ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಕರ್ನಾಟಕದ ಐತಿಹಾಸಿಕ ಸ್ಮಾರಕಗಳ ಪರಿಚಯ ಪತ್ರ ಮತ್ತು ಬೋರ್ಡ್ ಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಇತ್ತು. ಈ ಕುರಿತು ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ಪ್ರಾಧಿಕಾರ ಪತ್ರ ಬರೆದಿತ್ತು. ಅವರನ್ನು ಕಂಡು ಮನವಿ ಸಲ್ಲಿಸಲಾಗಿತ್ತು. ಈಗ ಕನ್ನಡದಲ್ಲಿ ಬೋರ್ಡುಗಳನ್ನು ಹಾಕಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶತಮಾನ ಕಂಡ ಶಾಲೆಗಳ ಕುರಿತು ( ಒಟ್ಟು ೩೧೧೯ ಶಾಲೆಗಳು) ಒಂದು ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದೆ. ಶ್ರೀ ಸುರೇಶ ಕಂಜರ್ಪಣೆಯವರು ವರದಿ ತಯಾರಿಕೆಗೆ ಸಹಾಯ ಮಾಡಿದ್ದಾರೆ. ಇವತ್ತಿನ ಪ್ರಜಾವಾಣಿ ಈ ಕುರಿತು ಮುಖಪುಟದಲ್ಲಿ ವರದಿ ಮಾಡಿದೆ.
ಶಾಂತಿಯುತವಾದ ಪ್ರತಿಭಟನೆಯನ್ನು ಅಪರಾಧವೆಂದು ಪರಿಗಣಿಸದೆ ಭಿನ್ನಾಭಿಪ್ರಾಯಗಳಿಗೆ ಅವಕಾಶ ಮಾಡಿಕೊಡುವುದೇ ಪ್ರಜಾಪ್ರಭುತ್ವದ ನಿಜವಾದ ಲಕ್ಷಣ. ಪ್ರಭುತ್ವ ಕಿವುಡಾದರೆ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಾಗುತ್ತವೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಆರ್ ಎಸ್ ಎಸ್ ಸಮಾವೇಶದ ಪ್ರಧಾನ ವೇದಿಕೆಯಲ್ಲಿ ಕನ್ನಡಕ್ಕೆ ಅವಕಾಶವನ್ನೇ ನೀಡಿಲ್ಲ. ನಮ್ಮ ನೆಲ, ನೀರು,ಗಾಳಿ, ಜನ ಎಲ್ಲ ಬೇಕು, ಆದರೆ ಭಾಷೆ ಮಾತ್ರ ಬೇಡ. ದತ್ತಾತ್ರೇಯ ಹೊಸಬಾಳೆಯವರು ಕನ್ನಡದವರಾಗಿದ್ದೂ ಹೀಗ್ಯಾಕೆ?
ಟಾಟಾವಿದ್ಯುತ್ ನಿಗಮ ಕರ್ನಾಟಕದಲ್ಲಿ ಕನ್ನಡ ಬಳಸಲಿ
eedina.com/karnataka-state/t…













