#ವಿಷ್ಣುವರ್ಧನ್ ಸಾಂಗ್ಸ್
ನಮ್ ದಾದ❤️
ಆಶ್ವಯುಜ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನ
#ಧನತ್ರಯೋದಶಿ, ಧನ್ವಂತರಿ ಜಯಂತಿ.
ಧನ್ವಂತರಿ ಜಯಂತಿ : ಆಯುರ್ವೇದದ ದೃಷ್ಟಿಯಿಂದ ಈ ದಿನವು ಧನ್ವಂತರಿ ಜಯಂತಿಯ ದಿನವಾಗಿದೆ.
ಧನತ್ರಯೋದಶಿ : ಈ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು ಪೂಜಿಸುತ್ತಾರೆ.
ಶುಭ ಶುಕ್ರವಾರ 🌹🌹🌹🌹
ಮಣ್ಣೇಮ್ಮಾ ದೇವಿ ದೇವಸ್ಥಾನ ಮಾನ್ಯಪುರ ಬೆಂಗಳೂರು ಗ್ರಾಮಾಂತರ ಇಂದಿನ ಮುಂಜಾನೆ ಪೂಜಾ ಅಲಂಕಾರ💐💐💐🚩🚩🚩06-11-2026*
#ವಿಷ್ಣುವರ್ಧನ್ ಸಾಂಗ್ಸ್
ಇತ್ತೀಚೆಗೆ ಎಲ್ಲರೂ ಡಾ.ವಿಷ್ಣುವರ್ಧನ್ ಅವರನ್ನು ಮರೆಯುತ್ತಾ ಇದ್ದಾರೆ.
ದುಡ್ಡು ಇದ್ರೆ ಜಗವೆಲ್ಲಾ
ದುಡ್ಡು ಇಲ್ದೆ ಏನಿಲ್ಲ...
#ವಿಷ್ಣುವರ್ಧನ್ ಸಾಂಗ್ಸ್
ತನ್ನ ಸಂತೋಷಕ್ಕಾಗಿ ತಪ್ಪು ದಾರಿಯನ್ನು ಹಿಡಿಯಬಾರದು,ಏಕೆಂದರೆ ನಮ್ಮ ಮೇಲೆ ನಂಬಿಕೆ ಇಟ್ಟವರ ಸಂತೋಷವನ್ನು ಕಿತ್ತುಕೊಳ್ಳುವ ಪಾಪ ಅದು.
ಕಾಲ ಎಲ್ಲರಿಗೂ ಅವಕಾಶವನ್ನು ಕೊಡುತ್ತದೆ,ಹಾಗಂತ ಎಲ್ಲದಕ್ಕೂ ಕಾಲಾವಕಾಶ ಕೊಡುವುದಿಲ್ಲ.
ನಿಜ ಅಲ್ವಾ
ಅಸಮಾಧಾನಕ್ಕೆ ಅನಗತ್ಯಅಸಮಂಜಸ ಅಯೋಗ್ಯಆಸೆಗಳು ಕಾರಣ
ಇವುಗಳಿಂದ ದೂರವಿರಲು ಸಾಧ್ಯವಾದರೆ,ಅಸಮಾಧಾನವು ಬಿಟ್ಟು ಹೋಗುತ್ತದೆ ಮತ್ತು ಜೀವನದಲ್ಲಿ ಸುಖ-ಶಾಂತಿ ಮಾತ್ರ ಕಾಣಿಸಿಕೊಳ್ಳುತ್ತದೆ ದುಃಖದ ಸಂಗತಿ ಅಂದ್ರೆ ಮಾನವನು ಈ ಆಸೆಗಳ ಮಾಯಾಜಾಲದಲ್ಲಿ ಸಿಲುಕಿ ದಾರಿ ತಪ್ಪುತ್ತಾನೆ.ಮಾಡಬಾರದದ್ದನ್ನೇ ಮಾಡುತ್ತಾ,ಮಾಡಬೇಕಾದದ್ದನ್ನು ಕಡೆಗಣಿಸುತ್ತಾನೆ.#gn
ನವಿಲಿನಂತೆ ನೀನು ಕುಣಿವಾಗ
ನನ್ನೆದೆಯಲ್ಲಿ ನೂರು ವೀಣೆ ಮೀಟಿದಂತೆ
ನಿನ್ನಲ್ಲೇನೋ ವಿಶೇಷತೆಯಿದೆ
ನಿನ್ನ ಕಂಡಾಗಲೆಲ್ಲಾ ಮನದ ಕೋಗಿಲೆ
ನಸು ನಾಚುತ್ತಲೇ ಮಾರ್ಧನಿಸುತ್ತದೆ...✍️
#ಲತಾಶಿವಕುಮಾರ್✍️
ಯಾವುದೇ ಕಷ್ಟ ಬಂದರು ತುಟಿಯಲ್ಲಿ ಕೊಂಚ ನಗುವಿರಲಿ..
ಯಾವುದೇ ಸಮಯದಲ್ಲಿ ಸೋತರು ಬೇಸರದ ಬದಲು ಸಣ್ಣ ನಗುವಿರಲಿ...
ಯಾಕೆಂದರೆ ನಮ್ಮನು ನಗಿಸಿವವರು ಯಾರು ಇರಲ್ಲ
ನಮ್ಮ ಕಾಳಜಿ ನಾವೇ ಮಾಡಿಕೊಳ್ಳಬೇಕು...
ನಮಗೆ ಎಷ್ಟೇ ಜ್ಞಾನವಿದ್ದರೂ ಕೆಲವೊಮ್ಮೆ ನಮ್ಮ ಲೆಕ್ಕಾಚಾರಗಳು
ತಪ್ಪಿ ಬಿಡುತ್ತವೆ. ಏಕೆಂದರೆ, ನಾವು ಕೂಡಿಸಿ ಗುಣಿಸುವಷ್ಟರಲ್ಲಿ,
ಮೇಲಿರುವ ಭಗವಂತ ನಮ್ಮನ್ನು ಭಾಗಿಸಿ ಕಳೆದಿರುತ್ತಾನೆ.
ಶುಭೋದಯ
ನಿನ್ನ ನೋಡಲಾರದೆ
ನಿನ್ನ ಮರೆಯಲಾರದೆ
ನಿನ್ನ ಜೊತೆ ಇರಲಾಗದೆ
ನಿನ್ನುಸಿರ ಕಾಯುವೆ
ನಾನು ಕಾವಲಾಗಿ
ನಿನಗಾಗಿ ನಿನ್ನುಸಿರಾಗಿ...✍️
#ಲತಾಶಿವಕುಮಾರ್✍️
#ನನ್ನುಸಿರಿಗೊಂದು_ಕವನ
ನಿನ್ನ ಪ್ರತಿ ರೂಪವದು
ಮನದಿ ಅಚ್ಚಾಗಿರಲು
ಮರೆವೆನೆಂದರೂ
ಮರೆಯಲು ಸಾಧ್ಯವೇ.
ನಿನ್ನುಸಿರೆ ನರನಾಡಿಯಲು
ಬೆರೆತಿರಲು ಜೀವ ತೊರೆಯಲು ಸಾಧ್ಯವೇ.
ಎದೆ ಬಡಿತವೇ ನಿನಾಗಿರಲು
ಇದು ನಾನೆನ್ನಲು ಸಾಧ್ಯವೇ.✍️
#ಲತಾಶಿವಕುಮಾರ್ ✍️







