Construction Workers Welfare Board (@WorkersBoard) header
Construction Workers Welfare Board (@WorkersBoard) profile picture

Karnataka Building And Other Construction Workers Welfare Board

Dairy Circle, Bengaluru.
Joined September 2019
Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)Photo by Construction Workers Welfare Board (@WorkersBoard)
ಕೀರ್ತನೆಗಳ ಮೂಲಕ ಜನರ ಮೌಢ್ಯದ ಬಗ್ಗೆ ಅರಿವು ಮೂಡಿಸಿದ ಶ್ರೇಷ್ಠ ಸಂತ, ಸಮಾನತೆಯ ಸಮಾಜಕ್ಕಾಗಿ ಶ್ರಮಿಸಿದ ಚಿಂತಕ, ದಾಸ ಶ್ರೇಷ್ಠ ಭಕ್ತ ಕನಕದಾಸರ ಅವರ ಜಯಂತಿಯಂದು ಗೌರವ ನಮನಗಳು. #Kanakadasajayanti
5
373
ಕಾರ್ಮಿಕರ ಹಕ್ಕುಗಳ ರಕ್ಷಣೆ, ಸಮಾನತೆ ಮತ್ತು ಘನತೆಯ ಬದುಕಿಗೆ ಸಂವಿಧಾನದ ಆಶಯಗಳನ್ನು ಗೌರವಿಸೋಣ. ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯಕ್ಕೆ ಸದಾ ಆದ್ಯತೆ ಸಿಗಲಿ. #ConstitutionDay #NationalConstitutionDay #WorkersRights #KBOCWWB #ಶ್ರಮಮೇವ_ಜಯತೇ
1
320
ಕಾರ್ಮಿಕರು ಮಂಡಳಿ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾರ್ಮಿಕ ಕಾರ್ಡ್ ಹೊಂದಿರುವುದು ಕಡ್ಡಾಯ. ನಕಲಿ ದಾಖಲೆಗಳನ್ನು ನೀಡಿ ಕಾರ್ಮಿಕ ಕಾರ್ಡ್ ಪಡೆದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
2
362
Construction Workers Welfare Board retweeted
"With nearly 93% of India’s workforce employed in the unorganised sector, the challenges and struggles faced by migrant workers deserve our consideration. Regardless of any unorganised sector they come from,every worker’s dignity, welfare and rights must remain our priority." #ShramevaJayathe
2
1
10
588
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಜಾಸೇವೆ ಆಂದೋಲನದಲ್ಲಿ ಕಾರ್ಮಿಕ ಇಲಾಖೆಯ ವಿವಿಧ ಮಂಡಳಿಗಳ ಮಳಿಗೆಗಳನ್ನು ತೆರೆಯಲಾಗಿತ್ತು. ಈ ಮಳಿಗೆಗಳಲ್ಲಿ ಮಂಡಳಿಗಳಿಂದ ನೋಂದಾಯಿತ ಕಾರ್ಮಿಕರಿಗೆ ನೀಡಲಾಗುತ್ತಿರುವ ಹಲವು ಯೋಜನೆಗಳು ಹಾಗೂ ಪ್ರಯೋಜನಗಳ‌ ಮಾಹಿತಿಯನ್ನು ನೀಡಲಾಯಿತು. #KBOCWWB #ಕಾರ್ಮಿಕ_ಇಲಾಖೆ
4
453
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರೇ, ಮಂಡಳಿಯು ಸೂಚಿಸಿರುವ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಮಂಡಳಿಯು ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ನಕಲಿ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಂಡು ಮಂಡಳಿಯ ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
2
410
ರೈಲ್ವೆ ಮಾರ್ಗದ ಬಳಿ ಕೆಲಸ ಮಾಡುವಾಗ ಕಾರ್ಮಿಕರು ರೈಲುಗಳ ಚಲನವಲದ ಮೇಲೆ ವಿಶೇಷವಾಗಿ ಗಮನ ಇಡಬೇಕು. ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಧರಿಸಬೇಕು. ರೈಲುಗಳು ಸಂಚರಿಸುವ ಸಮಯ, ಹಳಿ ಇತ್ಯಾದಿ ಮಾಹಿತಿ ಇಟ್ಟುಕೊಂಡಿರಬೇಕು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
8
363
ಇಟ್ಟಿಗೆಗಳನ್ನು ಕಟ್ಟಡದ ಒಳಭಾಗ ಮತ್ತು ಹೊರಗಡೆ ಸರಿಯಾದ ಕ್ರಮದಲ್ಲಿ ಜೋಡಿಸಬೇಕು. ಇಲ್ಲದಿದ್ದರೆ ಕುಸಿದುಬೀಳುವ ಅಪಾಯವಿರುತ್ತದೆ. ಇಟ್ಟಿಗೆಗಳ ಮೇಲೆ ಯಾವುದೇ ನಿರ್ಮಾಣ ಸಾಮಗ್ರಿಗಳನ್ನು ಜೋಡಿಸುವುದು ಬೇಡ. ಅಲ್ಲದೆ ಜೋಡಿಸಿದ ಇಟ್ಟಿಗೆಗಳ ಸಮೀಪ ವಿಶ್ರಾಂತಿ ಪಡೆಯಬೇಡಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
4
380
ಕಟ್ಟಡ ನಿರ್ಮಾಣಕ್ಕೆ ಬಳಸುವ ಭಾರವಾದ ವಸ್ತುಗಳನ್ನು ಸಾಗಿಸುವಾಗ, ಎತ್ತುವಾಗ ಕಾರ್ಮಿಕರು ಅಗತ್ಯ ಮಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸರಿಯಾದ ದೇಹ ಭಂಗಿ ಕಡೆ ಗಮನ ಇಡಬೇಕು. ಬೃಹತ್‌ ಯಂತ್ರಗಳನ್ನು ಬಳಸಿ ವಸ್ತುಗಳನ್ನು ಎತ್ತುವಾಗಲೂ ಎಚ್ಚರಿಕೆ ವಹಿಸಬೇಕು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
1
337
ಹಳೆಯ ಕಟ್ಟಡಗಳನ್ನು ದುರಸ್ತಿ ಮಾಡುವ ವೇಳೆ ಅಪಾಯದ ಅಂಶಗಳನ್ನು ಮೊದಲಿಗೆ ತಿಳಿದುಕೊಳ್ಳಬೇಕು. ದುರ್ಬಲ ಗೋಡೆ, ಬಾಗಿಲು ಮತ್ತು ಕಿಟಕಿಗಳನ್ನು ಗಮನಿಸಬೇಕು. ಹಾಳಾಗಿರುವ ವಿದ್ಯುತ್‌ ಸಂಪರ್ಕಗಳ ಕಡೆಗೂ ಎಚ್ಚರವಿರಬೇಕು. ಕೆಲಸ ನಡೆಯುವ ಸ್ಥಳಗಳಿಗೆ ಜನರ ಪ್ರವೇಶ ತಡೆಯಲು ಸೂಕ್ತ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
3
334
ವಾಲ್‌ ಪ್ಯಾನೆಲಿಂಗ್‌ ಕೆಲಸದ ವೇಳೆ ಕಾರ್ಮಿಕರು ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತೀ ಅವಶ್ಯ. ಗೋಡೆಗಳಲ್ಲಿನ ಅಪಾಯದ ಅಂಶಗಳನ್ನು ಮೊದಲಿಗೆ ತಿಳಿದುಕೊಂಡು ಕೆಲಸ ನಿರ್ವಹಿಸಬೇಕು. ಎತ್ತರದಲ್ಲಿ ಕೆಲಸ ಮಾಡುವಾಗ ಅಗತ್ಯವಾದ ಸಾರ್ವೆ ಇಲ್ಲವೇ ಅಟ್ಟಣಿಗೆ ಮಾಡಿಕೊಂಡಿರಬೇಕು. ಗ್ಲೌಸ್‌, ಹೆಲ್ಮೆಟ್‌, ಬೂಟ್‌ಗಳನ್ನು ಕಡ್ಡಾಯವಾಗಿ ಧರಿಸಿರಬೇಕು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
3
299
ಭೂಮಿಯ ಸಮತಟ್ಟು ಕೆಲಸದ ವೇಳೆ ಸಾಮಾನ್ಯವಾಗಿ ಬೃಹತ್‌ ಯಂತ್ರಗಳನ್ನು ಬಳಸಲಾಗುತ್ತದೆ. ಆದ್ದರಿಂದ ಈ ಯಂತ್ರಗಳಿಂದ ಸುರಕ್ಷಿತ ಅಂತರ ಕಾಪಾಡುವುದು ಅತೀ ಅವಶ್ಯ. ಸಮತಟ್ಟು ಮಾಡಬೇಕಾದ ಜಾಗದ ಪರಿಶೀಲನೆಯೂ ಮುಖ್ಯ. ಸೂಕ್ತ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
1
288
ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಜೀವರಕ್ಷಕಗಳು. ಸೂಕ್ತ ಸಮಯದಲ್ಲಿ ಪ್ರಥಮ ಚಿಕಿತ್ಸೆ ದೊರೆತರೆ ಮುಂದಾಗುವ ದೊಡ್ಡ ಆರೋಗ್ಯ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಆದ್ದರಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳ ಉಪಯೋಗ ಪಡೆಯುವುದನ್ನು ಕಾರ್ಮಿಕರು ತಿಳಿದಿರುವುದು ಅತೀ ಅವಶ್ಯ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
1
248
ಫ್ರಿ ಫ್ಯಾಬ್ರಿಕೇಟೆಡ್‌ ಕಾಂಕ್ರಿಟ್‌ ಸ್ಲ್ಯಾಬ್‌ಗಳನ್ನು ತಯಾರು ಮಾಡುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಇವುಗಳು ತೂಕವಾಗಿದ್ದು, ಹರಿತವಾದ ಅಂಚುಗಳನ್ನು ಹೊಂದಿರುವ ಕಾರಣ, ತಯಾರು ಮಾಡಿ ಅಳವಡಿಕೆಯ ಜಾಗಕ್ಕೆ ಸಾಗಿಸುವಾಗ ಎಚ್ಚರ ವಹಿಸಬೇಕು. ಸೂಕ್ತ ಉಸ್ತುವಾರಿ, ಮಾರ್ಗದರ್ಶನದಲ್ಲೇ ಕೆಲಸ ಮಾಡಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
5
385
ಚಿಕ್ಕನಾಯಕನಹಳ್ಳಿಯ ತೀ.ನಂ.ಶ್ರೀ ಭವನದಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡಲಾದ ಸುರಕ್ಷತಾ ಕಿಟ್‌ಗಳನ್ನು ಮಾನ್ಯ ಶಾಸಕರಾದ ಶ್ರೀ ಸುರೇಶ್ ಬಾಬು ಸಿ.ಬಿ. ಅವರು ವಿತರಿಸಿದರು. ಈ ವೇಳೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
1
278
ನಕಲಿ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಇದರಿಂದ ಅರ್ಹ ಫಲಾನುಭವಿಗಳಿಗೆ ಮಂಡಳಿಯ ಸೌಲಭ್ಯಗಳು ಪಡೆಯಲು ತೊಂದರೆಯಾಗಲಿದೆ. ನಕಲಿ ಕಾರ್ಮಿಕ ಕಾರ್ಡ್‌ ಪಡೆದಿದ್ದರೆ ಕೂಡಲೇ ವಾಪಸ್‌ ಮಾಡಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
2
416
ಕಟ್ಟಡಗಳಿಗೆ ಪ್ಲಂಬಿಂಗ್‌ ಕೆಲಸವು ಅಗತ್ಯವಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಕೆಲಸ ಮಾಡಬೇಕಿದೆ. ಎತ್ತರದ ಕಟ್ಟಡಗಳಲ್ಲಿ ಗೋಡೆಗಳ ಮೇಲೆ ಪೈಪ್‌ ಜೋಡಿಸಬೇಕಾದರೆ ಸೂಕ್ತ ಅಟ್ಟಣಿಗೆ ಇಲ್ಲವೇ ಸಾರ್ವೆ ಇರಲೇಬೇಕು. ಹೆಲ್ಮೆಟ್, ಬೆಲ್ಟ್‌ ಹಾಗೂ ಕೈಗವಸು ಧರಿಸಿರಬೇಕು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
1
309
ಗಾಜಿನ ಹಾಳೆಗಳನ್ನು ಜೋಡಿಸುವ ಸ್ಪೈಡರ್‌ ಗ್ಲೇಜಿಂಗ್‌ ಕೆಲಸವು ಸೂಕ್ಷ್ಮವಾಗಿದ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿಯೇ ನಿರ್ವಹಿಸಬೇಕು. ಬೃಹತ್‌ ಕಟ್ಟಡಗಳಲ್ಲಿ ಎತ್ತರದ ಕೆಲಸ ಮಾಡುವ ಸೂಕ್ತ ಬೆಲ್ಟ್‌ ಹಾಗೂ ಹೆಲ್ಮೆಟ್‌ಗಳನ್ನು ಧರಿಸಿರಬೇಕು. ಮಳೆ, ಬಿಸಿಲಿನ ವೇಳೆಯಲ್ಲಿ ಕೆಲಸ ಮಾಡಬೇಕಾದರೂ ಎಚ್ಚರವಹಿಸಬೇಕು. ಒಟ್ಟಾರೆ ಸುರಕ್ಷತೆಯೇ ಆದ್ಯತೆಯಾಗಿರಲಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
3
332
ನಿರ್ಮಾಣ ಹಂತದ ಕಟ್ಟಡಗಳ ಸಮೀಪ ಹಾದು ಹೋಗಿರುವ ವಿದ್ಯುತ್‌ ಮಾರ್ಗಗಳ ಬಗ್ಗೆ ಕಾರ್ಮಿಕರು ಎಚ್ಚರಿಕೆ ವಹಿಸಬೇಕು. ವಿದ್ಯುತ್‌ ಮಾರ್ಗದ ಮೇಲೆ ನಿರ್ಮಾಣ ಸಾಮಗ್ರಿಗಳು ಬೀಳದಂತೆ ನೋಡಿಕೊಳ್ಳಿ. ಕಂಬಗಳ ಸಮೀಪ ಯಾವುದೇ ನಿರ್ಮಾಣ ಸಾಮಗ್ರಿ ಸಂಗ್ರಹಿಸಬೇಡಿ. ಸಂಬಂಧಿಸಿದ ಅಧಿಕಾರಿಗಳ ಅನುಮತಿ ಇಲ್ಲದೆ ಕಂಬಗಳನ್ನು ಸ್ಥಳಾಂತರಿಸಬೇಡಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
2
309
ರಾಜ್ಯದ ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪಡೆಯಲು ಸಹಾಯ ಒದಗಿಸಲು 43 ಕಾರ್ಮಿಕ ಅಧಿಕಾರಿಗಳ ವ್ಯಾಪ್ತಿಯಲ್ಲಿ ಡಾ. ಬಿ. ಆರ್. ಅಂಬೇಡ್ಕ‌ರ್ ಕಾರ್ಮಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಸಂಚಾರಿ ಕಾರ್ಮಿಕ ಸೇವಾ ಕೇಂದ್ರಗಳೂ ಕಾರ್ಯನಿರ್ವಹಿಸುತ್ತಿವೆ. ನಿಮ್ಮ ಹತ್ತಿರದ ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
2
487