DCP SouthEast BCP (@DCPSEBCP) header
DCP SouthEast BCP (@DCPSEBCP) profile picture

Deputy Commissioner of Police South-East division Bengaluru City Police

Bengaluru, India
Joined September 2014
"ನಮ್ಮ ಸಮಾಜವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ನಿಮ್ಮ ಸಹಕಾರ ಅತ್ಯಂತ ಮುಖ್ಯ!" ಕರ್ನಾಟಕ ಪೊಲೀಸ್ ಇಲಾಖೆಯಿಂದ KSP Mobile App ನಲ್ಲಿ “Drug-Free Karnataka” ಎಂಬ ಹೊಸ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಡ್ರಗ್ಸ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರು ಸಂಪೂರ್ಣ ಗೌಪ್ಯವಾಗಿ ಸಲ್ಲಿಸಬಹುದು. ಮಾಹಿತಿದಾರರ ವಿವರಗಳನ್ನು ಕಡ್ಡಾಯವಾಗಿ ರಹಸ್ಯವಾಗಿರಿಸಲಾಗುತ್ತದೆ. ಬಾಧಿತರಿಗೆ ನೆರವು ಬೇಕಾದಲ್ಲಿ, ನಿಮ್ಹಾನ್ಸ್ ಸಹಾಯವಾಣಿ #14416 ಗೆ ಕರೆ ಮಾಡಿ. ಡ್ರಗ್ಸ್ ಸಂಬಂಧಿತ ಅಪರಾಧಗಳ ಬಗ್ಗೆ ತಕ್ಷಣವೇ #1933 ಗೆ ಕರೆ ಮಾಡಿ ಅಥವಾ #112 ತುರ್ತುಸೇವೆಯನ್ನು ಸಂಪರ್ಕಿಸಿ. 👉 Say No to Drugs @DgpKarnataka @BlrCityPolice @jt_cpeastbcp #DrugFreeKarnataka #SayNoToDrugs #KarnatakaPolice #SafeSociety #SouthEastDivision
2
16
29
7,336
ದಕ್ಷಿಣ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಶ್ರೀ. ಸಿ. ವಂಶಿ ಕೃಷ್ಣ, ಐಪಿಎಸ್ ಅವರಿಗೆ ಆತ್ಮೀಯ ಸ್ವಾಗತ ಮತ್ತು ಶುಭಾಶಯಗಳು. ಕೋರಮಂಗಲ ಕಚೇರಿಯಲ್ಲಿ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
1
4
12
1,141
A warm welcome and best wishes to Sri. C. Vamsi Krishna, IPS, on assuming charge as the Commissioner of Police, South Bengaluru City. He officially took charge at the Koramangala Office
2
2
79
DCP SouthEast BCP retweeted
@hsrlayoutps ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿರುವ ಮೊಬೈಲ್‌ಗಳನ್ನು CEIR ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಲಾಯಿತು. 📱✨ 💙 #CEIR #LostMobileRecovered #PoliceForPublic @DCPSEBCP @BlrCityPolice @AddlCPEast @DgpKarnataka @DCPSEBCP
2
4
162
ಪುಟ್ಟ ಧ್ವನಿಗಳು. ದೊಡ್ಡ ಹಕ್ಕುಗಳು. ಉಜ್ವಲ ಭವಿಷ್ಯ! ಪ್ರತಿಯೊಂದು ಮಗುವಿಗೂ ನಗು, ಕಲಿಕೆ, ಪ್ರೀತಿ ಮತ್ತು ಸುರಕ್ಷತೆಯಿಂದ ಕೂಡಿದ ಬಾಲ್ಯ ಸಿಗುವುದು ಅದರ ಹಕ್ಕು. ಈ ವಿಶ್ವ ಮಕ್ಕಳ ದಿನದಂದು, ಪ್ರತಿಯೊಂದು ಮಗುವಿನ ಧ್ವನಿಗೆ ಕಿವಿಯಾಗೋಣ, ಪ್ರತಿಯೊಂದು ಕನಸಿಗೆ ಬೆಲೆ ನೀಡೋಣ ಮತ್ತು ಪ್ರತಿಯೊಂದು ಹಕ್ಕನ್ನು ರಕ್ಷಿಸೋಣ. ಏಕೆಂದರೆ ಮಕ್ಕಳಿಗಾಗಿ ಸುರಕ್ಷಿತ ಜಗತ್ತನ್ನು ನಿರ್ಮಿಸುವುದು ನಮ್ಮೆಲ್ಲರಿಂದಲೇ ಪ್ರಾರಂಭವಾಗುತ್ತದೆ! ಮಕ್ಕಳ ಸಹಾಯವಾಣಿ: 1098 | ತುರ್ತು ಸಹಾಯವಾಣಿ: 112 Little Voices. Big Rights. Brighter Futures! Every child deserves a childhood filled with laughter, learning, love and safety. This World Children’s Day, let's make every child's voice heard, every dream valued and every right protected. Because a safer world for children begins with all of us! Child Helpline: 1098 | Emergency: 112 #WorldChildrensDay #MyDayMyRights #ChildSafety #BengaluruCityPolice #BengaluruTrafficPolice
10
12
1,951
ಜಿ.ಟಿ.ಎ. (GTA) ಗೇಮ್‌ನಲ್ಲಿ ನೀವು ಬ್ಯಾಕಪ್‌ಗಾಗಿ ಕರೆ ಮಾಡುತ್ತೀರಿ. ಬೆಂಗಳೂರಿನಲ್ಲಿ, ನೀವು 112ಕ್ಕೆ ಡಯಲ್ ಮಾಡಿ! ಇಲ್ಲಿ ಚೀಟ್ ಕೋಡ್‌ಗಳಿಲ್ಲ. ಎರಡನೇ ಅವಕಾಶಗಳಿಲ್ಲ. ನಿಜ ಜೀವನದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ, ಬೆಂಗಳೂರು ನಗರ ಪೊಲೀಸರು ಕೇವಲ ಒಂದು ಕರೆಯ ದೂರದಲ್ಲಿದ್ದಾರೆ. ಅಪಘಾತಗಳಿಂದ ಹಿಡಿದು ಯಾವುದೇ ತುರ್ತು ಸಂದರ್ಭಗಳವರೆಗೆ, ಸಹಾಯ ನಿಮ್ಮ ಕೈಗೆಟಕುವ ದೂರದಲ್ಲಿದೆ. ನಿಜವಾದ ತುರ್ತು ಪರಿಸ್ಥಿತಿ. ನಿಜವಾದ ಹೀರೋಗಳು. ನಿಜವಾದ ಬ್ಯಾಕಪ್! In GTA, you call for backup. In Bengaluru, you dial 112! No cheat codes. No second chances. When real-life emergencies strike, Bengaluru City Police is just one call away. From accidents to emergencies, help is within reach. Real emergencies. Real heroes. Real backup! #Dial112 #BengaluruCityPolice #Namma112 #EmergencyResponse @CPBlr @DgpKarnataka @KarnatakaCops @Jointcptraffic @CMofKarnataka @PriyankKharge
5
26
51
10,239
ಬೆಂಗಳೂರು ನಗರದ ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ಮಾನ್ಯ ಮುಖ್ಯ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ವಿಭು ಬಖ್ರು; ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಐ.ಎ.ಎಸ್.; ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ರಾಜೇಂದರ್ ಕುಮಾರ್ ಕಟಾರಿಯಾ, ಐ.ಎ.ಎಸ್.; ಹಾಗೂ ಕರ್ನಾಟಕ ಸರ್ಕಾರದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಮಾನ್ಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಗಳು, ಪರಿಣಾಮಕಾರಿ ಸಮನ್ವಯ, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಕೇಂದ್ರಿತ ಪೊಲೀಸ್ ಸೇವೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದವು. Shri R. Hithendra, IPS, the newly appointed Additional Director General & Chief Commissioner of Police, Bengaluru City, paid courtesy visits to Hon’ble Justice Vibhu Bakhru, Chief Justice of the High Court of Karnataka; Dr. Shalini Rajneesh, IAS, Chief Secretary to the Government of Karnataka; Shri Rajender Kumar Kataria, IAS, Additional Chief Secretary, Home Department; and Shri Krishna Byre Gowda, Hon’ble Minister for Greater Bengaluru Development and Parliamentary Affairs, Government of Karnataka. The visits marked formal interactions following his assumption of charge as the Chief Commissioner of Police, Bengaluru City, reaffirming the commitment to effective coordination, public safety and citizen-centric policing. #BengaluruCityPolice #KarnatakaPolice #ChiefCommissionerOfPolice #PublicSafety @CPBlr @DgpKarnataka @KarnatakaCops @Jointcptraffic @CMofKarnataka @PriyankKharge
3
17
85
10,115
ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ನೂತನವಾಗಿ ನಿಯೋಜನೆಗೊಂಡಿರುವ ಐವರು ಪೊಲೀಸ್ ಆಯುಕ್ತರಾದ ಶ್ರೀ ಲಾಭೂ ರಾಮ್, ಐ.ಪಿ.ಎಸ್. (ಕೇಂದ್ರ ವಿಭಾಗ), ಡಾ. ಪಿ. ಎಸ್. ಹರ್ಷ, ಐ.ಪಿ.ಎಸ್. (ಪೂರ್ವ ವಿಭಾಗ), ಶ್ರೀ ವಿಕಾಸ್ ಕುಮಾರ್ ವಿಕಾಸ್, ಐ.ಪಿ.ಎಸ್. (ಪಶ್ಚಿಮ ವಿಭಾಗ), ಡಾ. ಎಂ. ಬಿ. ಬೋರಲಿಂಗಯ್ಯ, ಐ.ಪಿ.ಎಸ್. (ಉತ್ತರ ವಿಭಾಗ) ಮತ್ತು ಶ್ರೀ ಸಿ. ವಂಶಿ ಕೃಷ್ಣ, ಐ.ಪಿ.ಎಸ್. (ದಕ್ಷಿಣ ವಿಭಾಗ) ಅವರೊಂದಿಗೆ ಬೆಂಗಳೂರಿನ ಲೋಕಭವನದಲ್ಲಿ ಕರ್ನಾಟಕದ ಮಾನ್ಯ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಅಧಿಕೃತವಾಗಿ ಭೇಟಿ ಮಾಡಿದರು. ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್‌ಗಳಾಗಿ ಪುನರ್‌ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಸಮನ್ವಯದ ಪೊಲೀಸ್ ವ್ಯವಸ್ಥೆ, ಪರಿಣಾಮಕಾರಿ ಕಾನೂನು ಪಾಲನೆ ಮತ್ತು ಸಾರ್ವಜನಿಕ ಸುರಕ್ಷತೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು. Shri R. Hithendra, IPS, Additional Director General & Chief Commissioner of Police, Bengaluru City, along with the five newly appointed Commissioners of Police — Shri Labhu Ram, IPS (Central), Dr. P. S. Harsha, IPS (East), Shri Vikash Kumar Vikash, IPS (West), Dr. M. B. Boralingaiah, IPS (North), and Shri C. Vamsi Krishna, IPS (South) — paid a official visit to Hon’ble Governor of Karnataka, Dr. Sudha Yadav, at Lok Bhavan, Bengaluru. The visit marked a formal interaction following the restructuring of Bengaluru City Police into five commissionerates, reaffirming the commitment to coordinated policing, effective law enforcement and public safety. #BengaluruCityPolice #KarnatakaPolice #GovernorOfKarnataka #PublicSafety
2
19
1
70
7,477
DCP SouthEast BCP retweeted
ಬೆಂಗಳೂರಿನಲ್ಲಿ ನಡೆಯುತ್ತಿರುವ 27 ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್ ಶಿಪ್-2026 ರ ಉದ್ಘಾಟನಾ ಸಮಾರಂಭವನ್ನು ಮಾನ್ಯ ಗೃಹಸಚಿವರಾದ ಶ್ರೀ @PriyankKharge ರವರು,ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP ರವರು,ಶ್ರೀ ರಾಜೇಂದರ್ ಕುಮಾರ್ ಕಟಾರಿಯಾ, ಐಎಎಸ್. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,ಒಳಾಡಳಿತ ಇಲಾಖೆ. (1/2)
3
44
33
3,841
DCP SouthEast BCP retweeted
2
69
3
58
22,936
📱🔐 ನಿಮ್ಮ ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ, ತಕ್ಷಣವೇ ಆ ಮೊಬೈಲ್‌ನಲ್ಲಿ ಬಳಸುತ್ತಿದ್ದ ಎಲ್ಲಾ ಖಾತೆಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಿ. ಎಚ್ಚರಿಕೆಯಿಂದಿರಿ, ಸೈಬರ್ ಸುರಕ್ಷಿತರಾಗಿರಿ! #CyberSafety #StaySafe #cyberawareness
2
5
379
ನೂತನ ನಾಯಕತ್ವಕ್ಕೆ ಗೌರವಪೂರ್ವಕ ಸ್ವಾಗತ! ಬೆಂಗಳೂರು ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ನಿಯೋಜನೆಗೊಂಡಿರುವ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೌರವ ವಂದನೆ (ಗಾರ್ಡ್ ಆಫ್ ಆನರ್) ಸ್ವೀಕರಿಸಿದರು. ಈ ಸಮಾರಂಭದಲ್ಲಿ ಜಂಟಿ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು (ಡಿಸಿಪಿ), ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಕೇಂದ್ರಿತ ಸೇವೆಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಬದ್ಧತೆಯಲ್ಲಿ ಹೊಸ ಅಧ್ಯಾಯಕ್ಕೆ ಈ ಸಮಾರಂಭ ನಾಂದಿ ಹಾಡಿತು. A Ceremonial Welcome to New Leadership! Sri R. Hithendra, IPS, the newly appointed Chief Commissioner of Police, Bengaluru City, received the ceremonial Guard of Honour at the Police Commissioner’s Office today. The ceremony was attended by Commissioners of Police, Deputy Commissioners of Police (DCPs), Assistant Commissioners of Police (ACPs), and other senior police officers. The ceremony marked the beginning of a new chapter in Bengaluru City Police’s commitment to effective policing, public safety and citizen-centric service. #BengaluruCityPolice #KarnatakaPolice #NewLeadership #GuardOfHonour #PublicSafety @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
3
18
1
93
16,334
Strength isn't just about being strong. It's about standing up for others, showing kindness and making a difference every day. To every man who protects, supports, inspires and leads by example, your efforts matter, and your contributions deserve recognition. Bengaluru City Police wishes everyone a Happy International Men's Day! ಶಕ್ತಿ ಎಂದರೆ ಕೇವಲ ಬಲಶಾಲಿಯಾಗಿರುವುದಲ್ಲ. ಇತರರಿಗಾಗಿ ನಿಲ್ಲುವುದು, ದಯೆ ತೋರುವುದು ಮತ್ತು ಪ್ರತಿದಿನವೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ನಿಜವಾದ ಶಕ್ತಿ. ಇತರರನ್ನು ರಕ್ಷಿಸುವ, ಬೆಂಬಲಿಸುವ, ಪ್ರೇರೇಪಿಸುವ ಮತ್ತು ಮಾದರಿಯಾಗಿ ಮುನ್ನಡೆಯುವ ಪ್ರತಿಯೊಬ್ಬ ಪುರುಷನ ಶ್ರಮವೂ ಮುಖ್ಯವಾಗಿದೆ ಹಾಗೂ ಅವರ ಕೊಡುಗೆಗಳು ಗೌರವಕ್ಕೆ ಅರ್ಹವಾಗಿವೆ. ಬೆಂಗಳೂರು ನಗರ ಪೊಲೀಸ್ ಇಲಾಖೆಯ ವತಿಯಿಂದ ಎಲ್ಲರಿಗೂ ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು! #InternationalMensDay #MensDay2026 #BengaluruCityPolice @CPBlr @DgpKarnataka @KarnatakaCops @Jointcptraffic @CMofKarnataka @PriyankKharge
4
34
1
49
3,180
@sgpalyaps ವ್ಯಾಪ್ತಿಯ ರಾಗಿ ಗುಡ್ಡ ಕಮಾನ ಎದುರು ಉದಯ್ 21 ವರ್ಷ ಬಸ್ ಹತ್ತುವಾಗ , ಟೈರ್ ಕೆಳಗೆ ಸಿಲುಕಿ ಅವರ ಕಾಲಿಗೆ ಗಾಯವಾಗಿದ್ದು ಸ್ಥಳೀಯರು 112 ಗೆ ಕರೆ ಮಾಡಿ ಮಾಹಿತಿ ನೀಡಿದ ತಕ್ಷಣ ನಮ್ಮ ಹೊಯ್ಸಳ-213 ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಯುವಕನನ್ನು ಹೊಯ್ಸಳ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸ ಲಾಯಿತು.
3
5
6
410
ಬದಲಾಗುತ್ತಿರುವ ನಾಯಕತ್ವ | ಬೆಂಗಳೂರು ನಗರ ಪೊಲೀಸ್ ಬೆಂಗಳೂರು ನಗರ ಪೊಲೀಸ್ ಇಲಾಖೆಯ ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಪೊಲೀಸ್ ಆಯುಕ್ತರಾಗಿ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಅಧಿಕಾರ ಸ್ವೀಕರಿಸಿದ್ದು, ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರು ಅಧಿಕಾರ ಹಸ್ತಾಂತರಿಸಿದರು. ಬೆಂಗಳೂರಿನಲ್ಲಿ ಮಾದರಿ ನಾಯಕತ್ವ ನೀಡಿ, ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿ, ಪೊಲೀಸ್ ವ್ಯವಸ್ಥೆಗೆ ಗಣನೀಯ ಕೊಡುಗೆ ನೀಡಿದ ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರಿಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಅವರ ಮುಂದಿನ ಜವಾಬ್ದಾರಿಗೆ ಶುಭ ಹಾರೈಸುತ್ತದೆ. ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರಿಗೆ ಆದರದ ಸ್ವಾಗತ ಕೋರುತ್ತಾ, ಸಾರ್ವಜನಿಕ ಸುರಕ್ಷತೆ, ಪರಿಣಾಮಕಾರಿ ಪೊಲೀಸ್ ಸೇವೆ ಮತ್ತು ನಾಗರಿಕ ಕೇಂದ್ರಿತ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ನಾಯಕತ್ವದ ಮೇಲೆ ವಿಶ್ವಾಸವಿಡಲಾಗಿದೆ. ಬೆಂಗಳೂರು ನಗರದ ರಕ್ಷಣೆ ಮತ್ತು ಸೇವೆಗಾಗಿ ಅಚಲ ಬದ್ಧತೆಯೊಂದಿಗೆ ನಾಯಕತ್ವದ ಹೊಸ ಅಧ್ಯಾಯ. Change of Guard | Bengaluru City Police Shri Seemant Kumar Singh, IPS, formally handed over the baton of leadership to Shri R. Hithendra, IPS, who assumes charge as the new Additional Director General & Chief Commissioner of Police, Bengaluru City. Bengaluru City Police expresses its sincere gratitude to Sri Seemanth Kumar Singh, IPS, for his exemplary leadership, dedicated service and contributions to policing in Bengaluru, and wishes him continued success in his new role as Additional Director General of Police, Karnataka State Fire & Emergency Services. We extend a warm welcome to Sri R. Hithendra, IPS, and look forward to his leadership in further strengthening public safety, effective policing and citizen-centric services. A new chapter of leadership, with an unwavering commitment to serving and safeguarding Bengaluru. #BengaluruCityPolice #KarnatakaPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
13
29
121
9,612
ಬೆಂಗಳೂರು ನಗರ ಪೊಲೀಸ್ ಇಲಾಖೆಯ ಹೆಮ್ಮೆಯ ಮೈಲಿಗಲ್ಲು! ಸಾರ್ವಜನಿಕ ಸಂವಹನದಲ್ಲಿ ಹೊಸ ಅಧ್ಯಾಯ. ಬೆಂಗಳೂರು ನಗರದೊಂದಿಗೆ ಮತ್ತಷ್ಟು ಗಟ್ಟಿಯಾದ ನಂಟು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ 2026ರ ನವೆಂಬರ್ 6ರಂದು ಬಿ.ಸಿ.ಪಿ. ಸ್ಟುಡಿಯೋವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಮಂಡೆ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ಈ ಉಪಕ್ರಮವು, ಕಾರ್ಲೆ ಇನ್ಫ್ರಾ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಸಾಕಾರಗೊಂಡಿದೆ. ಉತ್ತಮ ಹಾಗೂ ಸುರಕ್ಷಿತ ಬೆಂಗಳೂರು ನಿರ್ಮಾಣಕ್ಕಾಗಿ ಈ ಹೆಜ್ಜೆ ಇಡಲಾಗಿದೆ. ಪೊಲೀಸ್ ವ್ಯವಸ್ಥೆ ಮತ್ತು ಸಾರ್ವಜನಿಕ ಸಂವಹನ ಹೇಗೆ ಕೈಜೋಡಿಸಬಹುದು ಎಂಬುದನ್ನು ಬಿ.ಸಿ.ಪಿ. ಸ್ಟುಡಿಯೋ ಹೊಸ ರೀತಿಯಲ್ಲಿ ಮರುರೂಪಿಸುತ್ತಿದೆ. ನಾಗರಿಕರ ಸಹಭಾಗಿತ್ವವನ್ನು ಗಟ್ಟಿಗೊಳಿಸಲು, ಸಾರ್ವಜನಿಕ ಜಾಗೃತಿ ಮೂಡಿಸಲು ಮತ್ತು ಸುರಕ್ಷತಾ ಸಂದೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಇದು ಆಧುನಿಕ ವೇದಿಕೆಯಾಗಲಿದೆ. ಹೊಸ ಜಾಗ. ಒಂದೇ ಗುರಿ. ಸುರಕ್ಷಿತ ಹಾಗೂ ಉತ್ತಮ ಬೆಂಗಳೂರು ನಿರ್ಮಾಣಕ್ಕಾಗಿ. ಜಾಗೃತಿ ಮೂಡಿಸುವುದು. ಸುರಕ್ಷತೆ ಖಚಿತಪಡಿಸುವುದು. A new chapter in public communication. A stronger connection with Bengaluru. A proud milestone for Bengaluru City Police! The BCP Studio was officially inaugurated on 6 November 2026 by Shri Seemant Kumar Singh, IPS, Commissioner of Police, Bengaluru City, in the presence of senior police officers. An initiative of Monday Ventures Pvt. Ltd., brought to life in collaboration with Karle Infra Pvt. Ltd. For a Better Safer Bengaluru BCP Studio reimagines how policing and public communication come together.. creating a modern creative space to strengthen citizen engagement, amplify public awareness, and make safety communication more impactful. A new creative space. A shared vision. For a Safer, Better Bengaluru. Not just a studio, but a legacy.. one that will remain an integral part of Bengaluru City Police for generations to come. Creating Awareness. Ensuring Safety. #BengaluruCityPolice #BCPStudio #PublicAwareness #CitizenEngagement #SaferBengaluru @CPBlr @seemantsingh96 @DgpKarnataka @KarnatakaCops @Jointcptraffic @CMofKarnataka
1
13
42
9,085
ಮಕ್ಕಳ ಲೈಂಗಿಕ ಶೋಷಣೆ, ದೌರ್ಜನ್ಯ ಮತ್ತು ಹಿಂಸಾಚಾರ ತಡೆಗಟ್ಟುವಿಕೆ ಹಾಗೂ ಪುನಶ್ಚೇತನಕ್ಕಾಗಿ ವಿಶ್ವ ದಿನ ​ಪ್ರತಿಯೊಂದು ಮಗುವೂ ನಗು, ವಾತ್ಸಲ್ಯ ಮತ್ತು ಸುರಕ್ಷತೆಯಿಂದ ಕೂಡಿದ ಬಾಲ್ಯವನ್ನು ಹೊಂದುವ ಹಕ್ಕನ್ನು ಹೊಂದಿದೆ. ಬಾಲ್ಯದಲ್ಲಿ ಯಾವುದೇ ರೀತಿಯ ದೌರ್ಜನ್ಯಕ್ಕೆ ಆಸ್ಪದವಿಲ್ಲ. ಮಕ್ಕಳ ಅಹವಾಲುಗಳನ್ನು ಆಲಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಮತ್ತು ಅವರ ರಕ್ಷಣೆಗೆ ನಿಲ್ಲಿ. ಯಾವುದೇ ಅಹಿತಕರ ಅಥವಾ ಅನುಚಿತ ಘಟನೆಗಳು ಕಂಡುಬಂದಲ್ಲಿ ಮೌನವಹಿಸದೆ ತಕ್ಷಣವೇ ವರದಿ ಮಾಡಿ. ತುರ್ತು ಸೇವೆ: 112 | ಮಕ್ಕಳ ಸಹಾಯವಾಣಿ: 1098 World Day for the Prevention of and Healing from Child Sexual Exploitation, Abuse and Violence Every child deserves a childhood filled with laughter, love and safety. Abuse has no place in childhood. Listen to them, believe them and stand up for them. See something wrong? Don't stay silent. Emergency: 112 | Child Helpline: 1098 #WorldChildProtectionDay #ChildSafety #BengaluruTrafficPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
12
12
2,757
DCP SouthEast BCP retweeted
3
87
1
77
12,942
ಗೌರವಕ್ಕೆ ಅರ್ಹವಾದ ಪ್ರಾಮಾಣಿಕತೆ! ​ಆಟೋ-ರಿಕ್ಷಾ ಚಾಲಕರಾದ ಶ್ರೀ ಶಿವರಾಜು ಬಿ.ಸಿ. ಅವರಿಗೆ ಬೆಲೆಬಾಳುವ ವಸ್ತುಗಳು ಮತ್ತು ವಿದೇಶಿ ಕರೆನ್ಸಿ ಇದ್ದ ಪರ್ಸ್ ದೊರೆತಿದ್ದು, ಅವರು ಅದನ್ನು ತಕ್ಷಣವೇ ಬೆಂಗಳೂರು ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ​ಹಲಸೂರು ಪೊಲೀಸರ ಸಹಾಯದಿಂದ ಪರ್ಸ್‌ನ ನಿಜವಾದ ವಾರಸುದಾರರನ್ನು ಪತ್ತೆಹಚ್ಚಲಾಯಿತು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಪರ್ಸ್ ಅನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಿಂದಿರುಗಿಸಿದರು. ​ಶ್ರೀ ಶಿವರಾಜು ಅವರ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಗುರುತಿಸಿ, ಅವರಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು. ​ಒಂದು ಸರಳ ಪ್ರಾಮಾಣಿಕ ನಡೆ, ಎಲ್ಲರಿಗೂ ಮಾದರಿ! Honesty That Deserves Recognition! Auto-rickshaw driver Mr. Shivraju B.C. found a purse containing valuables and foreign currency and promptly handed it over to Bengaluru City Police. With the assistance of Halasuru Police, the rightful owner was traced, and the purse was safely returned by the Commissioner of Police, Bengaluru City. In recognition of his honesty and integrity, Mr. Shivraju was honoured with a Letter of Appreciation. A simple act of honesty, an example for all! #BengaluruCityPolice #Honesty #Community @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
1
32
1
72
5,767
ಶಕ್ತಿ, ಶಿಸ್ತು ಮತ್ತು ದೃಢಸಂಕಲ್ಪದ ಪ್ರದರ್ಶನ! ​ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದ್ದ 11ನೇ ಅಖಿಲ ಭಾರತ ಪೊಲೀಸ್ ಜೂಡೋ ಕ್ಲಸ್ಟರ್ ಚಾಂಪಿಯನ್‌ಶಿಪ್ - 2026ರಲ್ಲಿ, ಕರ್ನಾಟಕ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್ ಶ್ರೀಮತಿ/ಕುಮಾರಿ ಅಂಜು ಎಸ್. ಅವರು ಪೆನ್‌ಕಾಕ್ ಸಿಲಾಟ್ ಸೋಲೋ (ಮಹಿಳೆಯರ ವಿಭಾಗ) ಹಾಗೂ ಟ್ಯಾಂಡಿಂಗ್ (ಮಹಿಳೆಯರ - 45 ಕೆಜಿ ವಿಭಾಗ) ಸ್ಪರ್ಧೆಗಳೆರಡರಲ್ಲೂ ತೃತೀಯ ಸ್ಥಾನವನ್ನು ಪಡೆದು ಸಾಧನೆಗೈದಿದ್ದಾರೆ. ​ಈ ಪ್ರಶಂಸನೀಯ ಸಾಧನೆಗಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಲಭಿಸಲಿ ಎಂದು ಶುಭ ಹಾರೈಸುತ್ತದೆ. Strength, discipline and determination on display! Constable Anju S. of Karnataka Police secured Third Place in both Pencak Silat Solo (Women) and Tanding (Women – 45 kg) at the 11th All India Police Judo Cluster Championship 2026, held in Hyderabad. Bengaluru City Police congratulates her on this commendable achievement and wishes her continued success! #KarnatakaPolice #BengaluruCityPolice #PoliceSports #ProudMoment @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
24
21
3,262
“ಸನ್ಮಿತ್ರ” ಮಾದಕ ವ್ಯಸನದ ಸುಳಿಯಲ್ಲಿ ಸಿಲುಕಿದವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಿ, ಅವರನ್ನು ವ್ಯಸನ ಮುಕ್ತರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಆರಂಭಿಸಿರುವ ವಿಶೇಷ ಸಾಮಾಜಿಕ ಕಾರ್ಯಕ್ರಮವೇ “ಸನ್ಮಿತ್ರ”. ಬನ್ನಿ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ!
4
7
422