ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState) header
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState) profile picture

Progress is Clear, but there's more to do: Let's speed up efforts!

Dairy Circle,Bangalore-560029.
Joined July 2019
Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)Photo by ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ (@ChildState)
ಮಕ್ಕಳ ಸಹಾಯವಾಣಿಗೆ ಕರೆ ಬಂದ ಮಾಹಿತಿ ಆಧಾರದ ಮೇಲೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಶ್ರೀ ಸಾಯಿನಾಥ ಪೆಟ್ರೋಲಿಯಂ ಬಂಕ್ ಭೇಟಿ ನೀಡಿ ಬಾಲ ಕಾರ್ಮಿಕ ಮಕ್ಕಳ ತಪಾಸಣೆ ಮಾಡಲಾಯಿತು & ಸಂಗೂರು ಗ್ರಾಮದ ಹೊರವಲಯದ ಕಬ್ಬಿನ ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಕಾರ್ಮಿಕರಿಗೆ ಅರಿವು ಮೂಡಿಸಲಾಯಿತು.
36
ಬಳ್ಳಾರಿ ನಗರದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಿವಿಧ ಉದ್ಯಮೆಗಳ ಮೇಲೆ ಆಕಸ್ಮಿಕ ದಾಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಹೋಟೆಲ್, ಗ್ಯಾರೇಜ್ ಮುಂತಾದ ಉದ್ದಿಮೆಗಳಲ್ಲಿ ಒಟ್ಟು 03 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು.
38
ದ. ಕ ಜಿಲ್ಲೆಯ ಮಂಗಳೂರು ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪಿಸ್ ಕಟಿಂಗ್ ಯೂನಿಟ್ ನಲ್ಲಿ ಪಶ್ಚಿಮ ಬಂಗಾಳ ಮೂಲದ ಓರ್ವ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪುನರ್ವಸ್ತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು.
27
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಮಾರ್ಗದರ್ಶಿ ಸಂಸ್ಥೆ ಸಹಯೋಗದೊಂದಿಗೆ ಯಾದಗಿರಿ ನಗರದ ವಿವಿಧ ಇಟ್ಟಿಗೆ ನಿರ್ಮಾಣ ಭಟ್ಟಿ ಗಳಿಗೆ ತೆರಳಿ ಮಕ್ಕಳನ್ನು ದುಡಿಸಿಕೊಳ್ಳದಂತೆ ಜಾಗೃತಿಯನ್ನು ಮೂಡಿಸಲಾಯಿತು.
61
ಕಲಬುರ್ಗಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ ಅಡಿಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಬಾ/ಕಿಕಾ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
32
ಚಾಮರಾಜನಗರ ತಾಲ್ಲೂಕು ಸಂತೆ ಮರಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಾಲ್ಯವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ನಡೆಸಲಾಯಿತು.
47
ಚಿತ್ರದುರ್ಗ ಜಿಲ್ಲೆಯ ಹಿರಿಯೂರ್ ತಾಲೂಕಿನಲಿ ಮಾನ್ಯ ಮುಖ್ಯಮಂತ್ರಿ ಗಳಾದ ಶ್ರೀ DK ಶಿವಕುಮಾರ್ ರವರು ಪ್ರಜಾ ಸೇವೆ ಕಾರ್ಯಕ್ರಮವನ್ನು ಉದ್ದಗಾಟಿಸಿದ್ದು ಸದರಿ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಇಂದ ಕಾರ್ಮಿಕ ಸವಲಭ್ಯ ಮಾಹಿತಿ ನೀಡುವ ಸ್ಟಾಲ್ ಹಾಕಲಾಯಿತು.
36
ಬಳ್ಳಾರಿ ನಗರದಲ್ಲಿ ವಿವಿಧ ಉದ್ಯಮೆಗಳ ಮೇಲೆ ಆಕಸ್ಮಿಕ ದಾಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಹೋಟೆಲ್, ದ್ವಿಚಕ್ರ ವಾಹನ ರಿಪೇರಿ ಶಾಫ್ ನಲ್ಲಿ, ಬೇಕರಿ, ಗ್ಯಾರೇಜ್ ಮುಂತಾದ ಉದ್ದಿಮೆಗಳಲ್ಲಿ ಒಟ್ಟು 9 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಿ ಪಡಿಸಲಾಯಿತು.
39
ಧಾರವಾಡ ಜಿಲ್ಲೆಯ ಅಳ್ಳಾವರ ತಾಲೂಕಿನ ವ್ಯಾಪ್ತಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಂಡದೊಂದಿಗೆ ಜೀತ ಕಾರ್ಮಿಕ/ ಬಾ/ಕಿಕಾರ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ವಿವಿಧ ಅಂಗಡಿ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು.
73
ಹಾವೇರಿ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಾವೇರಿ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಮಿಕ ಇಲಾಖೆಯಲ್ಲಿ ಇರುವ ಕಾಯ್ದೆಗಳು, ಸೌಲಭ್ಯಗಳು, ಮಂಡಳಿಗಳು ಹಾಗೂ ಮಂಡಳಿಗಳಲ್ಲಿರುವ ಸೌಲಭ್ಯಗಳು, ಮತ್ತು ನಿಯಂತ್ರಣ ) ಕಾಯ್ದೆ -1986 ಕುರಿತು ಮಾನ್ಯ ಕಾರ್ಮಿಕ ಅಧಿಕಾರಿಗಳು ಜಾಗೃತಿ ಮೂಡಿಸಿದರು.
69
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಬರಂಪುರ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ & ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಲ್ಯ ಅವಸ್ಥೆ ಹಾಗು ಕಿಶೋರಾವಸ್ಥೆ , ಕಾರ್ಮಿಕ ಪದ್ಧತಿ ನಿಷೇಧ ಕುರಿತಂತೆ ಉಪನ್ಯಾಸ ನೀಡಲಾಯಿತು .
37
ಮಲ್ಪೆ ಬಂದರಿನಲ್ಲಿ ಮಕ್ಕಳು ಮೀನು ಆಯುತ್ತಿರುವ ಕುರಿತು ಮಲ್ಪೆ ಬಂದರಿನ ಸಾರ್ವಜನಿಕರ ದೂರವಾಣಿ ಕರೆ ಮೂಲಕ ಬಂದ ಅನ್ವಯ ಮಕ್ಕಳ ರಕ್ಷಣಾ ಘಟಕ ಪೋಲಿಸ್ ಇಲಾಖೆ ಅಕ್ಕಪಡೆ ಹಾಗೂ ಕಾರ್ಮಿಕ ನಿರೀಕ್ಷಕರೊಂದಿಗೆ ಜಂಟಿ ತಪಾಸಣೆ ನಡೆಸಲಾಯಿತು ತದನಂತರ ವಿವಿಧ ವಾಣಿ ಸಂಸ್ಥೆಗಳಿಗೆ ಭೇಟಿ ನೀಡಿ ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು.
29
ಕಾರ್ಮಿಕ ನಿರೀಕ್ಷಕರು ಹೊನ್ನಾವರರವರ ನೇತೃತ್ವದಲ್ಲಿ ಕಲಂ 17 ರಡಿ ನೇಮಕ ಗೊಂಡ ವಿವಿಧ ಇಲಾಖೆಗಳ ನಿರೀಕ್ಷಕರ ಜೊತೆ ಬಾಲ ಹಾಗೂ ಕಿಶೋರ್ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಜಾಗ್ರತಿ ಕರ ಪತ್ರ ಹಾಗೂ ಬಿತ್ತಿ ಪತ್ರಗಳನ್ನು ಅಂಗಡಿ, ಬೇಕರಿ ಹಾಗೂ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಜಾಗ್ರತಿ ಮೂಡಿಸಲಾಯಿತು.
39
ತಹಶೀಲ್ದಾರರು ಮೊಳಕಾಲ್ಮೂರು ಇವರ ಅಧ್ಯಕ್ಷತೆಯಲ್ಲಿ TTF ಸಭೆಯನ್ನು ಆಯೋಜಿಸಲಾಗಿದ್ದು. ನಂತರ ಮೊಳಕಾಲ್ಮುರು ತಾಲೂಕಿನ ರಾಂಪುರದಲ್ಲಿ ವಿವಿಧ ಅಂಗಡಿ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಶೋರೂಮಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಕಾರನ್ನು ಪತ್ತೆ ಹಚ್ಚಿ ಕೆಲಸದಿಂದ ಬಿಡುಗಡೆಗೊಳಿಸಿ CWC ಚಿತ್ರದುರ್ಗ ಇವರಿಗೆ ಹಾಜರುಪಡಿಸಲಾಯಿತು.
75
ಬಾಲ ಕಾರ್ಮಿಕ ದೂರು ಸ್ವೀಕೃತವಾದ ಹಿನ್ನೆಲೆಯಲ್ಲಿ, ಇಂದು ಬೆಂಗಳೂರಿನ ಜೀವನ್ ಭೀಮಾ ನಗರದ 10ನೇ ಕ್ರಾಸ್‌ನಲ್ಲಿ ನಡೆಸಿದ ದಿಢೀರ್ ದಾಳಿಯ ವೇಳೆ, ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ 17 ವರ್ಷದ ಹದಿಹರೆಯದ ಬಾಲಕನನ್ನು ರಕ್ಷಿಸಿ,ಮುಚ್ಚಳಿಕೆ ಪತ್ರದೊಂದಿಗೆ ಆತನ ಚಿಕ್ಕಪ್ಪನ ವಶಕ್ಕೆ ಸುರಕ್ಷಿತವಾಗಿ ಒಪ್ಪಿಸಲಾಯಿತು.
1
72
1098 ಮಕ್ಕಳ ಸಹಾಯವಾಣಿ ದೂರಿನ ಅನ್ವಯ ದಿನಾಂಕ 18.11.2026 ರಂದು ಬೀಳಗಿ ತಾಲೂಕಿನ ಕುಂದರಗಿ ಗ್ರಾಮದಲ್ಲಿರುವ ಜಮ್ ಶುಗರ್ ಫ್ಯಾಕ್ಟರಿ ಹತ್ತಿರವಿರುವ ಕ್ಯಾಂಟೀನ್ ಗೆ ಅನಿರೀಕ್ಷಿತ ಭೇಟಿ ನೀಡಿ ಬಾಲ ಮತ್ತು ಕಿಶೋರ ಕಾರ್ಮಿಕರ ಕೆಲಸ ಮಾಡುತ್ತಿರುವ ಕುರಿತು ಅಧಿಕಾರಿಗಳ ತಂಡ ಪರಿಶೀಲನೆ ಮಾಡಲಾಯಿತು.
48
ಜಿಲ್ಲಾ ಕಾರ್ಮಿಕ ಅಧಿಕಾರಿಗಳ ನೇತೃತ್ವದಲ್ಲಿ ಚಾಮರಾಜನಗರ ತಾಲ್ಲೂಕಿನ ವಿವಿಧ ಕ್ರಷರ್ & ಕಲ್ಲು ಗಣಿಗಳಿಗೆ ಭೇಟಿ ನೀಡಿ ಬಾಲಕಾರ್ಮಿಕರ ತಪಾಸಣೆ ನಡೆಸಲಾಯಿತು ಆ ಸಂದರ್ಭದಲ್ಲಿ ಕಲ್ಲು ಗಣಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ 1 ಕಿಶೋರ ಕಾರ್ಮಿಕರನ್ನು ಗುರುತಿಸಿ ಕೆಲಸದಿಂದ ಬಿಡಿಸಿ ಮುಂದಿನ ಕ್ರಮಕ್ಕಾಗಿ ಬಾಲಕರ ಬಾಲ ಮಂದಿರಕ್ಕೆ ದಾಖಲಿಸಲಾಗಿದೆ.
54
ದ. ಕ ಜಿಲ್ಲೆಯ ಮಂಗಳೂರು ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪ್ಲೇವುಡ್ ಫ್ಯಾಕ್ಟರಿಯ ಮಾಲೀಕರು ಹಾಗೂ ಕಾರ್ಮಿಕರಿಗೆ ಬಾಲ ಕಾರ್ಮಿಕ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಯಿತು.
40
ಮಕ್ಕಳ ಸಹಾಯವಾಣಿ ದೂರಿನನ್ವಯ ವಿಜಯಪುರ ನಗರದಲ್ಲಿ ದಿನಾಂಕ: 18-11-2026 ರಂದು ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಸ್ವೀಕರ್ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
52
ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯಲ್ಲಿ ಹೋಬಳಿ ಮಟ್ಟದ ತಂಡದಿಂದ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ಮಾಡಿ ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬಾರದೆಂದು ಕಾನೂನಿನ ಅರಿವು ಮೂಡಿಸಲಾಯಿತು.
37