ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState) header
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState) profile picture

Progress is Clear, but there's more to do: Let's speed up efforts!

Dairy Circle,Bangalore-560029.
Joined July 2019
ಮಕ್ಕಳ ಸಹಾಯವಾಣಿಗೆ ಕರೆ ಬಂದ ಮಾಹಿತಿ ಆಧಾರದ ಮೇಲೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಶ್ರೀ ಸಾಯಿನಾಥ ಪೆಟ್ರೋಲಿಯಂ ಬಂಕ್ ಭೇಟಿ ನೀಡಿ ಬಾಲ ಕಾರ್ಮಿಕ ಮಕ್ಕಳ ತಪಾಸಣೆ ಮಾಡಲಾಯಿತು & ಸಂಗೂರು ಗ್ರಾಮದ ಹೊರವಲಯದ ಕಬ್ಬಿನ ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಕಾರ್ಮಿಕರಿಗೆ ಅರಿವು ಮೂಡಿಸಲಾಯಿತು.
36
ಬಳ್ಳಾರಿ ನಗರದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಿವಿಧ ಉದ್ಯಮೆಗಳ ಮೇಲೆ ಆಕಸ್ಮಿಕ ದಾಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಹೋಟೆಲ್, ಗ್ಯಾರೇಜ್ ಮುಂತಾದ ಉದ್ದಿಮೆಗಳಲ್ಲಿ ಒಟ್ಟು 03 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು.
38
ದ. ಕ ಜಿಲ್ಲೆಯ ಮಂಗಳೂರು ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪಿಸ್ ಕಟಿಂಗ್ ಯೂನಿಟ್ ನಲ್ಲಿ ಪಶ್ಚಿಮ ಬಂಗಾಳ ಮೂಲದ ಓರ್ವ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪುನರ್ವಸ್ತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು.
27
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಮಾರ್ಗದರ್ಶಿ ಸಂಸ್ಥೆ ಸಹಯೋಗದೊಂದಿಗೆ ಯಾದಗಿರಿ ನಗರದ ವಿವಿಧ ಇಟ್ಟಿಗೆ ನಿರ್ಮಾಣ ಭಟ್ಟಿ ಗಳಿಗೆ ತೆರಳಿ ಮಕ್ಕಳನ್ನು ದುಡಿಸಿಕೊಳ್ಳದಂತೆ ಜಾಗೃತಿಯನ್ನು ಮೂಡಿಸಲಾಯಿತು.
61
ಕಲಬುರ್ಗಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ ಅಡಿಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಬಾ/ಕಿಕಾ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
32
ಚಾಮರಾಜನಗರ ತಾಲ್ಲೂಕು ಸಂತೆ ಮರಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಾಲ್ಯವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ನಡೆಸಲಾಯಿತು.
47
ಚಿತ್ರದುರ್ಗ ಜಿಲ್ಲೆಯ ಹಿರಿಯೂರ್ ತಾಲೂಕಿನಲಿ ಮಾನ್ಯ ಮುಖ್ಯಮಂತ್ರಿ ಗಳಾದ ಶ್ರೀ DK ಶಿವಕುಮಾರ್ ರವರು ಪ್ರಜಾ ಸೇವೆ ಕಾರ್ಯಕ್ರಮವನ್ನು ಉದ್ದಗಾಟಿಸಿದ್ದು ಸದರಿ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಇಂದ ಕಾರ್ಮಿಕ ಸವಲಭ್ಯ ಮಾಹಿತಿ ನೀಡುವ ಸ್ಟಾಲ್ ಹಾಕಲಾಯಿತು.
36
ಬಳ್ಳಾರಿ ನಗರದಲ್ಲಿ ವಿವಿಧ ಉದ್ಯಮೆಗಳ ಮೇಲೆ ಆಕಸ್ಮಿಕ ದಾಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಹೋಟೆಲ್, ದ್ವಿಚಕ್ರ ವಾಹನ ರಿಪೇರಿ ಶಾಫ್ ನಲ್ಲಿ, ಬೇಕರಿ, ಗ್ಯಾರೇಜ್ ಮುಂತಾದ ಉದ್ದಿಮೆಗಳಲ್ಲಿ ಒಟ್ಟು 9 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಿ ಪಡಿಸಲಾಯಿತು.
39
ಧಾರವಾಡ ಜಿಲ್ಲೆಯ ಅಳ್ಳಾವರ ತಾಲೂಕಿನ ವ್ಯಾಪ್ತಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಂಡದೊಂದಿಗೆ ಜೀತ ಕಾರ್ಮಿಕ/ ಬಾ/ಕಿಕಾರ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ವಿವಿಧ ಅಂಗಡಿ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು.
73
ಹಾವೇರಿ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಾವೇರಿ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಮಿಕ ಇಲಾಖೆಯಲ್ಲಿ ಇರುವ ಕಾಯ್ದೆಗಳು, ಸೌಲಭ್ಯಗಳು, ಮಂಡಳಿಗಳು ಹಾಗೂ ಮಂಡಳಿಗಳಲ್ಲಿರುವ ಸೌಲಭ್ಯಗಳು, ಮತ್ತು ನಿಯಂತ್ರಣ ) ಕಾಯ್ದೆ -1986 ಕುರಿತು ಮಾನ್ಯ ಕಾರ್ಮಿಕ ಅಧಿಕಾರಿಗಳು ಜಾಗೃತಿ ಮೂಡಿಸಿದರು.
69
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಬರಂಪುರ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ & ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಲ್ಯ ಅವಸ್ಥೆ ಹಾಗು ಕಿಶೋರಾವಸ್ಥೆ , ಕಾರ್ಮಿಕ ಪದ್ಧತಿ ನಿಷೇಧ ಕುರಿತಂತೆ ಉಪನ್ಯಾಸ ನೀಡಲಾಯಿತು .
37