ಗೊಲ್ಲ, ಕಾಡುಗೊಲ್ಲರ ಎಸ್ಟಿ ಮೀಸಲಾತಿಗೆ ಕಾನೂನು ತಜ್ಞರ ಜತೆ ಚರ್ಚೆ
ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿ ಕಲ್ಪಿಸುವಂತೆ ಈ ಹಿಂದೆ ನಮ್ಮ ಸರ್ಕಾರದ ಮೂಲಕ ಕೇಂದ್ರಕ್ಕೆ ಕಳುಹಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಇದು ನೋವಿನ ಸಂಗತಿ. ಚುನಾವಣಾ ನೀತಿಸಂಹಿತೆ ಇಲ್ಲದೇ ಇದ್ದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚಿಸಿ, ಕಾನೂನು ತಜ್ಞರ ಸಲಹೆ ಪಡೆದು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು.
ಕಳೆದ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರು "ಕಾಡುಗೊಲ್ಲರ ಎಸ್ಟಿ ಪ್ರಮಾಣಪತ್ರ ನನ್ನ ಜೇಬಿನಲ್ಲಿದೆ. ನಾನು ಮೀಸಲಾತಿ ಮಾಡಿಸುತ್ತೇನೆ" ಎಂದು ಭರವಸೆ ನೀಡಿದ್ದರು. ಆದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಯಿತೇ? ನಾವು ಜನರಿಗೆ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ.
ಗೊಲ್ಲ ಸಮುದಾಯದ ಮುಖಂಡರು ತಮ್ಮನ್ನು ಭೇಟಿಯಾಗಿ ಮೀಸಲಾತಿ ವಿಚಾರ ಪ್ರಸ್ತಾಪಿಸಿದ್ದಾರೆ. ಗೊಲ್ಲರು, ಕಾಡುಗೊಲ್ಲರು, ಒಕ್ಕಲಿಗರು, ವೀರಶೈವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುವುದು ಸರ್ಕಾರದ ಆಶಯ. 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಎಂಬ ತತ್ವದಡಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ಹಿರಿಯೂರು ಕ್ಷೇತ್ರದಲ್ಲಿ 40 ಸಾವಿರ ಜನ ಕಾಡುಗೊಲ್ಲರು ಇದ್ದಾರೆ. ಅಕ್ಕಪಕ್ಕದ ಕ್ಷೇತ್ರದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಕಾಡುಗೊಲ್ಲ ಸಮುದಾಯದವರು ಇದ್ದಾರೆ. ಇವರಿಗೆ ಕೇಂದ್ರ ಬಿಜೆಪಿ ಸರ್ಕಾರ ಎಸ್ಟಿ ಮೀಸಲಾತಿ ನೀಡದೆ ದ್ರೋಹ ಎಸಗಿದೆ. ಸಿದ್ದರಾಮಯ್ಯ ಅವರ ಕಾಲದಿಂದಲೂ ಕಾಡುಗೊಲ್ಲರ ಕುಲಶಾಸ್ತ್ರೀಯ ಅಧ್ಯಯನವನ್ನು ನಾವು ಕೇಂದ್ರ ಸರ್ಕಾರಕ್ಕೆ 4-5 ಬಾರಿ ಸಲ್ಲಿಕೆ ಮಾಡಿದ್ದೇವೆ. ಆದರೂ ಅವರು ಇದನ್ನು ತಿರಸ್ಕರಿಸುತ್ತಲೇ ಬಂದು ಅನ್ಯಾಯ ಎಸಗಿದ್ದಾರೆ. ರಾಜಕೀಯ, ಶೈಕ್ಷಣಿಕವಾಗಿ ಮೋಸ ಮಾಡಲಾಗಿದೆ.
ಹಿರಿಯೂರು ಕ್ಷೇತ್ರದಲ್ಲಿ ಸುಮಾರು 10 ಸಾವಿರ ಬಡ ಕುಟುಂಬಗಳಿಗೆ ನಿವೇಶನ ಹಂಚಲು ಜಾಗ ಹುಡುಕಲಾಗುತ್ತಿದೆ. ಈ ವರ್ಷ ರಾಜ್ಯಾದ್ಯಂತ 5 ಲಕ್ಷ ನಿವೇಶನಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಸಚಿವರಾದ ಪರಮೇಶ್ವರ ಮತ್ತು ಜಮೀರ್ ಅಹಮದ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಬಡವರಿಗೆ ಮನೆ ಹಾಗೂ ನಿವೇಶನ ಒದಗಿಸುವ ಮೂಲಕ ಅವರ ಬದುಕಿಗೆ ಭದ್ರತೆ ಕಲ್ಪಿಸುವ ಉದ್ದೇಶ ಸರ್ಕಾರದ್ದಾಗಿದೆ.
ಹಿರಿಯೂರಿನ ಅಭಿವೃದ್ಧಿಗೆ ಸುಮಾರು ₹2,500 ಕೋಟಿ ಅನುದಾನ ತಂದಿದ್ದೇವೆ. ಒಕ್ಕಲಿಗರ ಭವನ ನಿರ್ಮಾಣಕ್ಕೆ ಸರ್ಕಾರದಿಂದ ₹5 ಕೋಟಿ ಅನುದಾನ ಬಿಡುಗಡೆಗೆ ಆದೇಶ ನೀಡಲಾಗಿದೆ. ಒಟ್ಟು ₹12 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣವಾಗಲಿದ್ದು, ಮಾಜಿ ಶಾಸಕ ಸುಧಾಕರ್ ಅವರು ಈ ಹಿಂದೆ ₹1.5 ಕೋಟಿ ಕೊಡುಗೆ ನೀಡಿದ್ದರು. ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದವರು ಸಹಕರಿಸಿ ಭವ್ಯ ಭವನ ನಿರ್ಮಿಸಬೇಕು. ಹಿರಿಯೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸುಮಾರು ₹100 ಕೋಟಿ ವೆಚ್ಚದ ಯುಜಿಡಿ ಯೋಜನೆಗೆ ಚಾಲನೆ ನೀಡಲಾಗಿದೆ.
ಬಡವರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸಚಿವ ಮುನಿಯಪ್ಪ ಅವರ ಇಲಾಖೆಯಿಂದ ಯೋಜನೆ ರೂಪಿಸಲಾಗಿದೆ. ಯುವಕರಿಗೆ ಖಾಸಗಿ ಉದ್ಯೋಗ ದೊರಕಿಸುವುದರ ಜತೆಗೆ ಸ್ವಂತ ಉದ್ಯೋಗ ಆರಂಭಿಸಲು, ವಾಹನ ಖರೀದಿಸಲು, ಬೋರ್ವೆಲ್ ಕೊರೆಸಲು ಹಾಗೂ ಅಂಗಡಿ ವ್ಯಾಪಾರ ನಡೆಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆ ಮೂಲಕ ಆರ್ಥಿಕ ನೆರವು ನೀಡಲಾಗುತ್ತಿದೆ.
— ಹಿರಿಯೂರಿನಲ್ಲಿ ಒಕ್ಕಲಿಗರ ಭವನ ಹಾಗೂ ಯುಜಿಡಿ ಕಾಮಗಾರಿಗೆ ಚಾಲನೆ ನೀಡಿ, ನಂತರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಮುಖ ಅಂಶಗಳು.
ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಐಮಂಗಲ ಕೆರೆಗೆ ಗಂಗಾಪೂಜೆ ಹಾಗೂ 53 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದೆ.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಟಿ ರಘುಮೂರ್ತಿ, ಶ್ರೀ ಕೆ.ಎಚ್ ಮುನಿಯಪ್ಪ, ಶ್ರೀ ಕೆ.ಎಸ್. ಬಸವಂತಪ್ಪ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಟಿ. ಬಿ. ಜಯಚಂದ್ರ, ಕಾಂಗ್ರೆಸ್ ಮುಖಂಡ ಸುಹಾಸ್ ಸುಧಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇಂದು ಚಿತ್ರದುರ್ಗದ ಹಿರಿಯೂರು ನಗರದಲ್ಲಿ ಒಕ್ಕಲಿಗರ ಭವನ ಹಾಗೂ ಯುಜಿಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದೆ. ಈ ಸಂದರ್ಭದಲ್ಲಿ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಸಂಸ್ಥಾನ ನಂಜಾವಧೂತ ಸ್ವಾಮೀಜಿ, ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡ ಶ್ರೀ ಸುಹಾಸ್ ಸುಧಾಕರ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
youtube.com/live/Qtz9Bbq1G3U
LIVE : ಹಿರಿಯೂರು ನಗರದಲ್ಲಿ ಒಕ್ಕಲಿಗರ ಭವನ ಹಾಗೂ UGD ಕಾಮಗಾರಿಗಳಿಗೆ ಶಂಕುಸ್ಥಾಪನೆ
ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ₹2,200 ಕೋಟಿ ಮೊತ್ತದ ಯೋಜನೆಗಳ ಮಂಜೂರು
₹2,200 ಕೋಟಿಯಷ್ಟು ಮೊತ್ತದ ಕಾಮಗಾರಿಗಳಿಗೆ ವಿವಿಧ ಇಲಾಖೆಗಳ ಮೂಲಕ ಆದೇಶ ಹೊರಡಿಸಿದ್ದೇವೆ. ಪ್ರತಿ ಊರಿನಲ್ಲಿ, ಹಳ್ಳಿಗಳ ರಸ್ತೆ ಏನಾಗಬೇಕು ಎಂದು ಪಟ್ಟಿ ತಯಾರು ಮಾಡಿದ್ದೇವೆ.
ನಾನು ಈ ಕಾರ್ಯಕ್ರಮಕ್ಕೆ ಬಹಳ ದುಃಖದಿಂದ ಬಂದಿರುವೆ. ನಾನು ಸಿಎಂ ಆಗಿರುವಾಗ ಸುಧಾಕರ್ ಇದ್ದಿದ್ದರೆ ಆತ ಎಷ್ಟು ಸಂತೋಷ ಪಡುತ್ತಿದ್ದ ಎಂಬುದಕ್ಕೆ ನಮ್ಮ ಸಹೋದ್ಯೋಗಿಗಳೇ ಸಾಕ್ಷಿ. ಆತ ತೀರಿಕೊಳ್ಳುವ 2 ತಿಂಗಳ ಮುನ್ನ, ನಾನು ಮಂತ್ರಿಯಾಗಿ ಇಲ್ಲದಿದ್ದರೂ ಚಿಂತೆ ಇಲ್ಲ. ನನ್ನ ಸ್ನೇಹಿತ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿದ್ದ ಸ್ನೇಹಿತ. ಆತನ ಕನಸು, ಈ ಜನರ ಮೇಲೆ ಇಟ್ಟಿದ್ದ ಪ್ರೀತಿ ಅಪಾರ. ಆತನಿಗೆ ಜಾತಿ ಧರ್ಮ ಇರಲಿಲ್ಲ. ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದ. ನಾನು ಪ್ರಜಾಸೇವಕನಾಗಿ ನಿಮ್ಮ ಮುಂದೆ ನಿಂತಿರುವೆ.
ಸಮಾಜಕಲ್ಯಾಣ ಇಲಾಖೆಯಿಂದ ಎಲ್ಲಾ ಜಾತಿ, ಸಮುದಾಯಗಳಿಗೆ ಸಂಬಂಧಿಸಿದ ಸಮುದಾಯ ಭವನಗಳನ್ನು ನಿರ್ಮಿಸಲು ಆದೇಶ ನೀಡಲಾಗಿದೆ. ಬಾಲಕೃಷ್ಣ ಅವರು ನಿಮ್ಮ ಸಮಸ್ಯೆಗಳನ್ನು ಹೇಳಿದ್ದಾರೆ. ಒಕ್ಕಲಿಗರ ಸಮುದಾಯ ಭವನ ಬೇಕು ಎಂದರು ಅದಕ್ಕೆ 5 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದ್ದೇನೆ. ಗೊಲ್ಲರ ಸಮುದಾಯ ಭವನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಕನಕ ಭವನಕ್ಕೂ ಅನುದಾನ ನೀಡಲಾಗುವುದು. ಈ ಸರ್ಕಾರಕ್ಕೆ ನೀವು ಶಕ್ತಿ ತುಂಬಬೇಕು.
ಜಮೀರ್ ಅಹ್ಮದ್ ಹಾಗೂ ಪರಮೇಶ್ವರ್ ಅವರು ಈ ವರ್ಷ ರಾಜ್ಯದಲ್ಲಿ ನಿವೇಶನರಹಿತರಿಗೆ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿದ್ದಾರೆ. ಸರ್ಕಾರಿ ಜಾಗದಲ್ಲಿ ಅದು ಇಲ್ಲವಾದರೆ ಖಾಸಗಿ ಜಮೀನು ಖರೀದಿಸಿ ನಿವೇಶನ ನೀಡಲಾಗುವುದು. ಈ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನಿನ ಪಟ್ಟಿ ನೀಡಿದ್ದಾರೆ. ಪ್ರಜಾಸೇವೆ ಮೂಲಕ ನಿವೇಶನಕ್ಕೆ ಬರುವ ಅರ್ಜಿಗಳಿಗೆ ಸ್ಪಂದಿಸಲಾಗುವುದು. ಪ್ರಜಾಸೇವೆ ಅಭಿಯಾನದಲ್ಲಿ ನೀವು ನಿಮ್ಮ ಮನವಿಯನ್ನು ಸರ್ಕಾರ ಕೊಡುವ ಅರ್ಜಿಯಲ್ಲಿ ನಮೂದಿಸಿ ಕೊಟ್ಟರೆ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು. ವಿಜಯನಗರದಲ್ಲಿ 1.11 ಲಕ್ಷ ಬುಡಕಟ್ಟು ಜನರಿಗೆ ಅವರ ಜಮೀನಿನ ದಾಖಲೆ ಪತ್ರಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ.
ನಮ್ಮ ಸರ್ಕಾರದ 10 ಸಚಿವರು ತಮ್ಮ ಇಲಾಖೆಯಿಂದ ಈ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಆ ಮೂಲಕ ಸುಧಾಕರ್ ಅವರನ್ನು ಆಯ್ಕೆ ಮಾಡಿ ರಾಜ್ಯದಲ್ಲಿ 136 ಸೀಟುಗಳನ್ನು ಕೊಟ್ಟ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ರೈತರ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಅದಕ್ಕಾಗಿ ವಾರ್ಷಿಕ 22 ಸಾವಿರ ಕೋಟಿ ಹಣ ನೀಡುತ್ತಿದೆ.
ಈ ವರ್ಷ ಬರ ಹಿನ್ನೆಲೆಯಲ್ಲಿ ಹೆಚ್ಚಿನ ವಿದ್ಯುತ್ ಬಳಸಿರುವ ಪರಿಣಾಮ ಈ ವರ್ಷ 30 ಸಾವಿರ ಕೋಟಿ ಹಣ ವೆಚ್ಚ ಮಾಡಬೇಕಾಗಿದೆ. 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ನಿಮ್ಮ ಸಮಸ್ಯೆ ನಮಗೆ ಅರ್ಥವಾಗುತ್ತದೆ.
ಈ ಬಸ್ ನಿಲ್ದಾಣಕ್ಕೆ 3.5 ಕೋಟಿ ರೂ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದೇವೆ. ನಿಮ್ಮ ತಾಲ್ಲೂಕಿನ ನೀರಾವರಿ ಯೋಜನೆ ಬಗ್ಗೆ ಇಟ್ಟ ಬೇಡಿಕೆಗೆ ನಾವು ಮಂಜೂರಾತಿ ನೀಡಿ, ಟೆಂಡರ್ ಕರೆದು, ಈಗಾಗಲೇ ಪರೀಕ್ಷಾರ್ಥ ನೀರು ಹರಿಸಲಾಗಿದೆ.
ಧರ್ಮಪುರ ಹೋಬಳಿಯ ಕೆರೆ ತುಂಬಿಸಿ ಈ ಭಾಗದ ರೈತರ ಬದುಕು ಬದಲಿಸುವ ಐತಿಹಾಸಿಕ ತೀರ್ಮಾನ ಮಾಡಿರುವುದು ನಮ್ಮ ಸರ್ಕಾರ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ನೀವು ಇಂದು ಕೊಟ್ಟಿರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸುವೆ. ನನಗೆ ಕನಕಪುರ ಕ್ಷೇತ್ರ ಎಷ್ಟು ಮುಖ್ಯವೋ, ಹಿರಿಯೂರು ಕ್ಷೇತ್ರವೂ ಅಷ್ಟೇ ಮುಖ್ಯ. ನಿಮ್ಮ ಸೇವೆಗೆ ನಾನು ಬದ್ಧನಾಗಿದ್ದೇನೆ.
ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಅಭ್ಯರ್ಥಿ ನಿಲ್ಲಿಸಲಿ, ನಮ್ಮ ಕುಟುಂಬದ ಸದಸ್ಯರಾದ ನಿಮ್ಮ ಭಾವನೆ, ಬದುಕಿನಲ್ಲಿ ಭಾಗವಾಗಿ ಈ ಸರ್ಕಾರ ನಿಮ್ಮ ಜತೆಗಿದೆ. 14 ಗ್ರಾಮಗಳಿಗೆ ಭವನಗಳು, 7 ಕೋಟಿ ಮೊತ್ತದ ಮೂಲಸೌಲಭ್ಯ ಯೋಜನೆ ನೀಡಿದೆ. ನಾನು ರಾಜಕೀಯದಲ್ಲಿ ಎಂದಿಗೂ ಕೊಟ್ಟ ಮಾತಿಗೆ ತಪ್ಪಿಲ್ಲ.
ಕ್ಷೇತ್ರಕ್ಕಾಗಿ ಕೆಲಸ ಮಾಡಿದ ನನ್ನ ಸ್ನೇಹಿತ ಸುಧಾಕರನಿಗಾಗಿ ಜನ ಉಪಕಾರಸ್ಮರಣೆ ಹೊಂದಿದ್ದಾರೆ. ಈ ಹೋಬಳಿ ಜನ ಆರು ಸಾವಿರ ಮತ ನೀಡಿ ಗೆಲ್ಲಿಸಿದ್ದೀರಿ. ಆತನ ಸ್ನೇಹಿತನಾಗಿ ನಾನು ಸಿಎಂ ಆಗಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ನೀವು ಈ ಉಪಚುನಾವಣೆಯಲ್ಲಿ ಈ ಹೋಬಳಿಯಿಂದ ಕನಿಷ್ಠ 15 ಸಾವಿರ ಮತಗಳನ್ನು ನೀಡಬೇಕು. ನೀವು ತಾಲ್ಲೂಕು ವಿಚಾರ ಕೇಳಿದ್ದೀರಿ. ನಿಮ್ಮ ಮನವಿ ಬಗ್ಗೆ ನಮಗೆ ಚಿಂತನೆ ಇದೆ. ಯಾವ ಹೋಬಳಿಗಳನ್ನು ಸೇರಿಸಿಕೊಂಡು ಎಷ್ಟು ಜನಸಂಖ್ಯೆಯೊಂದಿಗೆ ತಾಲ್ಲೂಕು ಮಾಡಬೇಕು ಎಂದು ನನಗೆ ಆಲೋಚನೆ ಇದೆ.
ನಾನು ಇಲ್ಲಿಗೆ ಬಂದು ಹಾಗೇ ಹೋಗುವವನಲ್ಲ. ನಿಮ್ಮ ಸೇವೆಗೆ ಸಂಕಲ್ಪ ಮಾಡಿದ್ದೇನೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಬರಗಾಲ ವಿಚಾರದಲ್ಲಿ ಕೇಂದ್ರ ಸರ್ಕಾರ ಇದುವರೆಗೂ ಒಂದು ರೂಪಾಯಿ ನೀಡಿಲ್ಲ. ನಾನು ಕೆರೆಗಳಿಗೆ ನೀರು ತುಂಬಿಸಲು ಆದೇಶ ಮಾಡಿದ್ದೇನೆ. ರೈತರು ನೀಡಿರುವ ಪಟ್ಟಿಯಲ್ಲಿನ ಸಮಸ್ಯೆ ಬಗೆಹರಿಸಲಾಗುವುದು. ನಾವು ಚುನಾವಣೆ ಸಮಯದಲ್ಲಿ ಮಾತ್ರ ಬಂದು ಹೋಗುವವರಲ್ಲ.
ನಿಮ್ಮ ಜತೆ ಇದ್ದು ನಿಮ್ಮ ಸೇವೆ ಮಾಡುವವರು. ನಾನು ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಲ್ಲ. ಆದರೂ ಉಪಚುನಾವಣೆಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂದು ನಾಲ್ಕು ಸರ್ವೇ ಮಾಡಿಸಿದ್ದೇನೆ. ನಿಮ್ಮ ಅಭ್ಯರ್ಥಿಯಾಗಿ ನಾನೇ ಇದ್ದೇನೆ. ಈ ಡಿ. ಕೆ. ಶಿವಕುಮಾರ್ ನಿಮ್ಮ ಅಭ್ಯರ್ಥಿ. ಧರ್ಮಪುರದ ಜನ ಧರ್ಮವನ್ನು ಕಾಪಾಡುವವರು, ಧರ್ಮದಿಂದ ಮತಹಾಕಿ, ನಿಮ್ಮ ಸೇವೆ ಮಾಡುವ ಪಕ್ಷವನ್ನು ಗೆಲ್ಲಿಸಬೇಕು.
- ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಧರ್ಮಪುರದಲ್ಲಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ಮಾತನಾಡಿದ ಪ್ರಮುಖ ಅಂಶಗಳು.
ಹಿರಿಯೂರು ಕ್ಷೇತ್ರದಲ್ಲಿ ಜಲ ಕ್ರಾಂತಿ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದಿಂಡಾವರದಲ್ಲಿ, ಜವನಗೊಂಡನಹಳ್ಳಿಯ 16 ಕೆರೆಗಳಿಗೆ ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸುವ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದೆ.
ಈ ಸಂದರ್ಭದಲ್ಲಿ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡ ಶ್ರೀ ಸುಹಾಸ್ ಸುಧಾಕರ್ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಧರ್ಮಪುರದಲ್ಲಿ ಇಂದು ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದೆ.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಟಿ. ರಘುಮೂರ್ತಿ, ಶ್ರೀ ಕೆ.ಎಸ್. ಬಸವಂತಪ್ಪ, ಶ್ರೀ ಈಶ್ವರ ಖಂಡ್ರೆ, ಶ್ರೀ ಕೆ.ಹೆಚ್. ಮುನಿಯಪ್ಪ, ಶ್ರೀ ಜಮೀರ್ ಅಹಮದ್ ಖಾನ್, ಡಾ. ಅಜಯ್ ಧರ್ಮಸಿಂಗ್, ಶ್ರೀ ಹೆಚ್.ಸಿ. ಬಾಲಕೃಷ್ಣ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ. ಜಯಚಂದ್ರ ಹಾಗೂ ಶಾಸಕರು, ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದೆ.
ಇದೇ ವೇಳೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ರಂಗಭೂಮಿ ಕಲಾವಿದರಾದ ಶ್ರೀ ಜಿ. ಡಿ. ತಿಮ್ಮಯ್ಯನವರನ್ನು ಸನ್ಮಾನಿಸಿದೆ.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಟಿ. ರಘುಮೂರ್ತಿ, ಶಾಸಕರಾದ ಡಾ. ಹೆಚ್. ಡಿ. ರಂಗನಾಥ್, ಕಾಂಗ್ರೆಸ್ ಮುಖಂಡ ಶ್ರೀ ಸುಹಾಸ್ ಸುಧಾಕರ್, ಜನಪ್ರತಿನಿಧಿಗಳು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
LIVE: ಹಿರಿಯೂರು ತಾಲೂಕಿನ ಧರ್ಮಪುರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ
youtube.com/live/b1QqO8fJ9ts…
ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಸರ್ಕಾರದ ದೃಢ ಸಂಕಲ್ಪ
ಬುಡಕಟ್ಟು ಸಮುದಾಯದ ನವಯುಗಕ್ಕೆ ನಾಂದಿ ಹಾಡಲು ಚಿತ್ರದುರ್ಗದಲ್ಲಿ ಬರೋಬ್ಬರಿ 120 ಎಕರೆ ಜಾಗದಲ್ಲಿ ‘ಬುಡಕಟ್ಟು ವಿಶ್ವವಿದ್ಯಾಲಯ’ ನಿರ್ಮಾಣವಾಗಲಿದೆ. ಬುಡಕಟ್ಟು ಜನರ ಭಾಷೆ, ಸಂಸ್ಕೃತಿ ಮತ್ತು ಜೀವನಶೈಲಿಯ ಸಂಶೋಧನೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಹಾಗೂ ಅಲ್ಲಿನ ಯುವಜನತೆಗೆ ಕೌಶಲ್ಯಾಧಾರಿತ ಶಿಕ್ಷಣ ನೀಡಿ ಉದ್ಯೋಗಕ್ಕೆ ಸಜ್ಜುಗೊಳಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ.ಅಂಚಿನಲ್ಲಿರುವ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹಾಗೂ ಸರ್ವರ ಅಭಿವೃದ್ಧಿಯೇ ನಮ್ಮ ರಾಜ್ಯ ಸರ್ಕಾರದ ಗುರಿ.
ಅರಬ್ಬಿ ಸಮುದ್ರದ ಅಲೆಗಳ ಅಪ್ಪುಗೆಯಲ್ಲಿ ಅರಳಿರುವ ಕರುನಾಡಿನ ಕಡಲತೀರಗಳ ಸೊಬಗು, ವಿಶ್ವದ ಭೂಪಟದಲ್ಲಿ ಕನ್ನಡದ ಹೆಮ್ಮೆಯ ಹೊಳಪು.
Our teams are on their way to Andhra Pradesh to support relief and restoration efforts in the cyclone-affected areas.
Karnataka stands with the people of Andhra Pradesh, and we will extend every possible support during this difficult time.
Spoke to Hon’ble Chief Minister of Andhra Pradesh, Shri Chandrababu Naidu avaru, and assured him of Karnataka’s full support as Andhra Pradesh grapples with the devastation caused by Cyclone Arnab. With over 15,000 electricity poles uprooted by Arnab, the restoration of power infrastructure is critical, and Andhra Pradesh has sought Karnataka’s assistance in this effort. Our Energy Department is coordinating the assistance, with Energy Minister Shri K.J. George closely monitoring the situation.
As part of this support, Karnataka is deploying 500 skilled Powermen, along with the necessary equipments, to expedite restoration works and facilitate the early restoration of electricity supply in the cyclone-affected areas. Our teams will work in close coordination with the Andhra Pradesh authorities to ensure effective deployment of manpower and equipment at the restoration sites.
The approaching Cyclone Murasu presents a fresh challenge, and we will continue to assess the situation and its impact over the next two days while extending all possible assistance. In times of adversity, solidarity must translate into action. Karnataka stands shoulder to shoulder with the people of Andhra Pradesh, and we will extend all possible support.
@ncbn @AndhraPradeshCM
ಮೊಸರಿನ ಬೆಲೆ ಕಡಿಮೆ ಮಾಡಲು ಸೂಚನೆ
ಕೆಎಂಎಫ್ ಪದಾಧಿಕಾರಿಗಳೊಂದಿಗೆ ಇಂದು ಚರ್ಚೆ ನಡೆಸಿದ ಸಂದರ್ಭದಲ್ಲಿ, ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ಬೆಲೆಯನ್ನು ಕಡಿಮೆ ಮಾಡುವಂತೆ ಸೂಚನೆ ನೀಡಿದ್ದೇನೆ. ಸಾಮಾನ್ಯ ಜನರ ಮೇಲೆ ಬೆಲೆ ಏರಿಕೆಯ ಹೊರೆ ಬೀಳಬಾರದು. ಜನಸಾಮಾನ್ಯರಿಗೆ ಅಗತ್ಯ ವಸ್ತುಗಳು ಕೈಗೆಟುಕುವ ದರದಲ್ಲಿ ದೊರೆಯುವುದು ನಮ್ಮ ಆದ್ಯತೆ. ಹೈನುಗಾರರ ಹಿತಾಸಕ್ತಿ ಕಾಪಾಡುವ ಜೊತೆಗೆ ಗ್ರಾಹಕರಿಗೂ ಹೊರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ.
ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ನಲ್ಲಿ ಆಯೋಜಿಸಿದ್ದ 'ಪಂಪಾ – ಕರ್ನಾಟಕದ ಜವಳಿ ವೈವಿಧ್ಯ' (PAMPA – Textiles of Karnataka) ಪ್ರದರ್ಶನಕ್ಕೆ ಸಾರಿಗೆ ಸಚಿವರಾದ ಶ್ರೀ ಬೈರತಿ ಸುರೇಶ್ ಅವರೊಂದಿಗೆ ಭೇಟಿ ನೀಡಿದೆ.
ತಲೆಮಾರುಗಳಿಂದ ಬೆಳೆದುಬಂದ ನಮ್ಮ ನಾಡಿನ ಸುಂದರ ಜವಳಿ ಪರಂಪರೆ, ವಿನ್ಯಾಸಗಳು ಮತ್ತು ಅದ್ಭುತ ಕರಕುಶಲತೆಯನ್ನು ನೋಡಿ ಮನಸ್ಸಿಗೆ ಅತೀವ ಸಂತೋಷವಾಯಿತು. ಅಲ್ಲಿನ ಪ್ರತಿಯೊಂದು ಕಲಾಕೃತಿಯಲ್ಲೂ ನಮ್ಮ ನೇಕಾರರು ಹಾಗೂ ಕುಶಲಕರ್ಮಿಗಳ ಕಠಿಣ ಪರಿಶ್ರಮ, ಸೃಜನಶೀಲತೆ ಮತ್ತು ಶ್ರದ್ಧೆ ಎದ್ದುಕಾಣುತ್ತಿದೆ.
ಈ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ, ಬೆಳೆಸಲು ಹಾಗೂ ನಮ್ಮ ಕುಶಲಕರ್ಮಿಗಳನ್ನು ಬೆಂಬಲಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಕರ್ನಾಟಕದ ಕೈಮಗ್ಗದ ಪರಂಪರೆಯು ನಾವು ಸದಾ ಹೆಮ್ಮೆಪಡಬೇಕಾದ ಮತ್ತು ಕಾಯ್ದುಕೊಳ್ಳಬೇಕಾದ ಅತ್ಯಮೂಲ್ಯ ಆಸ್ತಿಯಾಗಿದೆ.
Visited PAMPA – Textiles of Karnataka at the National Gallery of Modern Art (NGMA), Bengaluru, along with Transport Minister Shri Byrathi Suresh.
It was a pleasure to see the beautiful textile traditions of our state, the intricate designs and the remarkable craftsmanship passed down through generations. Every creation reflects the hard work, creativity and dedication of our weavers and artisans.
Our government is committed to preserving these traditional crafts and supporting our weavers and artisans. Their skills and contributions deserve our appreciation, encouragement and continued support. Karnataka's handloom heritage is a legacy we must take pride in and protect.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶ್ರೀ ಆರ್.ಮಂಜುನಾಥ್ ಹಾಗೂ ಪದಾಧಿಕಾರಿಗಳ ನಿಯೋಗ ನನ್ನನ್ನು ಭೇಟಿಯಾಗಿ, ವಿವಿಧ ವಿಚಾರಗಳ ಕುರಿತು ಚರ್ಚಿಸಿತು.
ಈ ಸಂದರ್ಭದಲ್ಲಿ ನನ್ನ ಆರ್ಥಿಕ ಸಲಹೆಗಾರರಾದ ಶ್ರೀ ಎಲ್.ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ಶ್ರೀ ತುಷಾರ್ ಗಿರಿನಾಥ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಿತೇಶ್ ಕುಮಾರ್ ಸಿಂಗ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Spoke to Hon’ble Chief Minister of Andhra Pradesh, Shri Chandrababu Naidu avaru, and assured him of Karnataka’s full support as Andhra Pradesh grapples with the devastation caused by Cyclone Arnab. With over 15,000 electricity poles uprooted by Arnab, the restoration of power infrastructure is critical, and Andhra Pradesh has sought Karnataka’s assistance in this effort. Our Energy Department is coordinating the assistance, with Energy Minister Shri K.J. George closely monitoring the situation.
As part of this support, Karnataka is deploying 500 skilled Powermen, along with the necessary equipments, to expedite restoration works and facilitate the early restoration of electricity supply in the cyclone-affected areas. Our teams will work in close coordination with the Andhra Pradesh authorities to ensure effective deployment of manpower and equipment at the restoration sites.
The approaching Cyclone Murasu presents a fresh challenge, and we will continue to assess the situation and its impact over the next two days while extending all possible assistance. In times of adversity, solidarity must translate into action. Karnataka stands shoulder to shoulder with the people of Andhra Pradesh, and we will extend all possible support.
@ncbn @AndhraPradeshCM
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕೆಎಂಎಫ್ ಹಾಗೂ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳು ನನ್ನನ್ನು ಭೇಟಿಯಾಗಿ, ಹಾಲಿನ ದರ ಹೆಚ್ಚಳದ ನಿರ್ಧಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.
ರಾಜ್ಯ ಸರ್ಕಾರದ ಈ ಐತಿಹಾಸಿಕ ನಿರ್ಧಾರದಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಲೀಟರ್ ಹಾಲಿಗೆ ರೈತರಿಗೆ ನೀಡುವ ಖರೀದಿ ದರದಲ್ಲಿ ₹7 ಹೆಚ್ಚಳ ಮಾಡಲಾಗಿದ್ದು, ಗ್ರಾಹಕರಿಗೆ ಅನ್ವಯಿಸುವ ಎಂಆರ್ಪಿ ದರದಲ್ಲಿಯೂ ಪ್ರತಿ ಲೀಟರ್ಗೆ ₹8 ಹೆಚ್ಚಳ ಮಾಡಲಾಗಿದೆ. ಇದರಿಂದ ರಾಜ್ಯದ ಸುಮಾರು 11 ಲಕ್ಷ ಹೈನುಗಾರ ರೈತ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಅವರ ಆರ್ಥಿಕ ಸಬಲೀಕರಣಕ್ಕೆ ಮತ್ತಷ್ಟು ಬಲ ದೊರೆಯಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಲಕ್ಷ್ಮಣ ಸವದಿ, ಶ್ರೀ ಪುಟ್ಟರಂಗಶೆಟ್ಟಿ, ಶಾಸಕರಾದ ಶ್ರೀ ಕೆ.ವೈ.ನಂಜೇಗೌಡ, ಶ್ರೀ ಸಿ.ಪಿ. ಯೋಗೇಶ್ವರ್, ಬಮೂಲ್ ಅಧ್ಯಕ್ಷರಾದ ಶ್ರೀ ಡಿ.ಕೆ. ಸುರೇಶ್, ನನ್ನ ಮುಖ್ಯ ಸಲಹೆಗಾರರಾದ ಶ್ರೀ ಜಿ.ಸಿ. ಚಂದ್ರಶೇಖರ್ ಹಾಗೂ ವಿವಿಧ ಜಿಲ್ಲೆಗಳ ಹಾಲು ಉತ್ಪಾದಕರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.














































