No, Bengaluru is NOT the New York of India.
New Yorkers aren’t forced to learn migrants’ languages from Grade 1 or risk discontinuing their education for failing to score enough marks.
They aren’t denied public services in English because employees refuse to learn it.
They aren’t expected to abandon their linguistic identity to accommodate newcomers, nor do we hear of them being beaten up for not speaking migrants’ languages.
Migrants adapt to New York, not the other way around.
New York is NOT Bengaluru because ಅಲ್ಲಿನ ಜನ-ನುಡಿ-ಸಂಸ್ಕೃತಿಗೆ ಧಕ್ಕೆ ಬಂದರೆ ಹೇಳೋರು ಕೇಳೋರು ಇದ್ದಾರೆ…
Replying to @abhispake
Everyone wants to come and live in Bengaluru and Karnataka
It's New York of India
ಹೊರರಾಜ್ಯದವರಿಗೇ ಉದ್ಯೋಗ ಸೃಷ್ಟಿಸುವುದಾದರೆ, ಕೈಗಾರಿಕೆಗಳನ್ನು ಅವರ ರಾಜ್ಯಗಳಲ್ಲೇ ಸ್ಥಾಪಿಸಬಹುದಲ್ಲವೇ?
ಕರ್ನಾಟಕದ ನೆಲ, ಜಲ, ಮೂಲಸೌಕರ್ಯ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿದಾಗ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕಲ್ಲವೇ?
ಸುತ್ತಮುತ್ತಲಿನ ಕಾಲೇಜು, ITIಗಳಲ್ಲಿ ಅಗತ್ಯ ತರಬೇತಿ, ಸ್ಥಳೀಯರಿಗೆ ಸಾರಿಗೆ ವ್ಯವಸ್ಥೆ, ನೇಮಕಾತಿಯಲ್ಲಿ ಆದ್ಯತೆ ನೀಡುವ ಷರತ್ತುಗಳನ್ನು ರೂಪಿಸಬೇಕು.
ಅದನ್ನು ಬಿಟ್ಟು ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲು ವಿಶೇಷ ರೈಲು, ಶ್ರಮಿಕ ನಿವಾಸಗಳ ವ್ಯವಸ್ಥೆ ಮಾಡುವುದೇ ಆದ್ಯತೆಯಾದರೆ, ಕನ್ನಡಿಗರಿಗೆ ಈ ಕೈಗಾರಿಕೀಕರಣದಿಂದ ದಕ್ಕುವುದೇನು?
@MBPatil @CMofKarnataka @DKShivakumar
ನೋಡಲು ಹೊರಟಿದ್ದು, ಪೂರ್ಣಚಂದ್ರ ಅವರು ನಟಿಸಿದ್ದಾರೆಂಬ ಕಾರಣಕ್ಕೆ.
ಆದರೆ ಅವರಿಗಿಂತನೂ ಇಷ್ಟವಾಗಿದ್ದು- ಅದಿತಿ ಸಾಗರ್ ಅವರ ಅಭಿನಯ.
ಕನ್ನಡ ಚಿತ್ರರಂಗ ಅವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ.🤞
ಮೊದಲರ್ಧದಲ್ಲಿ ಒಂದು ನವಿರಾದ ಕತೆಯನ್ನು ಚೆನ್ನಾಗಿ ಕಟ್ಟಿ ಕೊಟ್ಟ ಸಿನಿಮಾ, ಸೆಕೆಂಡ್ ಹಾಫ್ ಅಲ್ಲಿ ಮೂರ್ನಾಲ್ಕು ಕತೆ ಹೇಳಲು ಹೋಗಬಾರದಿತ್ತು.
ಅಷ್ಟೊಂದು ಚೆಂದದ ಶೀರ್ಷಿಕೆಗಷ್ಟೇ ಸಿನಿಮಾ ಸೀಮಿತವಾಗಿದಿದ್ದರೆ ಒಳ್ಳೆದಿತ್ತು.
ಹೊಸ ತಂಡ ಇನ್ನಷ್ಟು ಪ್ರಯತ್ನ ಮಾಡಲಿ…
app.primevideo.com/detail?gt…
Kiran Kodlady | ಕಿರಣ್ ಕೊಡ್ಲಾಡಿ retweeted
Replying to @rajaneesha_read
ಕೇಂದ್ರದ ಸಾಲದ ಗ್ಯಾರಂಟಿ, ಷೇರು ಬಂಡವಾಳ ಮತ್ತು ಸಾಲ ಮರುಪಾವತಿ ಮೂರು ಬೇರೆಬೇರೆ ವಿಷಯಗಳು. ಕೇಂದ್ರದ ಕೊಡುಗೆಯನ್ನು ಯಾರೂ ನಿರಾಕರಿಸುತ್ತಿಲ್ಲ. ಆದರೆ ಗ್ಯಾರಂಟಿ ನೀಡಿದ್ದನ್ನೇ ಸಾಲ ತೀರಿಸಿದಂತೆ ಬಿಂಬಿಸಲಾಗದು.
BMRCL ಜಂಟಿ ಉದ್ಯಮ ಎನ್ನುವುದಾದರೆ, ಕೇಂದ್ರ ಮತ್ತು ರಾಜ್ಯದ ನೈಜ ಹಣಕಾಸಿನ ಕೊಡುಗೆ ಎಷ್ಟು? ಸಾಲದ ಮರುಪಾವತಿಯ ಹೊರೆ ಯಾರ ಮೇಲೆ ಎಷ್ಟು? ಅದನ್ನು ಅಂಕಿಅಂಶಗಳೊಂದಿಗೆ ಹೇಳಿ.
₹28,958 ಕೋಟಿ ವಿದೇಶಿ ಸಾಲವನ್ನು ಕೇಂದ್ರದ ಕೊಡುಗೆ ಎಂದು ಲೆಕ್ಕ ಹಾಕುವುದೇ ಈಗಿನ ವಿವಾದ. ಸಾಲಕ್ಕೆ ಗ್ಯಾರಂಟಿ ನೀಡುವುದು ಮತ್ತು ಸಾಲ ಮರುಪಾವತಿಸುವುದು ಒಂದೇ ಅಲ್ಲ.
ಗ್ಯಾರಂಟಿಯನ್ನು ಕೊಡುಗೆ ಎಂದು ಲೆಕ್ಕ ಹಾಕುವವರು, ಮರುಪಾವತಿಯ ಹೊಣೆಗಾರಿಕೆಯನ್ನು ಏಕೆ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ?
ನಿಮ್ಮ 2BHKಗೆ ಬ್ಯಾಂಕ್ ಸಾಲ ಕೊಟ್ಟಿದೆ.. ನಿಮ್ಮ ಫ್ರೆಂಡು ಒಬ್ರು ಗ್ಯಾರಂಟಿ ಕೊಟ್ಟಿದ್ದಾರೆ ಎಂದಿಟ್ಟುಕೊಳ್ಳಿ.
EMI ಕಟ್ಟೋದು ನೀವು. ಗ್ಯಾರಂಟಿ ಕೊಟ್ಟ ಕಾರಣಕ್ಕೆ, ಮನೆವೊಕ್ಲು ದಿನ ನಿಮ್ಮ ಫ್ರೆಂಡು ಬಂದು, ‘ಒಂದು ರೂಮು, ಹಾಲ್, ಅಡುಗೆಮನೆ, ಬಾತ್ರೂಮು ನನ್ನ ಕೊಡುಗೆ’ ಅಂದ್ರೆ ಹೆಂಗಿರುತ್ತೆ!?
ಗ್ಯಾರಂಟಿ ಕೊಟ್ಟವರಿಗೆ ಹೊಣೆ ಇದೆ. ನೀವು EMI ಕಟ್ಟದಿದ್ದರೆ, ಒಪ್ಪಂದದ ಪ್ರಕಾರ ಬ್ಯಾಂಕ್ ಅವರಿಂದ ಹಣ ಕೇಳಬಹುದು. ಒಂದು ವೇಳೆ ಅವರೇ ಸಾಲ ಕಟ್ಟಿದ್ರು ಅಂದಿಟ್ಟುಕೊಳ್ಳಿ.. ಸಾಲ ಕಟ್ಟಿದ ಮೇಲೆ ‘ಆ ದುಡ್ಡು ವಾಪಸ್ ಕೊಡು’ ಅಂತ ನಿಮ್ಮ ಬಳಿ ಕೇಳಲ್ವಾ?
ನಮ್ಮ ಮೆಟ್ರೊ ದ ಬಂಡವಾಳ ಕೂಡ ಸ್ವಲ ಇದೆ ರೀತಿಯಲ್ಲಿ ಇದೆ.
ಬ್ಯಾಂಕಿನ ಸಾಲವನ್ನು ಕೂಡ ಫ್ರೆಂಡ್ ನ ಪಾಲು ಎಂದು ಪರಿಗಣಿಸಿದರೆ ಮಾತ್ರ, ಅನುಪಾತ ಹೀಗಾಗುತ್ತದೆ : 54:46
ಇಲ್ಲದೆ ಹೋದಲ್ಲಿ, ಕೆಳಗಿನ ಚಾರ್ಟ್ ನಂತೆ ಕಾಣಿಸುತ್ತದೆ.
ಮತ್ತೊಂದು ವಿಷಯ. ಕಳೆದ ಮಾರ್ಚ್ ನಲ್ಲಿ ಸಾಲ ತೀರಿಸಲು ಕೊರತೆಯಾದ ಹಣವನ್ನು ಕೊಟ್ಟಿದ್ದು, ನೀವೇ(5066 Crores).
ನಿಮ್ಮ ಫ್ರೆಂಡ್ ಅಲ್ಲ!
Source for the data: nitter.cf/Tejasvi_Surya/status/2…
Centre : Government of Karnataka
54 : 46
That's the Namma Metro funding split in BMRCL's approved financing plan!
For a total project cost of ₹77,891 crore:
54% - ₹41,558 crore attributed to the Centre, including ₹28,958 crore in sovereign-backing for foreign loans.
46% - ₹36,333 crore attributed to the Government of Karnataka.
The distinction matters. These foreign loans are arranged through the Centre, availed by BMRCL and serviced by BMRCL, subject to contractual support arrangements. They are not direct expenditure from the Government of Karnataka's budget.
Remember the numbers: 54:46.
Kiran Kodlady | ಕಿರಣ್ ಕೊಡ್ಲಾಡಿ retweeted
It was not just a group of random youth. It was a team of focused, committed Kannada activists who created awareness about the issue, fought the legal battle in courts up to Supreme Court, started dubbing studios, took up production, distribution and exhibition of dubbed films in Kannada to make this happen. Complete end to end campaign run for 15 long years.
#DubbingInKannada @KannadaGrahaka
Replying to @Power_monger
One point, if few youth had not decided to challenge courts on dubbing and promoted it , our industry would have been like Marathi industry till date. Hats off to them who even went on to loose their money by buying a movie just to release it. @kodlady @ganeshchetan
Kiran Kodlady | ಕಿರಣ್ ಕೊಡ್ಲಾಡಿ retweeted
#DubbingInKannada is not a favour. It is a business decision.
A Strong Message to Tollywood, Kollywood, Mollywood and Urduwood and Bollywood
This is not about language pride. This is about "Loss of Profit" for you.
For years, by avoiding #DubbingInKannada and denying a proper release in KA, you have left crores on the table.
The proof:
#Jailer2 - Kannada version grossed ರೂ.10 Cr with a limited release, and became the highest grossing Kannada dubbed film.
Very next day #Ramayana - Kannada version grossed ರೂ.10 Cr on Day 1 of release itself, and ರೂ.50 Cr Gross in just 5 days - becoming the 2nd Bharateeya language for the film.
And this is not just about big films. Low-budget, content-driven Kannada straight films prove the audience is there:
#PremadaOorali - ರೂ.150+ Cr worldwide on a ರೂ.3 Cr budget.
#SuFromSo - ರೂ.120+ Cr+ worldwide.
#Kantara - ರೂ.400+ Cr worldwide.
Ignore the Kannada audience, and you are the loser - not us
#Ashte 💛❤️
#Ramayana (Kannada Version) – India Biz
First Hindi film to cross ₹5 crore Nett
First Hindi film to cross ₹10 crore Nett
First Hindi film to cross ₹15 crore Nett
First Hindi film to cross ₹20 crore Nett
First Hindi film to cross ₹25 crore Nett
First Hindi film to cross ₹30 crore Nett
First Hindi film to cross ₹35 crore Nett
First Hindi film to cross ₹40 crore Nett & counting! 💥💥💥
Historic Rampage! 🙏🙏🙏
Kiran Kodlady | ಕಿರಣ್ ಕೊಡ್ಲಾಡಿ retweeted
Replying to @Power_monger @ganeshchetan
🙏Thanks to some brave, selfless and passionate Kannadigas who came together under @KannadaGrahaka @bbprakaashana
Replying to @kodlady
2011 ರಿಂದ ಕನ್ನಡದಲ್ಲಿ ಜ್ಞಾನ-ಮನರಂಜನೆಗೆ ಸಿಗಲು ಕಾನೂನು ಹೋರಾಟ ಮಾಡಿಕೊಂಉ ಬಂದಿದ್ದ ಕನ್ನಡ ಗ್ರಾಹಕ ಕೂಟಕ್ಕೆ 2015 ಜೂನ್ ನಲ್ಲಿ ಸುಪ್ರೀಂ ಕೋರ್ಟ್ ಡಬ್ಬಿಂಗ್ ಪರ ತೀರ್ಪು ಕೊಟ್ಟಿತ್ತು. ಅದಾಗಿಯೇ ಡಬ್ಬಿಂಗ್ ಚಿತ್ರಗಳು ಶುರುವಾಗುತ್ತವೆ ಎಂಬ ಆಸೆ ಈಡೇರದಿದ್ದಾಗ ಸಾಲು ಸಾಲಾಗಿ ಸೋಶಿಯಲ್ ಮಿಡಿಯಾ ಅಭಿಯಾನಗಳನ್ನು ಶುರುಮಾಡಿದೆವು,
ಆವತ್ತು ಶುಕ್ರವಾರ. ಕುವೆಂಪು ತೀರಿ ಹೋಗಿದ್ದಕ್ಕೆ ಶಾಲೆಗೆ ಅರ್ಧ ದಿನ ರಜೆ ಕೊಟ್ಟಿದ್ದರು.
ಸಾಮಾನ್ಯವಾಗಿ ಶನಿವಾರ ಮಧ್ಹ್ಯಾನದ ನಂತರ ದಾರಿಯಲ್ಲಿನ ಹೊಳೆಯಲ್ಲಿ ಮುಳುಗೆದ್ದು, ನೀರೆರೆಚುವ ಆಟ ಆಡಿ ಮನೆಗೆ ಹೋಗುವುದು ವಾಡಿಕೆ.
ಹೇಗೂ ಮನೆಗೆ ಬೇಗ ಹೊರಟಿದ್ದೆವು ಎಂದು ಆ ದಿನವೂ ಹೊಳೆಯಲ್ಲಿ ಆಟವಾಡಲು ಶುರು ಮಾಡಿದೆವು. ಆ ಸಮಯಕ್ಕೆ, ನಮ್ಮೂರಿನ ಒಬ್ಬ ಓದಿಕೊಂಡ ಹಿರಿಯರು ಬಂದರು. ಕುವೆಂಪು ಯಾರು ಗೊತ್ತೇನು ಎಂದು ಕೇಳಿದರು. ಕವಿ ಕಾವ್ಯ ಪರಿಚಯದಲ್ಲಿ ಓದಿದ ಹಾಗೆ ಬೆರಳ್ ಗೆ ಕೊರಳ್, ರಾಮಾಯಣ ದರ್ಶನಂ ಎಂದು ಉತ್ತರಿಸಿದೆವು. ಆಗ ಅವರು ಆಡಿದ ಒಂದೆರಡು ಮಾತು ಅಚ್ಚಳಿಯದೆ ಉಳಿಯಿತು. - "ಅವರು ಬರೀ ಕವಿ, ಕತೆಗಾರ ಇಲ್ಲ. ಈ ನಾಡಿನ ಜನರು ತನ್ನಂತೆ ವಿಚಾರವಂತವರಾಗ ಬೇಕೆಂದು ಬಯಸಿದ ಮಾನವತಾವಾದಿ. ಸಿಡುಕಿನ, ನಿಷ್ಟುರವಾದಿ..ನೀವು ಅವರ ಬಗ್ಗೆ ಓದಬೇಕು.." ಈ ಮಾತು ಆವೊತ್ತು ಅರ್ಥವಾಗಿರಲಿಲ್ಲ. ಇವತ್ತು ಕೂಡ ಸಂಪೂರ್ಣ ಅರ್ಥವಾಗಿದೆ ಎಂದು ಅನಿಸಲ್ಲ!
ಕಳೆದ 100 ವರ್ಶದಲ್ಲಿ ಕನ್ನಡ ನಾಡು ಕಂಡ ಎರಡು ಅನರ್ಘ್ಯ ರತ್ನಗಳು - ಅಣ್ಣಾವ್ರು ಮತ್ತು ಪುಟ್ಟಪ್ಪ ನವರು.
#Kuvempu
ಕೋಮು ಧ್ರುವೀಕರಣ, ghetto living ಹಾಗೂ ಕನ್ನಡದೊಂದಿಗಿನ ಒಡನಾಟ ಕಡಿಮೆಯಾಗುತ್ತಿರುವುದರಿಂದ ಕರ್ನಾಟಕದ ಸಾಮಾನ್ಯ ಮುಸ್ಲಿಂ ಯುವಕ-ಯುವತಿಯರಿಗೆ ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಸಿನಿಮಾ ಮುಂತಾದ ಸೃಜನಶೀಲ ಕ್ಷೇತ್ರಗಳಲ್ಲಿ ಅವಕಾಶಗಳು ಸೀಮಿತವಾಗುತ್ತಿವೆಯೇ?
ನಿಸಾರ್ ಅಹಮದ್, ಸಾರಾ ಅಬೂಬಕ್ಕರ್, ರಹಮತ್ ತರೀಕೆರೆ, ಭಾನು ಮುಷ್ತಾಕ್, ಕರೀಂ ಖಾನ್ ಅವರಂತಹ ಪ್ರತಿಭೆಗಳು ಬೆಳೆದ ಕಾಲದಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಕನ್ನಡದ ಒಡನಾಟ ಸಹಜವಾಗಿತ್ತು. ಸಮುದಾಯಗಳ ನಡುವೆ ಇಂದಿನಷ್ಟು ಅಲಿಖಿತ ಗಡಿಗಳಿರಲಿಲ್ಲ.
ವಿಭಿನ್ನ ಜನ, ಬದುಕು, ಸಂಸ್ಕೃತಿಗಳ ಪರಿಚಯ ಸಿಗುತ್ತಿತ್ತು. ಇಂತಹ ಬಹುಮುಖಿ ಬದುಕು ಸೃಜನಶೀಲತೆಗೆ ಒಳ್ಳೆಯ ನೆಲೆಯಾಗಿತ್ತು.
ಆದರೆ ಇವತ್ತಿನ ಪರಿಸ್ಥಿತಿ ಹಲವೆಡೆ ಬದಲಾಗಿದೆ. ಕನ್ನಡದ ಓದು, ಬರಹ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರವಾಗುವ ಯುವಜನರು ಕಳೆದುಕೊಳ್ಳುವುದು ಕೇವಲ ಭಾಷೆಯನ್ನಲ್ಲ, ತಮ್ಮ ಪ್ರತಿಭೆಯನ್ನು ಹೊರಹಾಕುವ ಅವಕಾಶವನ್ನೂ ಕೂಡ. ನಾಲ್ಕಾರು ಭಾಷೆಗಳನ್ನು ಅರೆಬರೆಯಾಗಿ ಕಲಿತರೆ, ಯಾವ ಭಾಷೆಯ ಸಾಹಿತ್ಯ, ಕಲೆ, ಸಂಸ್ಕೃತಿಯಲ್ಲೂ ಆಳವಾದ ಆಸಕ್ತಿ ಬೆಳೆಸಿಕೊಳ್ಳುವುದು ಕಷ್ಟ.
ಇದು ಕನ್ನಡ ಸಮಾಜಕ್ಕೂ ನಷ್ಟ, ಮುಸ್ಲಿಂ ಸಮುದಾಯಕ್ಕೂ ನಷ್ಟ. ಅದರಲ್ಲೂ ಸಾಮಾನ್ಯ ಮುಸ್ಲಿಂ ಕುಟುಂಬಗಳ ಪ್ರತಿಭಾವಂತ ಮಕ್ಕಳಿಗೆ ದೊಡ್ಡ ನಷ್ಟ.
ಖಾದರ್ ಅವರೇ, ಲ್ಯಾಂಗ್ವೇಜ್ ಲ್ಯಾಬ್ನಂತಹ ಫ್ಯಾನ್ಸಿ ಐಡಿಯಾಗಳ ಬದಲಿಗೆ, ಮುಸ್ಲಿಂ ಸಮುದಾಯ ಕನ್ನಡವನ್ನು ತಮ್ಮದೇ ಇನ್ನೊಂದು ನುಡಿಯಾಗಿ ಸ್ವೀಕರಿಸುವ, ಕನ್ನಡದೊಂದಿಗೆ ಒಡನಾಟ ಬೆಳೆಸುವ ಅಭಿಯಾನಕ್ಕೆ ಮುಂದಾಳತ್ವ ವಹಿಸಿ.
ಇದು ಭಾಷೆಗೂ ಒಳ್ಳೆಯದು, ಸಮುದಾಯಗಳ ನಡುವಿನ ಒಗ್ಗಟ್ಟಿಗೂ ಒಳ್ಳೆಯದು. @utkhader @DKShivakumar @CMofKarnataka @kdabengaluru
ಅಪರಿಚಿತರಿಗೆ ಫೋನ್ ನಂಬರ್ ಕೊಟ್ರು ಪರವಾಗಿಲ್ಲ,
ಆದರೆ ಈ ರಿಟೈರ್ಡ್ ಆಗಿರೋ ಅಂಕಲ್ಸ್ ಗೆ ಮಾತ್ರ ಅಪ್ಪಿ ತಪ್ಪಿಯೂ ಫೋನ್ ನಂಬರ್ ಕೊಡಬಾರ್ದು!
ದಿನ ಬೆಳಗಾದರೆ ಸರಸ್ವತಿ ಕಣಿವೆ, ಜಾರ್ಜ್ ಸೋರಸ್, ಹಿಂದೂ ರಾಷ್ಟ್ರ, ಗೋ ಮೂತ್ರದಿಂದ ಕ್ಯಾನ್ಸರ್ ನಿವಾರಣೆ…. ಕಳುಹಿಸ್ತಾನೆ ಇರ್ತಾರೆ.
ಭಾನು ಮುಷ್ತಾಕ್ ಬೂಕರ್ ಗೆದ್ದಾಗ್ಲೂ ಕೂಡ ಹಿಂಗೆ ಏನೋ ವ್ಯಂಗ್ಯ ದ ಟ್ವೀಟ್ ಬಂದಿತ್ತು.
ಒಟ್ಟಾರೆ ಹೊರ ದೇಶದಿಂದ ಬರುವ ಸುದ್ದಿಯಲ್ಲಿ ತಮ್ಮವರದ್ದು ಮಾತ್ರ ಇರಬೇಕು. ಅದು ಯಾವ ಧರ್ಮದವರಾದರೂ ಓಕೆ.
ಆದರೆ ಬೇರೆ ಭಾಷಿಕ ರಾಜ್ಯದವರ ಯಾವುದೇ ಸುದ್ದಿ ಬಂದರೂ ಸಹಿಸಲಾಗದ ನಾಡಿನವರು!
Yes, Bhatkal has had a few individuals linked to terrorism. No denying that.
But do you know what ELSE Bhatkal is known for?
Centuries of maritime trade, Nawayath heritage, Bhatkali biryani, ancient Jain basadis, historic temples and Murudeshwar.
A town’s history is far bigger than its few wrongdoers.
ಹೋಟೆಲ್ ಗಳಲ್ಲಿ, ಬ್ಯಾಂಕುಗಳಲ್ಲಿ ಅಥವಾ ಯಾವುದೇ ಕೌಂಟರ್ ಗಳಲ್ಲಿ ನಮಗೆ ಹಿಂದಿ ಗೊತ್ತಿದೆಯೋ ಇಲ್ಲವೋ ಎಂದು ಕೇಳದೆ ಏಕಾಏಕಿ ಹಿಂದಿಯಲ್ಲೇ ಉತ್ತರಿಸುತ್ತಿರುವ ಸಂದರ್ಭದಲ್ಲಿ ನಾವು ಕನ್ನಡದಲ್ಲಿ ಯಾಕೆ ಸರ್ವೀಸ್ ಇಲ್ಲ ಎಂದು ಪ್ರಶ್ನಿಸುತ್ತೇವೆ ಎಂದಿಟ್ಟುಕೊಳ್ಳಿ.
ಆಗ ಮಧ್ಯದಲ್ಲಿ translator service ಕೊಡೋಕೆ ಬರುವ ಜನರನ್ನು ಹೆಂಗೆ ಹ್ಯಾಂಡಲ್ ಮಾಡೋದು?
ಉಗಿದ್ರೆ ಬೇಜಾರ್ ಮಾಡ್ಕೋತಾರೆ.
ಉಗಿದೆ ಇದ್ರೆ ನಮಗೆ ಬೇಜಾರುಗುತ್ತೆ.
Kiran Kodlady | ಕಿರಣ್ ಕೊಡ್ಲಾಡಿ retweeted
This is historical movement in Kannada movement. Kudos to people who didn’t loose heart and worked for a decade. @ganeshchetan @kodlady @bbprakaashana
ದೇಶದ ವಿವಿಧ ರಾಜ್ಯಗಳ BJP ಘಟಕಗಳನ್ನು ಗಮನಿಸಿ. ತಮ್ಮ ರಾಜ್ಯದ ಹಕ್ಕುಗಳು, ಭಾಷೆ ಮತ್ತು ಜನರ ಹಿತಾಸಕ್ತಿಯ ವಿಚಾರ ಬಂದಾಗ ಹಲವು ರಾಜ್ಯಗಳ BJP ನಾಯಕರು ಪ್ರಾದೇಶಿಕ ಪಕ್ಷಗಳಿಗಿಂತ ಕಡಿಮೆಯೇನಿಲ್ಲ ಎನ್ನುವಂತೆ ಧ್ವನಿ ಎತ್ತುತ್ತಾರೆ. ಮಾತೃಸಂಘಟನೆಯಿಂದ ಒಂದು ಮಟ್ಟದ ಸ್ವಾಯತ್ತತೆಯನ್ನೂ ಉಳಿಸಿಕೊಂಡಂತೆ ಕಾಣುತ್ತಾರೆ.
ಈಗ ಕರ್ನಾಟಕದ BJP ಘಟಕವನ್ನು ನೋಡಿ.
ಕರ್ನಾಟಕದ ವಿಚಾರದಲ್ಲಿ BJP ಗಟ್ಟಿಯಾಗಿ ಧ್ವನಿ ಎತ್ತುವುದ ಕಾಣ ಸಿಗುವುದಿಲ್ಲ!
ಇಲ್ಲಿನ ರಾಜ್ಯ ಘಟಕಕ್ಕೆ ಸ್ವತಂತ್ರ ನಿಲುವು ತೆಗೆದುಕೊಳ್ಳುವ ಶಕ್ತಿ ಕಡಿಮೆಯೇ? ಅಥವಾ ಮಾತೃಸಂಘಟನೆಯ ಪ್ರಭಾವ ಇಲ್ಲಿ ಹೆಚ್ಚಿದೆಯೇ?
ಅಥವಾ Bunch of Thoughts ಪುಸ್ತಕದಲ್ಲಿ ಪ್ರತಿಪಾದಿಸಿರುವ ಸೈದ್ಧಾಂತಿಕ ಕಲ್ಪನೆಗೆ ಕರ್ನಾಟಕವೇ ಹೆಚ್ಚು ಹತ್ತಿರವಾಗಿದ್ದು, ಇಲ್ಲಿನ ಪ್ರಾದೇಶಿಕ ಅಸ್ಮಿತೆಯ ಪ್ರತಿಪಾದನೆ ಆ ಕಲ್ಪನೆಗೆ ಸವಾಲಾಗುತ್ತದೆ ಎಂಬ ಆತಂಕವೇ?





















