@indiranagarapsi
iAccount based inIndia
About this account
- Account based in
- India
- Connected via
- India Android App
Account-level information from X, not a live location or the device used for a specific post.
Official twitter account of Indiranagara Police Station (080-22942541). Dial Namma-112 in case of emergency. @BlrCityPolice
Bengaluru, India
Joined November 2015
- Tweets0
- Following0
- Followers0
- Likes0
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
ಸಾರ್ವಜನಿಕರ ಮೂಢನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ರೆಡ್ ಸ್ಯಾಂಡ್ ಬೋವಾ ಹಾವನ್ನು ₹1 ಕೋಟಿಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಓರ್ವ ಆರೋಪಿಯನ್ನು ಸಿಸಿಬಿ ವಿಶೇಷ ತನಿಖಾ ತಂಡ ಬಂಧಿಸಿದೆ. ಕಾರ್ಯಾಚರಣೆಯ ವೇಳೆ ಒಂದು ಜೀವಂತ ಹಾವು ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ, 970 ಸಾಫ್ಟ್ ಕೋರಲ್ ಸೀ ಫ್ಯಾನ್ ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಅಪರೂಪದ ಜೀವಿಗಳು ಮತ್ತು ಸಮುದ್ರ ಜೀವಿಗಳ ಅಕ್ರಮ ವ್ಯಾಪಾರವನ್ನು ಮಟ್ಟಹಾಕಲು ಸಿಸಿಬಿ ಸದಾ ಸನ್ನದ್ಧವಾಗಿರಲಿದೆ.
The CCB Special Investigation Team has arrested one accused person for allegedly attempting to sell a Red Sand Boa snake for ₹1 crore by using public superstition. During the operation, one live snake and one mobile phone were seized.
In another case, six accused persons were arrested for illegally collecting and attempting to sell coral sea fans, resulting in the seizure of 970 soft coral sea fans and three mobile phones.
The CCB remains ever-vigilant and prepared to curb the illegal trade of rare wildlife and marine species.
@CPBlr @seemantsingh96 @DgpKarnataka @KarnatakaCops
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
ಬೆಂಗಳೂರಿನಲ್ಲಿ ರೌಡಿಶೀಟರ್‌ಗಳ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಹಾಗೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಇದ್ದ ಒಟ್ಟಾರೆ 17ಕ್ಕೂ ಹೆಚ್ಚು ರೌಡಿಶೀಟರ್‌ಗಳು/ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ರೌಡಿ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು.
The CCB Police have undertaken a special operation to curb the illegal activities of rowdy-sheeters in Bengaluru.
Over the past one month, action has been taken against rowdy-sheeters who were absconding from the police and failing to appear before the courts in various cases. Overall, appropriate legal action has been taken against more than 17 rowdy-sheeters/accused persons. The CCB will further intensify its operations against rowdy activities in Bengaluru in the coming days.
@CPBlr @seemantsingh96 @DgpKarnataka @KarnatakaCops
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
ಪೂರ್ವ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏರಿಯಾ ಡಾಮಿನೇಷನ್ ಕಾರ್ಯಾಚರಣೆ ನಡೆಸಿ, ಪೊಲೀಸ್ ಗಸ್ತು ಹಾಗೂ ಗೋಚರತೆಯನ್ನು ಹೆಚ್ಚಿಸಲಾಯಿತು. ಅಚ್ಚರಿ ತಪಾಸಣೆಗಳ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯ ಮೇಲ್ವಿಚಾರಣೆ ನಡೆಸಿ, ಸಾರ್ವಜನಿಕರಲ್ಲಿ ಸುರಕ್ಷತಾ ಭಾವನೆ ಹಾಗೂ ಪೊಲೀಸರ ಮೇಲಿನ ವಿಶ್ವಾಸ ಹೆಚ್ಚಿಸುವುದು ನಮ್ಮ ಆದ್ಯತೆ.
ಗಣೇಶೋತ್ಸವದ ಅಂಗವಾಗಿ ನಿಯೋಜಿಸಲಾಗಿದ್ದ ಬಂದೋಬಸ್ತ್ ಕರ್ತವ್ಯವನ್ನು ಶಿಸ್ತು, ಜವಾಬ್ದಾರಿ, ಸಮಯಪ್ರಜ್ಞೆ ಹಾಗೂ ಸಮರ್ಪಣಾ ಮನೋಭಾವದಿಂದ ನಿರ್ವಹಿಸಿ, ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ “ಪ್ರಶಂಸಾ ಪ್ರಮಾಣ ಪತ್ರ” ನೀಡಲಾಯಿತು.
🚨 ಇಂದಿರಾನಗರ ಪೊಲೀಸ್ ಠಾಣೆ 🚨
ಒಂದು ಕ್ಷಣದ ಅಮಲು… ನಮ್ಮ ಬದುಕನ್ನೇ ನಾಶಮಾಡುತ್ತದೆ."
ಒಂದೇ ಉತ್ತರ – "ಬೇಡ ಬ್ರೋ"
"ಒಮ್ಮೆ ಪ್ರಯತ್ನಿಸಿ ನೋಡಿ" ಎಂಬ ಆಮಿಷಗಳ ಮೂಲಕ ಯುವಕರನ್ನು ಬಲೆಗೆ ಸೆಳೆಯುತ್ತಾರೆ. ಅವರ ಬಲೆಗೆ ಬೀಳಬೇಡಿ. ಆತ್ಮವಿಶ್ವಾಸದಿಂದ ಹೇಳಿ – "ಬೇಡ ಬ್ರೋ." @BlrCityPolice @DcpEastBcp @AcpHalasuru
🤖 Made with AI
ನಿಮ್ಮ ಜೀವನ ಅಮೂಲ್ಯ, ಡ್ರಗ್ಸ್‌ಗೆ ಬೇಡ ಎನ್ನಿ! ಆರೋಗ್ಯಕರ ಜೀವನ ಆಯ್ಕೆ ಮಾಡಿ. #SayNoToDrugs #BedaBro
BEDA BRO — “ಒಮ್ಮೆ ಪ್ರಯತ್ನಿಸಿ ನೋಡು” ಎಂಬ ಮಾತಿಗೆ ಮಣಿಯಬೇಡಿ. ಎಲ್ಲರೂ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ನೀವು ಕೂಡ ಮಾಡಬೇಕೆಂದಿಲ್ಲ.
ಕ್ಷಣಿಕ ಮತ್ತಿಗಿಂತ ನಿಮ್ಮ ಭವಿಷ್ಯವೇ ಮುಖ್ಯ.
BEDA BRO. ಡ್ರಗ್ಸ್‌ಗೆ NO. ಜೀವನಕ್ಕೆ YES
🚨 Beware of Fake Delivery Messages! 📱📦
A message asking you to update your delivery details could be a trap.
Don’t click suspicious links or share OTPs, bank details or personal information.
If you become a victim of cyber fraud, call 1930 immediately.
#Cybersafety #1930
A helmet is not just a rule—it’s a shield for the life you love. 🪖❤️
WEAR A HELMET. SAVE A LIFE.
Ride safe. Reach home safe.
#RoadSafety #WearHelmet #SafeRiding
ವಂಚನೆ ಬಗ್ಗೆ ಎಚ್ಚರವಿರಲಿ! ⚠️
ನಿಮ್ಮ ಕುಟುಂಬದವರು ಅಥವಾ ಆಪ್ತರು ಸಂಕಷ್ಟದಲ್ಲಿದ್ದಾರೆ ಎಂದು ಅವರ ಧ್ವನಿಯನ್ನು AI ತಂತ್ರಜ್ಞಾನದ ಮೂಲಕ ನಕಲು ಮಾಡಿ (ಧ್ವನಿ ಕ್ಲೋನಿಂಗ್) ತುರ್ತಾಗಿ ಹಣ ಕಳುಹಿಸುವಂತೆ ಸೈಬರ್ ವಂಚಕರು ಕರೆ ಮಾಡಬಹುದು.
ಆತುರಪಟ್ಟು ಹಣ ವರ್ಗಾಯಿಸುವ ಮೊದಲು ಜಾಗರೂಕರಾಗಿರಿ!
ನಿಮ್ಮ ಜೀವನ ಅಮೂಲ್ಯ, ಡ್ರಗ್ಸ್‌ಗೆ ಬೇಡ ಎನ್ನಿ! ಆರೋಗ್ಯಕರ ಜೀವನ ಆಯ್ಕೆ ಮಾಡಿ. #SayNoToDrugs #BedaBro
ಮಕ್ಕಳ ಕೈಯಲ್ಲಿ ಕೆಲಸವಲ್ಲ, ಪುಸ್ತಕವಿರಲಿ! 📚✨
ಬಾಲಕಾರ್ಮಿಕತೆಯನ್ನು ತಡೆದು, ಪ್ರತಿಯೊಂದು ಮಗುವಿಗೂ ಶಿಕ್ಷಣ, ಸುರಕ್ಷತೆ ಮತ್ತು ಉಜ್ವಲ ಭವಿಷ್ಯ ಕಲ್ಪಿಸೋಣ.
ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳಿಗೆ ಕಡಿವಾಣ ಹಾಕಿ
ಅನಗತ್ಯ ಕರೆಗಳು ಹಾಗೂ ಪ್ರಚಾರ ಸಂದೇಶಗಳಿಂದ ಎಚ್ಚರಿಕೆಯಿಂದಿರಿ.
ಸ್ಪ್ಯಾಮ್‌ಗಳನ್ನು ವರದಿ ಮಾಡಲು ಮತ್ತು ಅನಗತ್ಯ ಸಂವಹನಗಳನ್ನು ನಿಯಂತ್ರಿಸಲು TRAI DND ಆ್ಯಪ್ ಬಳಸಿ.
🔒 ಎಚ್ಚರಿಕೆ ವಹಿಸಿ — ಸುರಕ್ಷಿತವಾಗಿರಿ
ಮಾದಕ ವಸ್ತುಗಳ ಕಳ್ಳಸಾಗಣೆ ನಮ್ಮ ಸಮಾಜದ ಭವಿಷ್ಯವನ್ನು ಹಾಳುಮಾಡುತ್ತದೆ. ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಮಾರಾಟದ ಬಗ್ಗೆ ಮಾಹಿತಿ ನೀಡಿ.
ಕೆ.ಎಸ್.ಪಿ (KSP) ಮೊಬೈಲ್ ಅಪ್ಲಿಕೇಶನ್ ಬಳಸಿ ಸುರಕ್ಷಿತವಾಗಿ ವರದಿ ಮಾಡಿ.
ವಾಹನ ಕಳ್ಳತನ — ಕಳ್ಳರಿಗೆ ಅವಕಾಶ ನೀಡಬೇಡಿ ..
ಸಣ್ಣ ನಿರ್ಲಕ್ಷ್ಯವೂ ನಿಮ್ಮ ವಾಹನ ಕಳ್ಳತನಕ್ಕೆ ಕಾರಣವಾಗಬಹುದು.
🔐 ನಿಮ್ಮ ವಾಹನವನ್ನು ಸುರಕ್ಷಿತವಾಗಿಡಿ
* ಹ್ಯಾಂಡಲ್ ಲಾಕ್ ಹಾಕುವುದನ್ನು ಮರೆಯಬೇಡಿ.
* ಸುರಕ್ಷಿತ ಹಾಗೂ ಬೆಳಕು ಇರುವ ಸ್ಥಳದಲ್ಲಿ ವಾಹನ ನಿಲ್ಲಿಸಿ.
* ವಾಹನ ಕಳ್ಳತನವಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.