Construction Workers Welfare Board retweeted
"With nearly 93% of India’s workforce employed in the unorganised sector, the challenges and struggles faced by migrant workers deserve our consideration. Regardless of any unorganised sector they come from,every worker’s dignity, welfare and rights must remain our priority."
#ShramevaJayathe
Construction Workers Welfare Board retweeted
ಕಾರ್ಮಿಕ ಬಂಧುಗಳೇ, ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ
ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಕ್ಕೆ ಬಳಸುವ ಉಪಕರಣಗಳನ್ನು ಸುರಕ್ಷಿತವಾಗಿ ಬಳಸಿ. ಉಪಕರಣಗಳ ಬಳಕೆಯ ಕುರಿತ ಸರಿಯಾದ ತರಬೇತಿಯನ್ನು ಪಡೆಯಿರಿ. ವಿದ್ಯುತ್ ಚಾಲಿತ ಸಲಕರಣೆಗಳ ಬಳಕೆಯ ನಂತರ ಸ್ವಿಚ್‌ಗಳನ್ನು ಆಫ್ ಮಾಡಿ. ಉಪಕರಣಗಳನ್ನು ಬಳಸುವ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ. ಕೆಲಸಕ್ಕೆ ಬಳಸುವ ಸಲಕರಣೆಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ.
Construction Workers Welfare Board retweeted
ಕಾರ್ಮಿಕರ ಕನಿಷ್ಠ ವೇತನವನ್ನು 60% ಏರಿಕೆ ಮಾಡಿ ನಮ್ಮ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ನಾಡಿನ ಶ್ರಮಿಕರ ಬಹು ವರ್ಷಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ.
ಈ ಅಧಿಸೂಚನೆಯು ರಾಜ್ಯದ ಅಸಂಘಟಿತ ವಲಯ ಹಾಗೂ ನಿರ್ದಿಷ್ಟ ವಲಯಗಳ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸಲಿದೆ. ಕನಿಷ್ಠ ವೇತನ ನಿರ್ಧರಿಸುವಾಗ ಸುಪ್ರೀಂ ಕೋರ್ಟ್ ನ ಘನ ನ್ಯಾಯ ಪೀಠದ ನಿರ್ದೇಶನವನ್ನು ಪಾಲಿಸಿ, ಈ ಪರಿಷ್ಕರಣೆ ಮಾಡಲಾಗಿದೆ. ಅಲ್ಲದೇ, ಈ ಮೊದಲಿದ್ದ ನಾಲ್ಕು ವಲಯಗಳ ವರ್ಗೀಕರಣದ ಬದಲಾಗಿ ಇದೇ ಮೊದಲ ಬಾರಿಗೆ ಎಲ್ಲ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ. ಒಟ್ಟಿನಲ್ಲಿ ನಾಡಿನ 81 ಅನುಸೂಚಿತ ಉದ್ಯೋಗಗಳಲ್ಲಿ ದುಡಿಯುವ ಲಕ್ಷಾಂತರ ಶ್ರಮಿಕರ ಬಾಳಿಗೆ ಈ ಪರಿಷ್ಕೃತ ವೇತನ ಹೊಸ ಭರವಸೆ ತುಂಬಲಿದೆ.
ನಮ್ಮ ಕಾರ್ಮಿಕ ಇಲಾಖೆಯ ಇಂತಹ ದಿಟ್ಟ ನಿರ್ಧಾರಕ್ಕೆ ಸಲಹೆ ಸೂಚನೆಗಳನ್ನು ನೀಡಿ, ಪ್ರೋತ್ಸಾಹಿಸಿದ ಮಾನ್ಯ @CMofKarnataka ಶ್ರೀ @siddaramaiah ಅವರಿಗೆ, ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರಿಗೆ ಹಾಗೂ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ಅಮೂಲ್ಯ ಸಲಹೆಗಳನ್ನು ನೀಡಿದ ಎಲ್ಲ ತಜ್ಞರಿಗೆ ಸಮಸ್ತ ಶ್ರಮಿಕ ವರ್ಗದ ಪರವಾಗಿ ತುಂಬು ಹೃದಯದ ಧನ್ಯವಾದಗಳು.
#ಶ್ರಮೇವಜಯತೇ #MinimumWages #Karnataka #SantoshLad
Construction Workers Welfare Board retweeted
ಕಾರ್ಮಿಕ ಕಲ್ಯಾಣದ ಹಾದಿಯಲ್ಲಿ,
ಯಶಸ್ವಿ ಮೂರು ವರ್ಷ
ನೆಮ್ಮದಿಯ ಸಾರ್ಥಕ ಹರ್ಷ!
#ಶ್ರಮೇವಜಯತೇ #FakeCard
#FakeLabourCard
#Karnataka #GoK | @WorkersBoard
Construction Workers Welfare Board retweeted
Today, a significant meeting was held at Vidhana Soudha with the team of the Consul General of Israel regarding contract job opportunities available in #Israel and various Middle Eastern countries for workers from different sectors, including construction workers from the state.
An initial round of discussions was conducted on this matter, and I have instructed the officials to submit a detailed report on the feasibility and implementation of these opportunities.
#ShramevaJayathe
Construction Workers Welfare Board retweeted
ಕಾರ್ಮಿಕ ಕಲ್ಯಾಣದ ಹಾದಿಯಲ್ಲಿ,
ಯಶಸ್ವಿ ಮೂರು ವರ್ಷ
ನೆಮ್ಮದಿಯ ಸಾರ್ಥಕ ಹರ್ಷ!
#ಶ್ರಮೇವಜಯತೇ #TransitAccomodation #ಶ್ರಮಿಕ_ತಾತ್ಕಾಲಿಕ_ವಸತಿ_ಸಮುಚ್ಛಯ
#Karnataka #GoK | @WorkersBoard
Construction Workers Welfare Board retweeted
ಕಾರ್ಮಿಕ ಕಲ್ಯಾಣದ ಹಾದಿಯಲ್ಲಿ,
ಯಶಸ್ವಿ ಮೂರು ವರ್ಷ
ನೆಮ್ಮದಿಯ ಸಾರ್ಥಕ ಹರ್ಷ!
#ಶ್ರಮೇವಜಯತೇ #MobileHealthVans #ClinicOnWheels #Karnataka #GoK
Construction Workers Welfare Board retweeted
ಕಾರ್ಮಿಕ ಇಲಾಖೆ ವ್ಯಾಪ್ತಿಯ ವಿವಿಧ ಇಲಾಖೆಯ ವಿಬಿಧ ಮಂಡಳಿಗಳಿಗೆ ನೇಮಕವಾದ 85 ನೌಕರರಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನೇಮಕಾತಿ ಆದೇಶ ವಿತರಿಸಿ ಮಾತನಾಡಿದೆ.
ಶಾಸಕರಾದ ಶ್ರೀ ಕೆ ಎಂ ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಿಲ್ಕೀಸ್ ಬಾನು, ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
#ಶ್ರಮೇವಜಯತೇ
Construction Workers Welfare Board retweeted
ನಮ್ಮ ಸರ್ಕಾರ ಮೊದಲಿಂದಲೂ ಶ್ರಮಿಕರ ತೋಳುಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಲೇ ಬರುತ್ತಿದೆ. ಕಾಯಕವನ್ನೇ ನಂಬಿ ಶ್ರಮದಾನ ಮಾಡುವ ಎಲ್ಲ ವಲಯಗಳ ಕಾರ್ಮಿಕರಿಗೆ ಸಾಮಾಜಿಕ, ಆರ್ಥಿಕ ಹಾಗೂ ಜೀವನ ಭದ್ರತೆ ಒದಗಿಸಲು ಕಾರ್ಮಿಕ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಟಿಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿವೆ.
#ಶ್ರಮೇವಜಯತೇ
Construction Workers Welfare Board retweeted
ನಾಡಿನ ಶ್ರಮಿಕರ ಕಲ್ಯಾಣದ ಕೈಂಕರ್ಯದಲ್ಲಿ ಸಾರ್ಥಕ ಸಾವಿರ ದಿನಗಳು!
#ಶ್ರಮಮೇವಜಯತೇ #SantoshLad
Construction Workers Welfare Board retweeted
ಸನ್ಮಾನ್ಯ @CMofKarnataka ಶ್ರೀ @siddaramaiah ಅವರ ನೇತೃತ್ವದ ನಮ್ಮ ಸರ್ಕಾರಕ್ಕೆ ಒಂದು ಸಾವಿರ ದಿನ ತುಂಬಿದ ಸಂದರ್ಭದಲ್ಲಿ 'ಉದಯಕಾಲ' ಪತ್ರಿಕೆಗೆ ನೀಡಿದ ಸಂದರ್ಶನ.
Construction Workers Welfare Board retweeted
ಇಂದು ನಮ್ಮ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಹಾಗೆಯೇ ಪದೋನ್ನತಿಗೊಂಡಿರುವ ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶ್ರೀ ಮೊಹಮ್ಮದ್ ಮೊಹಸೀನ್ ಅವರಿಗೆ ಶುಭ ಹಾರೈಸಲಾಯಿತು.
#NewYear2026 #ಶ್ರಮೇವಜಯತೇ
Construction Workers Welfare Board retweeted
📍 ವಿಧಾನಸಭೆ, ಸುವರ್ಣಸೌಧ, ಬೆಳಗಾವಿ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ @HPoonja ಅವರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಒದಗಿಸಲಾಯಿತು.
#WinterSession2025 #Karnataka #Belagavi #GoK | @WorkersBoard
Construction Workers Welfare Board retweeted
ಚಳಿಗಾಲದ ಅಧಿವೇಶನ
📍ಸುವರ್ಣಸೌಧ, ಬೆಳಗಾವಿ
ಪ್ರಶ್ನೋತ್ತರ ವೇಳೆಯಲ್ಲಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಯು.ಬಿ. ಬಣಕಾರ್ ಅವರ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ಒದಗಿಸಲಾಯಿತು.
#WinterSession2025 #Karnataka #Belagavi
Construction Workers Welfare Board retweeted
ರಾಜ್ಯದ ಶ್ರಮಿಕರಿಗೆ ಕಾನೂನು ಸಹಾಯ ಹಸ್ತ
ನ್ಯಾಯಾಲಯಗಳಲ್ಲಿ ಕಾರ್ಮಿಕರು, ಕಾರ್ಮಿಕ ಸಂಘಗಳು ಮತ್ತು ಆಡಳಿತ ಮಂಡಳಿಗಳ ಬಾಕಿ ಉಳಿದ ದಾವೆಗಳನ್ನು ಇತ್ಯರ್ಥಪಡಿಸಲು ಕಾರ್ಮಿಕ ಇಲಾಖೆ ವತಿಯಿಂದ ಕಾನೂನು ನೆರವು ನೀಡುವ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ.
ಇದಕ್ಕಾಗಿ ಕಾರ್ಮಿಕ ಕಾನೂನುಗಳ ಕುರಿತು ಜ್ಞಾನವಿರುವ ವಕೀಲರ ಪಟ್ಟಿ ರಚಿಸಲು ಕಾರ್ಮಿಕ ಇಲಾಖೆ ಮುಂದಾಗಿದ್ದು, ಈ ಪ್ರಸ್ತಾವನೆಗೆ ಸರ್ಕಾರ ಕೂಡ ಅನುಮೋದನೆ ನೀಡಿದೆ.
ಕಾರ್ಮಿಕರ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಮತ್ತಷ್ಟು ಸಮರ್ಥವಾಗಿ ನಿರ್ವಹಿಸಲು ಈ ಹೆಜ್ಜೆ ಸಹಕಾರಿಯಾಗಲಿದೆ.
#ಶ್ರಮಮೇವಜಯತೇ #LabourLaw #Karnataka #LegalAid #LegalHelp
Construction Workers Welfare Board retweeted
ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ.
ಇಡೀ ದೇಶಕ್ಕೇ ಮಾದರಿಯಾಗಬಲ್ಲಂತಹ ವಿಧೇಯಕವೊಂದು ಬಾಕಿ ಪ್ರಕ್ರಿಯೆಗಳ ನಂತರ ಕೆಲವೇ ದಿನಗಳಲ್ಲಿ ಕಾನೂನು ರೂಪ ಪಡೆಯಲಿದೆ. ಇಂತಹ ಅಪೂರ್ವ ಯೋಜನೆಯೊಂದನ್ನು ರೂಪಿಸಿ , ಅನುಷ್ಠಾನಕ್ಕೆ ತಂದ ಹೆಗ್ಗಳಿಕೆ ನಮ್ಮ ಕಾರ್ಮಿಕ ಇಲಾಖೆ ಹಾಗೂ ರಾಜ್ಯ ಸರ್ಕಾರದ್ದಾಗಲಿದೆ.
ಈ ಮಸೂದೆಗೆ ಮುಕ್ತ ಬೆಂಬಲ ಮತ್ತು ಪ್ರಶಂಸೆ ನೀಡಿದ ಎಲ್ಲರಿಗೂ ಧನ್ಯವಾದಗಳು.
#GigWorkersBill2025 #GigWorkers #GigWorkersWelfareBoard #Karnataka #GoK | @RahulGandhi | @siddaramaiah | @DKShivakumar | @MBPatil | @PriyankKharge | @INCKarnataka | @INCIndia | @ksuwssb | @WorkersBoard
Construction Workers Welfare Board retweeted
ನಮ್ಮ ಕಾರ್ಮಿಕ ಇಲಾಖೆಯು ನೂತನವಾಗಿ ಆರಂಭಿಸಲು ಉದ್ದೇಶಿಸಿರುವ ಶ್ರಮಿಕ ವಸತಿ ಶಾಲೆಯನ್ನು ತಮ್ಮ ಕ್ಷೇತ್ರಕ್ಕೂ ಮಂಜೂರು ಮಾಡುವಂತೆ ವಿಧಾನಸಭೆಯ ಅಧಿವೇಶನದಲ್ಲಿ ಇಂದು ಕೋರಿದ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಯು ಬಿ ಬಣಕಾರ್ ಅವರಿಗೆ ಸಮರ್ಪಕ ಉತ್ತರವನ್ನು ಒದಗಿಸಲಾಯಿತು.
ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಭವಿಷ್ಯಕ್ಕಾಗಿ ಹಂತ ಹಂತವಾಗಿ ರಾಜ್ಯದಾದ್ಯಂತ ಶ್ರಮಿಕ ವಸತಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದೇನೆ.
#ಶ್ರಮೇವಜಯತೇ #KarnatakaLegislativeCouncil #KBOCWWB #ShramikResidentialSchool #Karnataka #GoK
Construction Workers Welfare Board retweeted
ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರ ಲಕ್ಷಾಂತರ ಮಕ್ಕಳು, ವಿವಿಧ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ವಸತಿ ಸಹಿತ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ರೂಪಿಸಬೇಕು ಎಂಬ ನಮ್ಮ ಸರ್ಕಾರದ ಹಂಬಲ ಕೊನೆಗೂ ತಾರ್ಕಿಕ ಅಂತ್ಯ ಕಾಣುತ್ತಿದೆ.
ಶ್ರಮಿಕರ ಅಭ್ಯುದಯಕ್ಕಾಗಿ ಮಿಡಿಯುವ ನಮ್ಮ ಸರ್ಕಾರದ ಬದ್ಧತೆ ನಿರಂತರವಾಗಿರಲಿದೆ.
#ಶ್ರಮಮೇವಜಯತೇ | @WorkersBoard
Construction Workers Welfare Board retweeted
ಕೆಲಸಕ್ಕಾಗಿ ವಲಸೆ ಬರುವ ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರಿಗಾಗಿ ನಿರ್ಮಿಸಿರುವ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಈ ಸಮುಚ್ಚಯಗಳು, ಕಾರ್ಮಿಕರ ಕುಟುಂಬ ನೆಮ್ಮದಿಯಾಗಿ ವಾಸಿಸಲು ಬೇಕಾದ ಎಲ್ಲ ಮೂಲಭೂತ ವ್ಯವಸ್ಥೆಗಳನ್ನು ಹೊಂದಿದ್ದು, ಅವರಿಗೆ ಸುರಕ್ಷತೆಯನ್ನೂ ಸಹ ಒದಗಿಸುತ್ತವೆ.
ರಾಜ್ಯದ ಹಲವು ಭಾಗಗಳಲ್ಲಿ ಇಂತಹ ವಸತಿ ಸಮುಚ್ಚಯಗಳು ನಿರ್ಮಾಣವಾಗುತ್ತಿದ್ದು, ಹಂತ ಹಂತವಾಗಿ ಲೋಕಾರ್ಪಣೆಗೊಳಿಸಲಾಗುವುದು.
#ಶ್ರಮಮೇವಜಯತೇ | @WorkersBoard
Construction Workers Welfare Board retweeted
ಜನರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ಕೊಡುವುದು ಸಾಧನೆಯಲ್ಲ, ನಮ್ಮ ಹೊಣೆಯೆಂದು ತಿಳಿದು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ. ಕಳೆದೆರೆಡು ವರ್ಷಗಳ ನಮ್ಮ ಸರ್ಕಾರದ ಕೆಲವು ಪ್ರಮುಖ ಕಾರ್ಯಕ್ರಮಗಳ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ನಿಮ್ಮ ಬೆಂಬಲವೇ ನಮ್ಮ ಬಲ.
- ಮುಖ್ಯಮಂತ್ರಿ @siddaramaiah
#ಪ್ರಗತಿಯತ್ತ_ಕರ್ನಾಟಕ #2yearsOfGuaranteeSarkara
























