B R Patil (@brpatilmla) header
B R Patil (@brpatilmla) profile picture

ಸಾಮಾಜಿಕ ನ್ಯಾಯದ ಪರಿಪಾಲಕ/Deputy Chairman of Legislative Council, Govt of Karnataka( 1991-94), MLC ( 1988-94) and MLA of Aland ( 1983-85,2004-08,2013-18, 2023 )

Gulbarga, India
Joined November 2015
Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)Photo by B R Patil (@brpatilmla)
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಹೊರಟಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ನೆನ್ನೆ ರಾಯಚೂರು ಜಿಲ್ಲೆಯ ಯರಗೆರಾ ಗ್ರಾಮದ ಹತ್ತಿರ ಎಐಸಿಸಿ ಮಾಜಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮಹಾತ್ಮ ಬಸವಣ್ಣನವರ ಮೂರ್ತಿ ಹಾಗೂ ವಚನದ ಪುಸ್ತಕವನ್ನು ನೀಡಿ ಅಭಿನಂದಿಸಿದೆ. @RahulGandhi @bharatjodo @kharge @siddaramaiah
10
33
1
282
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ತ್ಯಾಗ ಮತ್ತು ಧೈರ್ಯದ ಹೊಸ ಭಾಷ್ಯ ಬರೆದ ವೀರವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ. ವೀರಮಾತೆಯ ಜನ್ಮ ಜಯಂತಿಯಂದು ಗೌರವಪೂರ್ವಕ ನಮನಗಳು. #JhansiRaniLaxmibai
2
1
37
ಭಾರತದ ಆತ್ಮವಿಶ್ವಾಸಕ್ಕೆ ಹೊಸ ಆಯಾಮ ನೀಡಿದವರು, ಬಡವರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಿದವರು, ಜಾಗತಿಕ ವೇದಿಕೆಯಲ್ಲಿ ಭಾರತದ ಘನತೆಯನ್ನು ಎತ್ತಿಹಿಡಿದವರು, ದೇಶ ಕಂಡ ಅಪ್ರತಿಮ ನಾಯಕಿ, ಭಾರತದ ಪ್ರಥಮ ಮಹಿಳಾ ಪ್ರಧಾನಿ, ಭಾರತರತ್ನ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮ ಜಯಂತಿಯಂದು ಹೃದಯಪೂರ್ವಕ ಗೌರವ ನಮನಗಳು. #IndiraGandhi
1
2
56
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಹೋರಾಟಗಾರ, ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಪುಣ್ಯಸ್ಮರಣೆಯಂದು ಶತಶತ ನಮನಗಳು. ದೇಶದ ಸ್ವಾತಂತ್ರ್ಯಕ್ಕಾಗಿ ಅವರು ತೋರಿದ ಧೈರ್ಯ, ತ್ಯಾಗ ಮತ್ತು ಅಚಲ ದೇಶಭಕ್ತಿ ಪ್ರತಿಯೊಬ್ಬ ಭಾರತೀಯನಿಗೂ ಸದಾ ಸ್ಫೂರ್ತಿಯಾಗಿರಲಿ. #LalaLajpatRai
1
75
ನನ್ನ ಜನ್ಮದಿನದ ಸಂದರ್ಭದಲ್ಲಿ ಪ್ರೀತಿ, ಅಭಿಮಾನ ಹಾಗೂ ಆತ್ಮೀಯತೆಯಿಂದ ಶುಭಾಶಯಗಳನ್ನು ಕೋರಿದ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ನನ್ನ ಆತ್ಮೀಯ ಸಹೋದರರು, ಬಂಧು-ಮಿತ್ರರು ಹಾಗೂ ಅಪಾರ ಅಭಿಮಾನಿ ಬಳಗದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು.(1/2) @INCKarnataka
1
1
81
ನೀವು ತೋರಿದ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಗಳು ನನ್ನ ಸಾರ್ವಜನಿಕ ಬದುಕಿನ ಪಯಣಕ್ಕೆ ಮತ್ತಷ್ಟು ಶಕ್ತಿ ಹಾಗೂ ಸ್ಫೂರ್ತಿ ತುಂಬಿವೆ. ನಿಮ್ಮೆಲ್ಲರ ಪ್ರೀತಿ-ಅಭಿಮಾನಕ್ಕೆ ಸದಾ ಋಣಿಯಾಗಿರುತ್ತೇನೆ. ಜನಸೇವೆಯ ಸಂಕಲ್ಪದೊಂದಿಗೆ ನಿಮ್ಮೊಂದಿಗೆ, ನಿಮಗಾಗಿ ನನ್ನ ಪಯಣ ನಿರಂತರ.(2/2)
3
ಸಮಾಜದ ಪ್ರತಿಯೊಂದು ಬೆಳವಣಿಗೆಯನ್ನು ಜನರಿಗೆ ತಲುಪಿಸಲು ಹಗಲಿರುಳು ಶ್ರಮಿಸುವ ಪತ್ರಕರ್ತರ ಪರಿಶ್ರಮ, ಬದ್ಧತೆ ಮತ್ತು ವೃತ್ತಿಪರ ನಿಷ್ಠೆ ಅಭಿನಂದನಾರ್ಹ. ಪ್ರಜಾಪ್ರಭುತ್ವದ ಆಶಯಗಳನ್ನು ಜೀವಂತವಾಗಿರಿಸುವ ಸಮಸ್ತ ಪತ್ರಕರ್ತ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನದ ಹಾರ್ದಿಕ ಶುಭಾಶಯಗಳು. #NationalPressDay
51
ಇಂದು ನನ್ನ ಜನ್ಮದಿನದ ಪ್ರಯುಕ್ತ ಕೊಪ್ಪಳದ ಸುಪ್ರಸಿದ್ಧ ಶ್ರೀ ಗವಿಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡು ಧನ್ಯನಾದೆ. ಪೂಜ್ಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಸದಾ ನನ್ನ ಬದುಕಿಗೆ ಪ್ರೇರಣೆ ಮತ್ತು ಶಕ್ತಿಯಾಗಿರಲಿ ಎಂದು ಪ್ರಾರ್ಥಿಸಿದೆ. @INCKarnataka
75
ನೂರಾರು ಮರಗಳನ್ನು ನೆಟ್ಟು, ಅವುಗಳನ್ನು ಸ್ವಂತ ಮಕ್ಕಳಂತೆ ಪೋಷಿಸಿದ ಮಹಾನ್ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರ ಸ್ಮರಣೆ ಸದಾ ಹಸಿರು. ಪ್ರಕೃತಿಯೇ ನಮ್ಮ ಬದುಕು, ಮರಗಳೇ ನಮ್ಮ ಭವಿಷ್ಯ ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ಸಾರಿದ ಮಹಾನ್ ಚೇತನಕ್ಕೆ ಅವರ ಪುಣ್ಯ ತಿಥಿಯಂದು ಗೌರವಪೂರ್ವಕ ನಮನಗಳು. #ಸಾಲುಮರದ_ತಿಮ್ಮಕ್ಕ
68
ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಭಾರತದ ಆಡಳಿತ ವ್ಯವಸ್ಥೆಯ ತಳಹದಿಯಾಗಿಸಿದ ಮಹಾನ್ ನಾಯಕ, ಭಾರತದ ಪ್ರಥಮ ಪ್ರಧಾನಿ, ಪಂಡಿತ್ ಜವಾಹರಲಾಲ್ ನೆಹರು.(1/2) #ಮಕ್ಕಳ_ದಿನಾಚರಣೆ
1
78
ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು, ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಮುಂದಿನ ಪೀಳಿಗೆಯಲ್ಲಿದೆ ಎಂದು ನಂಬಿದ್ದರು. ಶಿಕ್ಷಣ, ವಿಜ್ಞಾನ ಮತ್ತು ವಿಚಾರಶೀಲತೆಯ ಮೂಲಕ ಬಲಿಷ್ಠ ಭಾರತ ಕಟ್ಟುವ ಅವರ ಕನಸು ಸದಾ ಪ್ರಸ್ತುತ. ನೆಹರು ಅವರ ಜನ್ಮದಿನ ಹಾಗೂ ಮಕ್ಕಳ ದಿನಾಚರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.(2/2)
13
ನಿನ್ನೆ ಆಳಂದ ತಾಲೂಕಿನ ಮಾದನಹಿಪ್ಪರಗಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಸೌಕರ್ಯ ಅನುದಾನದಡಿ ₹2 ಕೋಟಿ ವೆಚ್ಚದಲ್ಲಿ ಮರಗಮ್ಮ ಹಳ್ಳಕ್ಕೆ ಸೇತುವೆ ಹಾಗೂ ವಿದ್ಯುತ್ ಉಪಕೇಂದ್ರದವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದೆ.(1/2)
1
3
114
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ, ರೈತರ ಸಮಸ್ಯೆಗಳು ಹಾಗೂ ಬೆಳೆ ಹಾನಿ ಪರಿಹಾರ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದು, ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿದೆ. ಈ ಕಾರ್ಯಕ್ರಮದ ಪತ್ರಿಕಾ ವರದಿ.(2/2)
17
ಆಳಂದ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಗ್ರವಾಗಿ ಚರ್ಚಿಸಿದೆ.(1/3) @INCKarnataka @CMofKarnataka
1
1
130
ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಲಭ್ಯತೆ, ಎದುರಾಗಿರುವ ಸಮಸ್ಯೆಗಳು ಹಾಗೂ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಜನರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.(2/3)
1
34
ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಹಕ್ಕು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಸಮರ್ಪಕ ನೀರು ಪೂರೈಕೆಯನ್ನು ಖಚಿತಪಡಿಸುವುದು ನಮ್ಮ ಆದ್ಯತೆ.(3/3)
10
ನಿನ್ನೆ ಆಳಂದ ಪಟ್ಟಣ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಮತ್ತಿತರ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದೆ. ಈ ಕುರಿತ ವರದಿಗಳು ಇಂದಿನ ಪತ್ರಿಕೆಗಳಲ್ಲಿ.. @INCKarnataka
1
44
ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಿದ ಮಹಾನ್ ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಭಾರತ ರತ್ನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು. ಶಿಕ್ಷಣ, ಸಂಸ್ಕೃತಿ ಮತ್ತು ರಾಷ್ಟ್ರಸೇವೆಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ.
1
53
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಡಿ ಮಾದನಹಿಪ್ಪರಗಾ ಗ್ರಾಮದಿಂದ ಕೆ.ಇ.ಬಿ. ವಿದ್ಯುತ್ ಉಪಕೇಂದ್ರದವರೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದೆ.(1/2) @INCKarnataka
1
1
68
ಅಂದಾಜು ₹2 ಕೋಟಿ ವೆಚ್ಚದ ಈ ಕಾಮಗಾರಿಯು ಗ್ರಾಮಸ್ಥರ ಸಂಚಾರವನ್ನು ಸುಗಮಗೊಳಿಸುವುದರ ಜೊತೆಗೆ, ಕೃಷಿ ಚಟುವಟಿಕೆಗಳು ಹಾಗೂ ಸ್ಥಳೀಯ ಜನಜೀವನಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಗ್ರಾಮೀಣ ಪ್ರದೇಶಗಳ ಅಗತ್ಯ ಮೂಲಸೌಕರ್ಯಗಳನ್ನು ಬಲಪಡಿಸಿ, ಅಭಿವೃದ್ಧಿಯ ಫಲ ಪ್ರತಿಯೊಂದು ಹಳ್ಳಿಗೂ ತಲುಪಿಸುವುದು ನಮ್ಮ ಆದ್ಯತೆ.(2/2)
10
ದರ್ಗಾಶಿರೂರ್ ಗ್ರಾಮದ ಶ್ರೀ ಶಾಂತಲಿಂಗ್ ಸಿದ್ರಾಮ ಘಂಟೆ ಅವರು ಭಾರತೀಯ ಸೇನೆಯಲ್ಲಿ ಸುದೀರ್ಘ ಕಾಲ ದೇಶಸೇವೆ ಸಲ್ಲಿಸಿ ನಿವೃತ್ತಿಯ ನಂತರ ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.(1/3) @INCKarnataka
1
4
119
ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಸೇವೆ, ಸಮಯ ಹಾಗೂ ಶ್ರಮವನ್ನು ಸಮರ್ಪಿಸಿದ ಅವರ ಕರ್ತವ್ಯನಿಷ್ಠೆ ಮತ್ತು ದೇಶಪ್ರೇಮ ನಿಜಕ್ಕೂ ಎಲ್ಲರಿಗೂ ಪ್ರೇರಣಾದಾಯಕ. (2/3)
1
25
ಈ ಸಂದರ್ಭದಲ್ಲಿ ಮೈಂದರ್ಗಿ ವಿರಕ್ತ ಮಠದ ಪೂಜ್ಯ ಮ.ನಿ.ಪ್ರ. ಶ್ರೀ ಮಹಾಂತ ಮಹಾಸ್ವಾಮಿಗಳು, ಷ.ಬ್ರ. ಶ್ರೀ ಶಾಂತವೀರ ಶಿವಾಚಾರ್ಯರು (ಚಲಗೇರಾ), ಡಿಸಿಸಿ ಬ್ಯಾಂಕ್ ನಿರ್ದೇಶಕರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಸೇರಿದಂತೆ ಅನೇಕ ಗಣ್ಯರು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.(3/3)
3