಕೆಗಳಿಗೆ ನೆಚ್ಚಿನ ತಾಣವಾಗಿ ಮುಂದುವರಿದಿದೆ. ಯೋಜನೆಯು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ಭೂ ಹಂಚಿಕೆ, ಅನುಮೋದನೆಗಳು, ನಿರಾಕ್ಷೇಪಣಾ ಪತ್ರಗಳು ಮತ್ತು ಅನ್ವಯವಾಗುವ ಪ್ರೋತ್ಸಾಹಕಗಳನ್ನು ಒದಗಿಸಲು ನೆರವಾಗಲಿದೆ. ಇದೇ ಸಂದರ್ಭದಲ್ಲಿ, 2027 ರ ಏಪ್ರಿಲ್ 20 ರಿಂದ 22 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ 'ಜಾಗತಿಕ ಹೂಡಿಕೆದಾರರ ಸಮಾವೇಶ – ಇನ್ವೆಸ್ಟ್ ಕರ್ನಾಟಕ 2027' ರಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರು ಕವಾಸಕಿ ಸಂಸ್ಥೆಯ ಲೀಡರ್ಶಿಪ್ ಅನ್ನು ಆಹ್ವಾನಿಸಿದರು.
A major boost to Karnataka’s manufacturing and engineering ecosystem as Kawasaki Heavy Industries commits an investment of up to ₹800 crore over 10 years to expand Wipro Kawasaki Precision Machinery Pvt. Ltd. at Harohalli Industrial Area, Phase 5. The MoU was signed in Tokyo in the presence of Hon’ble Chief Minister Shri D. K. Shivakumar and Hon’ble Minister for Large & Medium Industries and Infrastructure Development Shri M. B. Patil. The agreement was exchanged by Dr. S. Selvakumar, IAS, Principal Secretary, Commerce and Industries Department, Mr. Kenji Matsushita of Kawasaki Heavy Industries and Mr. Minoru Hatsuda, CEO of Wipro Kawasaki Precision Machinery. The proposed facility will manufacture hydraulic pumps, swing motors and related components for the construction equipment industry. The investment will be implemented in two phases, with ₹200–400 crore in the first phase and ₹400–800 crore in the second, generating approximately 600 high-quality manufacturing jobs. Established in Bengaluru in 2012, Wipro Kawasaki Precision Machinery has emerged as a leading player in India's excavator hydraulic pump market. Its expansion builds on this successful partnership and further strengthens Karnataka's construction equipment and capital goods ecosystem. With 101 Japanese greenfield projects since 2016 and over 525 Japanese establishments operating in the State, Karnataka continues to be a preferred destination for Japanese investments. The Government of Karnataka will facilitate land allotment, approvals, clearances and applicable incentives to ensure the project progresses in a time-bound manner. The Chief Minister and Industries Minister also invited Kawasaki's leadership to participate in Global Investors Meet – Invest Karnataka 2027, scheduled to be held in Bengaluru from 20 to 22 April 2027.
1
1
13
2,739
Hon’ble Chief Minister Shri D. K. Shivakumar, along with Minister for Large & Medium Industries and Infrastructure Development Shri M. B. Patil and the Karnataka delegation, visited Tokyo Midtown Roppongi, a landmark mixed-use urban development, in collaboration with Nikken Sekkei, one of Japan’s leading architecture, engineering and urban-planning firms. During the visit, the delegation interacted with Mr. Wataru Tanaka, Senior Executive Officer and Head of the Global Business Department at Nikken Sekkei, who was closely involved in the project’s master planning. The team studied how the approximately 25-acre development transformed a former defence land parcel into a vibrant urban district, integrating offices, residences, retail, hospitality and cultural facilities while retaining nearly 50% of the area as open and green spaces. The discussions focused on integrated master planning, vertical development, efficient land use, pedestrian-friendly public spaces, seamless public transport connectivity and high-quality urban infrastructure. Completed in approximately 2.5 to 3 years, the project offers valuable insights into creating well-connected, liveable and sustainable urban spaces. The delegation also explored how these principles could be adapted to Bengaluru’s strategic redevelopment and future urban development projects, drawing on Japan’s experience in delivering world-class urban infrastructure and mixed-use developments.
5
16
1
127
10,327
A major boost to Karnataka’s manufacturing and engineering ecosystem as Kawasaki Heavy Industries commits an investment of up to ₹800 crore over 10 years to expand Wipro Kawasaki Precision Machinery Pvt. Ltd. at Harohalli Industrial Area, Phase 5. The MoU was signed in Tokyo in the presence of Hon’ble Chief Minister Shri D. K. Shivakumar and Hon’ble Minister for Large & Medium Industries and Infrastructure Development Shri M. B. Patil. The agreement was exchanged by Dr. S. Selvakumar, IAS, Principal Secretary, Commerce and Industries Department, Mr. Kenji Matsushita of Kawasaki Heavy Industries and Mr. Minoru Hatsuda, CEO of Wipro Kawasaki Precision Machinery. The proposed facility will manufacture hydraulic pumps, swing motors and related components for the construction equipment industry. The investment will be implemented in two phases, with ₹200–400 crore in the first phase and ₹400–800 crore in the second, generating approximately 600 high-quality manufacturing jobs. Established in Bengaluru in 2012, Wipro Kawasaki Precision Machinery has emerged as a leading player in India's excavator hydraulic pump market. Its expansion builds on this successful partnership and further strengthens Karnataka's construction equipment and capital goods ecosystem. With 101 Japanese greenfield projects since 2016 and over 525 Japanese establishments operating in the State, Karnataka continues to be a preferred destination for Japanese investments. The Government of Karnataka will facilitate land allotment, approvals, clearances and applicable incentives to ensure the project progresses in a time-bound manner. The Chief Minister and Industries Minister also invited Kawasaki's leadership to participate in Global Investors Meet – Invest Karnataka 2027, scheduled to be held in Bengaluru from 20 to 22 April 2027.
5
36
2
308
13,341
ಕರ್ನಾಟಕದಲ್ಲಿ ಹೂಡಿಕೆ ಮತ್ತು ಕೈಗಾರಿಕಾ ಸಹಭಾಗಿತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಪಾನ್‌ಗೆ ಅಧಿಕೃತ ಭೇಟಿ ನೀಡಿರುವ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು, ಟೋಕಿಯೊದಲ್ಲಿ ಜಪಾನ್‌ಗೆ ಭಾರತದ ರಾಯಭಾರಿಯಾದ ಶ್ರೀಮತಿ ನಗ್ಮಾ ಮೊಹಮ್ಮದ್ ಮಲ್ಲಿಕ್ ಅವರನ್ನು ಭೇಟಿಯಾದರು. ಕರ್ನಾಟಕ ಮತ್ತು ಜಪಾನ್ ನಡುವಿನ ಕೈಗಾರಿಕಾ ಸಹಭಾಗಿತ್ವವನ್ನು ಬಲಪಡಿಸುವುದು, ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವುದು ಹಾಗೂ ಜಪಾನ್ ಮಾರುಕಟ್ಟೆಯಲ್ಲಿ ಕರ್ನಾಟಕದ ಕೈಗಾರಿಕೆಗಳಿಗೆ ಹೆಚ್ಚಿನ ರಫ್ತು ಅವಕಾಶಗಳನ್ನು ಕಲ್ಪಿಸುವ ಕುರಿತು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಜಪಾನ್‌ನಿಂದ ಕರ್ನಾಟಕಕ್ಕೆ ಹೆಚ್ಚಿನ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಂಭಾವ್ಯ ಜಪಾನಿ ಹೂಡಿಕೆದಾರರೊಂದಿಗೆ ಸಂಪರ್ಕ ಕಲ್ಪಿಸಲು ಹಾಗೂ ಎರಡೂ ಪ್ರದೇಶಗಳ ಕೈಗಾರಿಕಾ ವಲಯಗಳ ನಡುವೆ ಬಲವಾದ ಪಾಲುದಾರಿಕೆಯನ್ನು ನಿರ್ಮಿಸಲು ರಾಯಭಾರ ಕಚೇರಿಯ ಸಹಕಾರ ಕೋರಿದರು. ಆರ್ಥಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು, ಹೂಡಿಕೆಗಳನ್ನು ಉತ್ತೇಜಿಸಲು ಮತ್ತು ಕೈಗಾರಿಕಾ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ಕರ್ನಾಟಕ ಸರ್ಕಾರ ಹಾಗೂ ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನಡುವೆ ಮತ್ತಷ್ಟು ನಿಕಟವಾದ ಸಾಂಸ್ಥಿಕ ಸಮನ್ವಯ ಸಾಧಿಸುವ ಕುರಿತೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
Hon’ble Chief Minister Shri D. K. Shivakumar met Ms. Nagma Mohamed Mallick, Ambassador of India to Japan, in Tokyo during his official visit to Japan to promote investment and industrial partnerships with Karnataka. The meeting focused on strengthening industrial collaboration between Karnataka and Japan, enhancing bilateral trade and expanding export opportunities for Karnataka-based industries in the Japanese market. The Chief Minister emphasised the importance of attracting greater Foreign Direct Investment (FDI) from Japan into Karnataka and sought the Embassy’s support in facilitating engagements with prospective Japanese investors and building stronger partnerships between the industrial ecosystems of both regions. The discussions also explored opportunities for closer institutional coordination between the Government of Karnataka and the Indian Embassy in Japan to deepen economic engagement, promote investments and advance industrial cooperation.
3
1
18
3,537

11
1
66
7,698
ಜಪಾನ್‌ನಲ್ಲಿ ಕನ್ನಡಿಗರೊಂದಿಗೆ ಆತ್ಮೀಯ ಭೇಟಿ 💛❤️ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಜಪಾನ್ ಪ್ರವಾಸದ ಸಂದರ್ಭದಲ್ಲಿ ಜಪಾನ್ ಕನ್ನಡ ಸಂಘ ಹಾಗೂ ಟೋಕಿಯೋ ಕನ್ನಡ ಬಳಗದ ಸದಸ್ಯರನ್ನು ಭೇಟಿಯಾಗಿ, ಅವರೊಂದಿಗೆ ಆತ್ಮೀಯವಾಗಿ ಸಮಯ ಕಳೆದರು. ಈ ವೇಳೆ ಅವರ ಯೋಗಕ್ಷೇಮ ವಿಚಾರಿಸಿ, ಜಪಾನ್‌ನಲ್ಲಿನ ಜೀವನ, ಅಲ್ಲಿನ ಕನ್ನಡಿಗರ ಚಟುವಟಿಕೆಗಳು ಹಾಗೂ ತಾಯ್ನಾಡಿನೊಂದಿಗಿನ ಒಡನಾಟದ ಕುರಿತು ಮಾತುಕತೆ ನಡೆಸಿದರು. ನಾಡಿನಿಂದ ಎಷ್ಟೇ ದೂರವಿದ್ದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿ ಕನ್ನಡಿಗರನ್ನು ಒಂದೇ ಬಾಂಧವ್ಯದಲ್ಲಿ ಬೆಸೆಯುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕನ್ನಡದ ಈ ನಂಟು ನಮ್ಮವರನ್ನು ಹತ್ತಿರವಾಗಿರಿಸುತ್ತದೆ.
4
34
1
304
9,133