ನಾನು (@acharya2) header
ನಾನು (@acharya2) profile picture
Joined April 2010
Photo by ನಾನು (@acharya2)Photo by ನಾನು (@acharya2)Photo by ನಾನು (@acharya2)Photo by ನಾನು (@acharya2)Photo by ನಾನು (@acharya2)Photo by ನಾನು (@acharya2)Photo by ನಾನು (@acharya2)Photo by ನಾನು (@acharya2)Photo by ನಾನು (@acharya2)Photo by ನಾನು (@acharya2)
ನಾನು retweeted
ಬೆಳಗೊಳ ಸ್ವಾಮಿಗಿ ಮಳೆ ಬಂದರಭಿಷೇಕ ಸಿಡಿಲ ಮಿಂಚೆಲ್ಲ ದವಪುಷ್ಪ | ತಾರಿಕೆಚಿಕ್ಕಿ ಅರ್ಘ್ಯ ಬೆಳಗಾಳ ಪದುಮವ್ವ || #ಶ್ರವಣಬೆಳಗೊಳ
3
16
1
33
ನಾನು retweeted
#WATCH | I am determined to change the mindset that makes families feel ashamed of their children pursuing ITI courses. ITI students deserve the same respect as IIT graduates. Industries rely on their skills and hard work to function. I take immense pride in honouring these young achievers and recognising the dignity of skilled work: PM @narendramodi at the 5th Kaushal Deekshant Samaroh in Lucknow, Uttar Pradesh. #KaushalDeekshantSamaroh #SkillIndia #SkillDevelopment #ViksitBharat
248
1,430
325
6,000
1,526,678
ಅನ್ವೇಷಣೆ · ಆಟ ಮತ್ತು ವಿನೋದ ಕರ್ನಾಟಕದ ಹಳೆಯ ಆಟಗಳು ಮತ್ತು ವಿನೋದ ಆಸ್ಥಾನದ ಚದುರಂಗದಿಂದ ಹಳ್ಳಿಯ ಚಿನ್ನಿದಾಂಡುವರೆಗೆ, ಜಾತ್ರೆಯ ಸ್ಪರ್ಧೆಗಳಿಂದ ಇಂದಿನ ಮೈದಾನದವರೆಗೆ. ಇಲ್ಲಿರುವುದು ಸಂಶೋಧನೆಯ ಆರಂಭದ ಪಟ್ಟಿ: ಪ್ರತಿ ಸಾಲಿನಲ್ಲಿ ಆಕರವನ್ನು ಓದಲಾಗಿದೆಯೇ ಇಲ್ಲವೇ ಎಂದು ತೋರಿಸಿದ್ದೇವೆ. karnata.sanchaya.net @rollthedice_in
1
5
9
403
ನಾನು retweeted
ಇಂದು ಪೂರ್ಣವಾಯಿತು ನಾನು @supersharma ಮತ್ತು @acharya2 ಸೇರಿ ಓದುತ್ತಿದ್ದ ಲಕ್ಷ್ಮೀಶ ಭಾರತದ ಅಧ್ಯಯನ. ಸ್ವಲ್ಪ ಜಾಸ್ತಿನೇ Time togonDvi. Mainly due to schedule coordination challenges. ಅದರೆ ಚೆನ್ನಾಗಿತ್ತು. ಹಾಸ್ಯ, ಹರಟೆ, ಹೊಸ ತಿಳಿವು (innEnu ha inda hOLeetilla) ಎಲ್ಲಾ ಇತ್ತು. :) Onto next mahakaavya now
2
3
21
645
chandassu.sanchaya.net ಇದನ್ನೂ ಒಮ್ಮೆ ನೋಡಿ 😇
1
1
3
266
ಕರ್ನಾಟಕದ ಇತಿಹಾಸ ಅಟ್ಲಸ್‌ - ಆಟ - ಪಾಠ
11
28
1,041
ನಾನು retweeted
Replying to @Adhikaprasang
@acharya2 brahmiakshara.com/ ಈ website ನೋಡಿದ್ದೀರ? This also has chndas related tool
1
1
148
Beautiful! virUpAksha by the same karNATa sAmrAjya on the ceiling of lEpAKshi
Ceiling mural. Virupaksha Temple. Hampi. Karnataka.
1
10
67
1,388
ಇಂತಹ ಟಿಪ್ಪಣಿಗಳನ್ನ ಆಗಿಂದಾಗ್ಗೆ ನಾನು ಹಾಕುತ್ತಿರುತ್ತೇನೆ - ಉದ್ದೇಶ ಬೇರೆಯವರು ಓದಲೇಬೇಕೆಂದಲ್ಲ, ಆದರೆ, ನಾನು ಇನ್ನೆಲ್ಲೋ ಮಾಡಿರುವ ಟಿಪ್ಪಣಿಗಳು , ಯೋಚನಾ ಸರಣಿ ಕಳೆದು ಹೋಗಬಾರದು ಎಂದಷ್ಟೇ. ಏಕೆಂದರೆ, ಬಹಳ ಹಿಂದೆ ಕರ್ನಾಟಕ ಸಂಗೀತ ದ ಬಗ್ಗೆ ಚರ್ಚಿಸುತ್ತಿದ್ದ ಹಲವಾರು ಸೈಟ್ ಗಳು ಇಂದಿಲ್ಲ ( ಸಂಗೀತಂ.ಕಾಂ. ಕಾರ್ನಾಟಿಕಾ, ಫೋರಂ ಹಬ್, ರಸಿಕಾಸ್.ಆರ್ಗ್ ಹೀಗೆ) - ಹಾಗಾಗಿ ನಾನು ಬರೆದದ್ದೆಲ್ಲ ನನಗೇ ಸಿಕ್ಕದೇ ಹೋದವು. ಅದಿರಲಿ. ಇದು #ಪೆಗ್ಗಿಮೋಹನ್ ಅವರ ಪುಸ್ತಕದ ಬಗ್ಗೆ, ಮತ್ತು ಅದರ ಬಗ್ಗೆ #ವಸುಧೇಂದ್ರ ಅವರು ಮಾತಾಡಿದ್ದ ಬಗ್ಗೆ, ನಾನು ಫೇಸ್ ಬುಕ್ ನಲ್ಲಿ ಹಾಕಿದ್ದ ಟಿಪ್ಪಣಿಗಳು - (೧) ವಸುಧೇಂದ್ರ ಅವರೆ ನಮಸ್ಕಾರ. ನಿಮ್ಮ ಈ ವಿಡಿಯೋ ನೋಡಿದೆ. ಬಹಳ ನಿರಾಸೆ ಹಾಗೂ ಬೇಸರವಾಯಿತು. ನಿಮ್ಮ ಮಾತಿನಲ್ಲಿ (ಮತ್ತು ಅದು ಆಧರಿಸಿರುದ್ದ ಪೆಗ್ಗಿ ಮೋಹನ್ ಅವರ ಪುಸ್ತಕದಲ್ಲಿ) ಹಲವು ತಪ್ಪು ಅಭಿಪ್ರಾಯಗಳು, ಕಲ್ಪನೆಗಳು ಇವೆ. ಹೈಪಾಥೆಸಿಸ್ ಮತ್ತೆ ಸತ್ಯ ಒಂದೇ ಆಗಿರಬೇಕಿಲ್ಲ ಎಂಬ ತಾಂತ್ರಿಕ ವಿಷಯ ಎಂಜಿನಿಯರ್ ಆದ ನಿಮಗೆ ಗೊತ್ತಿಲ್ಲದ್ದೇನಲ್ಲ ಎಂದು ನಾನು ನಂಬಿದ್ದೇನೆ. ಆದರೆ ನಿಮ್ಮ ಮಾತಿನಲ್ಲಿ ಅದು ಮೂಡಿಬಂದಿಲ್ಲ. ನಿಮ್ಮಂತಹ ಪ್ರಸಿದ್ಧ ಲೇಖಕರು ಇಂಥ ವಿಷಯಗಳನ್ನು ಮಾತಾಡುವಾಗ ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಎಚ್ಚರ ಅಗತ್ಯ. ಏಕೆಂದರೆ ನಿಮ್ಮ ಮಾತನ್ನು ಕೇಳುವವರು , ಅದನ್ನು ಪೂರ್ಣ ಸತ್ಯವೆಂದು ನಂಬುವವರು ಸಾವಿರಾರು ಜನರಿದ್ದಾರೆ. ಆ ಎಚ್ಚರವನ್ನು ನೀವಿಲ್ಲಿ ವಹಿಸಲಿಲ್ಲ. #ಸಂಸ್ಕೃತ ಕ್ಕೆ #ಲಿಪಿ ಇಲ್ಲ, ಎಂದೂ ಹೆಂಗಸರು ಸಂಸ್ಕೃತ ಅರಿಯಲಿಲ್ಲ, ಸಂಸ್ಕೃತವೇ ಬೇರೆ, #ಪ್ರಾಕೃತ ವೇ ಬೇರೆ, ಸಂಸ್ಕೃತದಿಂದ #ಮಲೆಯಾಳ ಭಾಷೆಯನ್ನು ಬಿಟ್ಟು ಬೇರಾವ ಭಾಷೆಗಳೂ ನೇರವಾಗಿ ಪದಗಳನ್ನು ತೆಗೆದುಕೊಳ್ಳಲಿಲ್ಲ ಎಂಬಂಥ ತಪ್ಪುತಪ್ಪಾದ ಸಿದ್ಧಾಂತಗಳನ್ನುಳ್ಳ ಪೆಗ್ಗಿ ಮೋಹನ್ ರ ಪುಸ್ತಕವನ್ನು ನೀವಿಷ್ಟು ನೆಚ್ಚಿದ್ದು ಬಹಳ ಆಘಾತಕಾರಿ ಸಂಗತಿ. #ವ್ಯಾಸ ರು ಹುಟ್ಟಿದ ಕಥೆಯನ್ನು ಹೇಳುವ ಮಹಾಭಾರತವೇ ಅದೇ ಸಮಯದಲ್ಲಿ ನಡೆದ ನೂರಾರು ವಿವಾಹಗಳ ಕಥೆಯನ್ನೂ ಹೇಳುತ್ತದೆ. ಅದನ್ನೆಲ್ಲ ಪೆಗ್ಗಿ ಮೋಹನ್ ಗಮನಿಸದೇ ಒಂದು ಠರಾವು ಕೊಟ್ಟು ಬಿಟ್ಟಿರಬಹುದು. ಆದರೆ ಮಹಾಭಾರತದ ಕಥೆಯನ್ನು ಬಲ್ಲ ನೀವು ಗಮನಿಸಲಿಲ್ಲವೇ? ವ್ಯಾಸರ ಸಮಯದಲ್ಲಿ ಹುಟ್ಟಿದ್ದು ಆತನೊಬ್ಬನೇ? ಉಳಿದವರದ್ದೆಲ್ಲ ಕಥೆ ಏನು? ಗಂಡು ಮಕ್ಕಳನ್ನೆಲ್ಲ ಐದು ವರ್ಷಗಳಿಗೆ ಎಲ್ಲೋ ಕರೆದುಕೊಂಡು ಹೋಗಿ ಅವರನ್ನು"ಆರ್ಯ"ರನ್ನಾಗಿ ಮಾಡುವ ಹುನ್ನಾರವಿತ್ತು ಅನ್ನುವ ರೀತಿ ನೀವು ಮಾತಾಡುವ ಮೊದಲು ಒಮ್ಮೆ ನೀವೇ ಯೋಚಿಸಬೇಕಿತ್ತಲ್ಲವೇ? ಇಂಗ್ಲಿಷ್ ನಲ್ಲಿ ಬಂದ ಮಾತ್ರಕ್ಕೆ, ಪೆಂಗ್ವಿನ್ ನವರು ಪ್ರಕಟಮಾಡಿದ್ದಕ್ಕೆ ಅಲ್ಲಿದ್ದದ್ದೆಲ್ಲ ನಿಜವಾಗಿರಬೇಕಿಲ್ಲ! ಅಂದಹಾಗೆ ಇನ್ನು ಈ "ಎಡಿಟಿಂಗ್" ಅನ್ನುವುದು ಇಂಗ್ಲಿಷ್ ನವರ ಸ್ವತ್ತೇನೂ ಅಲ್ಲ. #ಕುಮಾರವ್ಯಾಸ ನಂತಹ ಒಬ್ಬ ಕವಿ "ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ, ಪದವಿಟ್ಟಳುಪದೊಂದಗ್ಗಳಿಕೆ" ಎಂದು ಹೇಳಿರಬಹುದು. ಆದರೆ ಕುಮಾರವ್ಯಾಸನಂಥವರು ಭಾರತೀಯ ಸಾಹಿತ್ಯವೊಂದೇ ಅಲ್ಲ ಪ್ರಪಂಚದಲ್ಲಿ ಎಲ್ಲೂ ವಿರಳವೇ. ನಮ್ಮ ಕವಿಗಳೂ , ವಿದ್ವಾಂಸರೂ ತಮ್ಮ ರಚನೆಗಳನ್ನು ಇತರ ವಿದ್ವಾಂಸರಲ್ಲಿ ಓದಿಸಿ, ತಿದ್ದಿ ತೀಡುತ್ತಿದ್ದ ವಿಷಯ ನಮಗೆ ಅವರವರ ಪುಸ್ತಕಗಳಲ್ಲೇ ತಿಳಿಯುತ್ತದೆ. ಇದು ಎಡಿಟಿಂಗ್ ಅಲ್ಲದೆ ಮತ್ತೇನು? ಇನ್ನು ತಮ್ಮ"ಸಾಹಿತ್ಯವನ್ನು ಬೇರೆಯವರಿಗೆ ತಿಳಿಸಬಾರದೆಂದು" ಬರೆಯದೇ ಇದ್ದ "ಆರ್ಯರು" ಅದೇ ವೇದದಲ್ಲಿ "ಆರ್ಯವಲ್ಲದ" ಟ ಠ ಡ ಢ ಣ ಗಳನ್ನು ಸೇರಿಸಿಕೊಂಡು, ಉಳಿಸಿಕೊಂಡರು ಅನ್ನುವುದು ನಂಬುವ ಮಾತೇ? ಬಹಳ ಹಿಂದೆ ಲಿಪಿ ಇರಲಿಲ್ಲ. ಲಿಪಿ ಬಂದ ನಂತರವೂ ಅದನ್ನು ಉಳಿಸಿಕೊಳ್ಳುವ ಬರೆಯುವ ಸಾಮಗ್ರಿಯ ಕೊರತೆ ಇತ್ತು. ಹಾಗಾಗಿ ಬರಹ ಬಂದ ನಂತರವೂ ಪದ್ಯ ಮಾರ್ಗದಲ್ಲಿ ಸೂತ್ರ ಮಾರ್ಗದಲ್ಲಿ ಪುಸ್ತಕಗಳನ್ನು ನೆನಪಿನಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಮ್ಮವರು ಮಾಡಿದ್ದಾರೆ, ಎಲ್ಲ ಭಾಷೆಗಳಲ್ಲಿ. ನಿಮ್ಮದೇ ವಾದಸರಣಿಯನ್ನು ನೋಡಿದರೆ, ಕನ್ನಡದ ತ್ರಿಪದಿಗಳಲ್ಲಿರುವ ನೂರಾರು ಜನಪದ ಪದ್ಯಗಳನ್ನು ಕೂಡ, "ಬೇರೆಯವರು ಕಲಿಯಬಾರದೆಂದು" ಪದ್ಯಗಳಲ್ಲಿ ಕಟ್ಟಿ, ಅದನ್ನು ಬರೆಯದೇ ಇಟ್ಟು, ಬಾಯಿಂದ ಬಾಯಿಗೆ ಹೋಗುವಂತೆ ಮಾಡಿದರು ಎಂದು ಹೇಳಬಹುದಲ್ಲ? ಇಲ್ಲೇ ಈ ವಾದ ಟೊಳ್ಳು ಅನ್ನುವುದು ಪ್ರಕಟವಾಗುತ್ತೆ. ಅಲ್ಲವೇ? ಭಾಷೆ, ಸಾಹಿತ್ಯ, ಸಂಸ್ಕೃತಿಗಳ ವಿದ್ಯಾರ್ಥಿಯಾಗಿ, ಓದುಗನಾಗಿ, ಅಭಿಮಾನಿಯಾಗಿ ಈ ಮಾತುಗಳನ್ನು ಹೇಳಬೇಕೆನಿಸಿತು. ನೀವು ಹೇಳಿದ್ದನ್ನೇ ವೇದವಾಕ್ಯವೆಂದು ನಂಬಿ ಅದನ್ನು ಹಂಚುವ ಹಲವರಿರುತ್ತಾರೆ. ಏಕೆಂದರೆ ಎಲ್ಲರಿಗೂ ಸ್ವಂತ ಅಧ್ಯಯನ ಕಷ್ಟಸಾಧ್ಯ. ಹಾಗಾಗಿ, ಬೇರೆಯವರ ಒಳಿತಿಗಾಗಿಯಾದರೂ, ಬೇಕಾದ ಎಚ್ಚರಿಕೆಯನ್ನು ನೀವು ವಹಿಸುತ್ತೀರೆಂದು ನಾನು ನಂಬಿರುವೆ. (೨) ಸಂಸ್ಕೃತವೊಂದೇ ಏಕೆ, ಯಾವ ಭಾಷೆಗೂ ಮೊದಲು ಲಿಪಿಯಿರಲಿಲ್ಲ (ಇರುವುದಿಲ್ಲ) - ಏಕೆಂದರೆ ಮಾತು ಮೊದಲು ಬರೆಹ ನಂತರ. ಕನ್ನಡದ ಮೊದಲ ದಾಖಲೆ ಸಿಕ್ಕಿರುವುದು ಸಾಮಾನ್ಯಶಕ 2-3 ನೇ ಶತಮಾನದಲ್ಲಿ. ಅದಕ್ಕೆ ಮೊದಲು ಕನ್ನಡ ಇರಲಿಲ್ಲವೆಂದು ತಿಳಿಯೋಣವೇ? ಅಥವಾ ಆಗ ಬರವಣಿಗೆಗೆ ಕನ್ನಡವನು ಒಳಪಡಿಸಿದರು ಎಂದು ತಿಳಿಯೋಣವೇ? ಸಂಸ್ಕೃತಕ್ಕೂ ಹಾಗೇ. ಲಿಪಿಯಿಲ್ಲದ ಕಾಲ ಒಂದಿತ್ತು. ಒಂದು ಕಾಲದಲ್ಲಿ ಬರೆಹದ ಶಕ್ತಿಯನ್ನರಿತ ಮೇಲೆ, ಬರೆವಣಿಗೆ ಬಂದಿತು. ಅದು ಬಂದ ನಂತರವೂ ಮೌಖಿಕ ಪರಂಪರೆಯೂ ಜೊತೆಗೇ ಮುಂದುವರೆಯಿತು. ಮುದ್ರಣ ಸಾಧ್ಯವಾಗುವತನಕ ನೆನಪಿನಲ್ಲಿಡುವುದಕ್ಕೆ ಇರುತ್ತಿದ್ದ ಹೆಚ್ಚಾಯ ತಿಳಿದೇ ಇದೆ. #ಪಾಣಿನಿ ಯ ಕಾಲಕ್ಕಾಗಲೆ ಲಿಪಿ ಇತ್ತು ಎಂಬುದು ನಿರ್ವಿವಾದ. ಈ ಬಗ್ಗೆ ನೀವು ವಾಸುದೇವ ಶರಣ ಅಗ್ರವಾಲ ಅವರ India as known to Panini ಪುಸ್ತಕವನ್ನು ಓದಬಹುದು. ವ್ಯಾಸ #ವಾಲ್ಮೀಕಿ ಯರು ಬರಹವನ್ನು ಪ್ರಸ್ತಾಪ ಮಾಡಿಲ್ಲ -ಆರ್ಷ ಕವಿಗಳು ಪಾಣಿನಿಗೂ ಹಿಂದಿನವರಾದ್ದರಿಂದ ಅವರ ಕಾಲದಲ್ಲಿ ಬರವಣಿಗೆ ರೂಢಿಗೆ ಬಂದಿಲ್ಲದಿದ್ದಿರಬಹುದೆಂಬ ಊಹೆಯನ್ನು ನಾವು ಮಾಡಬಹುದು. #ಚಾಣಕ್ಯ ನ ಅರ್ಥಶಾಸ್ತ್ರವು ಲೆಕ್ಕ ಪತ್ರಗಳನ್ನು ಬರೆದಿಡುವ ವಿಷಯವನ್ನು ಹೇಳುತ್ತದೆ. ಲಿಪಿಯಿಲ್ಲದೇ ಇದು ಸಾಧ್ಯವೇ? ಹಾಗಾಗಿ ಭಾರತದ ಇನ್ನಾವ ಭಾಷೆಗೂ ಮೊದಲೇ ಸಂಸ್ಕೃತವನ್ನು ಬರೆಯುತ್ತಿದ್ದರು ಅಂತ ಖಚಿತವಾಗಿ ಹೇಳಬಹುದು. ಸಿಕ್ಕಿರುವ ಮೊದಮೊದಲ ಶಾಸನಗಳು ಪ್ರಾಕೃತದವು, ಆದರೆ ಪ್ರಾಕೃತವೂ ಸಂಸ್ಕೃತದ್ದೇ ಛಾಯೆ. ಖಾತ್ರಿಯಾಗಿ ಹೇಳಬಹುದೇನೆಂದರೆ ಮೊದಮೊದಲ #ಶಿಲಾಶಾಸನ ಗಳಲ್ಲಿ ಪ್ರಾಕೃತ ಬಳಸಿ ಒಂದೆರಡು ಶತಮಾನಗಳ ನಂತರ ಸಂಸ್ಕೃತ ಬಳಸಿದ್ದಾರೆ ಎಂದು ಅಷ್ಟೇ. ಅದಕ್ಕಿಂತ ಹೆಚ್ಚು ಏನು ಹೇಳಿದರೂ ಅದು ಊಹೆಯೇ. ಸಂಸ್ಕೃತಕ್ಕೂ #ದೇವನಾಗರಿ ಗೂ ಅಭೇದ ಕಲ್ಪಿಸಬೇಡಿ. ಸಂಸ್ಕೃತದ ಲಿಪಿಯೂ ದೇಶ ಕಾಲಗಳಿಗೆ ಬದಲಾಗುತ್ತಾ ಹೋಗಿದೆ. ದೊರಕಿರುವ ಇತಿಹಾಸವನ್ನು ನೋಡಿದರೆ ಮೊದಲು #ಬ್ರಾಹ್ಮೀ ( ಅದಕ್ಕೂ ಮೊದಲು ಯಾವುದಾದರೂ ಲಿಪಿ ಇದ್ದರೆ, ಪಾಣಿನಿಯ ಕಾಲದಲ್ಲಿ, ಅದು ನಮಗೆ ದೊರೆತಿಲ್ಲ. ಅಂದಹಾಗೆ ಬ್ರಾಹ್ಮೀ ಅನ್ನುವುದೂ ೧೯ನೇ ಶತಮಾನದಲ್ಲಿಟ್ಟ ಹೊಸ ಹೆಸರು, ೨0೦೦ ವರ್ಷಗಳ ಹಿಂದೆ ಆ ಲಿಪಿಗೆ ಹೆಸರಿತ್ತೇ, ಹೆಸರಿದ್ದರೆ ಏನು ಎಂಬುದೆಲ್ಲ ಊಹಾಪೋಹವಷ್ಟೇ). ನಂತರ #ಶಾರದಾ, #ವಂಗ, #ನಾಗರೀ, #ಸಿದ್ಧಂ, #ಗ್ರಂಥ, #ಕನ್ನಡ/#ತೆಲುಗು #ಮಲಯಾಳ #ತಿಗಳಾರಿ #ತಿಬೆಟ್ ಹೀಗೆ ಹತ್ತು ಹಲವು ಲಿಪಿಗಳಲ್ಲಿ ಬರೆದಿರುವುದು ಕಂಡುಬರುತ್ತರೆ. ಈ ಎಲ್ಲ ಲಿಪಿಗಳೂ ಬ್ರಾಹ್ಮಿಯು ಬದಲಾಗುತ್ತ ಬಂದ ಬೆಳವಣಿಗೆಯ ಹಂತಗಳೆಂದು ನೋಡಿದಾಗ ಸಂಸ್ಕೃತಕ್ಕೆ ಲಿಪಿಯಿಲ್ಲ ಎಂಬ ಮಾತಿಗೆ ಹುರುಳಿಲ್ಲವೆಂಬುದು ತಿಳಿಯುತ್ತದೆ. ಸಂಸ್ಕೃತವನ್ನು ಕೇವಲ ದೇವನಾಗರಿಯಲ್ಲಿ ಮಾತ್ರ ಬರೆಯುತ್ತಿರುವುದು ಇತ್ತೀಚಿನ ರೂಢಿ. ಏಕೆ ಸಂಸ್ಕೃತವನ್ನು ಹಲವು ಲಿಪಿಗಳಲ್ಲಿ ಬರೆವ ರೂಢಿ ಬಂತೆಂದರೆ ದೇಶ ವಿದೇಶಗಳ ವಿವಿಧ ಭಾಗಗಳಲ್ಲೂ ಸಂಸ್ಕೃತದಲ್ಲಿ ಉಪಯೋಗವೆನಿಸುವ ಶಾಸ್ತ್ರ-ಕಾವ್ಯ ಕೃತಿಗಳಿದ್ದದ್ದು. ಅಂಥ ಕೃತಿಗಳು ತಮಗೆ ಉಪಯುಕ್ತವೆಂದು ಸಂಸ್ಕೃತವನ್ನು (ಹೆಚ್ಚಾಗಿ) ಮಾತಾಡದ, ಅಥವಾ ಸಂಸ್ಕೃತ ಜನ್ಯವಾದ ಭಾಷೆಗಳನ್ನು ಮಾತಾಡ ಪ್ರದೇಶದ ಜನರೂ ಅರಿತಿದ್ದೇ ಅದಕ್ಕೆ ಕಾರಣ. ಆ ದಾರಿಯಲ್ಲಿ, ಒಂದೇ ಭಾಷೆಯನ್ನು ಬರೆಯಲು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರಚಲಿತವಾದ ಲಿಪಿಗಳನ್ನು ಬಳಸಿದರು ಅಷ್ಟೇ. ಒಟ್ಟಿನಲ್ಲಿ ಹತ್ತು ಹನ್ನೆರಡನೇ ಶತಮಾನದವರೆಗೆ ದೇವನಾಗರಿ ಲಿಪಿ ಕಂಡುಬರುವುದಿಲ್ಲ ಎಂದ ಮಾತ್ರಕ್ಕೆ ಅಲ್ಲಿಯವರೆಗೆ ಸಂಸ್ಕೃತವನ್ನುಬರೆಯಲಿಲ್ಲ ಎಂದು ಅರ್ಥವಲ್ಲ. ಕನ್ನಡದ ಲಿಪಿಯೂ ಹೀಗೇ - ಮೊದಲಿಗೆ #ಕದಂಬ, ನಂತರ #ಚಾಲುಕ್ಯ , ನಂತರ #ಹೊಯ್ಸಳ, ನಂತರ #ವಿಜಯನಗರ ಹೀಗೆ ಕಾಲಕಾಲಕ್ಕೆ ಬದಲಾಗುತ್ತಬಂದದ್ದೇ. ಕದಂಬ ಚಾಲುಕ್ಯ ಲಿಪಿಗಳಲ್ಲಿ ಸಂಸ್ಕೃತ ತೆಲುಗು ಕನ್ನಡ ಮೂರೂ ಭಾಷೆಗಳನ್ನು ಬರೆದಿರುವುದನ್ನು ನೋಡುವಾಗ, ನಾವು ಐಹೊಳೆಯ ರವಿಕೀರ್ತಿ ಶಾಸನದ ಲಿಪಿಯನ್ನು "ಕನ್ನಡ" ಲಿಪಿ ಎಂದು ಹೇಳಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ನಾವೇ ಕೇಳಿಕೊಳ್ಳಬೇಕು! ಅದು ಒಂದುಸಾಮಾನ್ಯ ನೆಲೆಯಲ್ಲಿ ಸರಳವಾಗಿ ಹೇಳುವ ಮಾತಷ್ಟೇ. ಅದರಿಂದ ಸಂಸ್ಕೃತಕ್ಕೆ ಲಿಪಿಯಿರಲಿಲ್ಲವೆಂದಾಗಲಿ, ಸಂಸ್ಕೃತ ಬಲ್ಲವರು ಬರವಣಿಗೆಯನ್ನು ಧಿಕ್ಕರಿಸಿದರೆಂದಾಗಲೀ ಅಲ್ಲ. #PeggyMohan #WanderersKingsMerchants #Book #Review #Notes
1
11
2
22
1,421
ನಾನು retweeted
Old Kannada inscription belonging to Kadamba Jayakeshi found in Tisvadi, Old Goa. It belong to Shaka 976. It mentions a place name called "Pan̄jaṇakhaṇi". This is suppose to be now the Goa's Capital Panaji! It mentions mantri named Aṇṇayyaṅgaḷ was ruling Pan̄jaṇakhaṇi.
4
39
1
168
2,925
#ಕನ್ನಡ #ರಾಜ್ಯೋತ್ಸವ ದ ಈ ದಿನದಂದು, ಕನ್ನಡ ಪುಸ್ತಕಗಳನ್ನು ಹೆಚ್ಚು ಹೆಚ್ಚು ಕೊಳ್ಳುವ, ಓದುವ, ಮತ್ತೆ ಅವುಗಳ ಬಗ್ಗೆ ಮಾತಾಡಿ ಬರೆಯುವ ಅಭ್ಯಾಸವನ್ನು ಹೆಚ್ಚು ಮಾಡಿಕೊಳ್ಳುವ ಕಡೆಗೆ ಮನಸ್ಸನ್ನು ಹರಿಸೋಣ. ಇನ್ನೊಂದು ವರ್ಷದಲ್ಲಿ ನೀವು ಓದಬಯಸುವ (ಅಥವಾ ಓದಿ ಮುಗಿಸಬಯಸುವ) ಐದು #ಕನ್ನಡಪುಸ್ತಕ ಗಳ ಹೆಸರನ್ನು ಇಲ್ಲಿ ಉತ್ತರದಲ್ಲಿ ಬರೆಯಿರಿ. ಪುಸ್ತಕ ಪ್ರಿಯರಿಗೆ ಅದು ಒಂದು ರೀತಿ ಹುಮ್ಮಸ್ಸನ್ನು ತರಲಿ. ನನ್ನ ಪಟ್ಟಿ: 1) ಶ್ರೀರಾಮಾಯಾಣದರ್ಶನಂ (ಕುವೆಂಪು) 2) ನಳಚರಿತ್ರೆ (ಕನಕದಾಸರು) 3) ಪುಂಡರೀಕಮಾಲಾ (ಡಾ. ರಾ. ಸತ್ಯನಾರಾಯಣ - ಓದಲು ಆರಂಭಿಸಿರುವೆ) 4) ಹುಟ್ಟುಮಚ್ಚೆ ( ಹರ್ಷ ರಘುರಾಮ್, ಈಗ ಓದುತ್ತಿದ್ದೇನೆ) 5) ಆಡಾಡತ ಆಯುಷ್ಯ (ಗಿರೀಶ್ ಕಾರ್ನಾಡ್) ನಿಮ್ಮ ಪಟ್ಟಿ ಹಂಚಿಕೊಳ್ಳಿ! ಇತರ ಕನ್ನಡ ಪುಸ್ತಕ ಮಿತ್ರರೊಂದಿಗೆ ಈ ಸಂದೇಶ ರವಾನಿಸಿ. 📚 ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು - ಎಂಬ ಕವಿವಾಣಿ ನಿಮ್ಮ ಮನಸ್ಸಿನಲಿ ಇರಲಿ!
17
31
5
146
8,050
Find all Kannada digital books at Public Library of India and ServantsOfKnowledge collection here archive.org/details/JaiGyan Also we digitally archived and OCRed all the text so research is made simpler. You can also find the kannada book index (free and for purchase) at pustaka.sanchaya.net Do your research on books and their content at research.servantsofknowledge…
7
24
687
ನಾನು retweeted
From @shashikiran_bn "ವಿದ್ಯಾಲಂಕಾರ ಎಸ್. ಕೆ. ರಾಮಚಂದ್ರರಾಯರ ಎಲ್ಲ ಕೃತಿಗಳನ್ನೂ ಅವರ ಮನೆಯವರು ಮುಕ್ತವಾಗಿ ಅಂತರ್ಜಾಲದಲ್ಲಿ ಲಭ್ಯವಾಗಿಸಿದ್ದಾರೆ. profskr.com/ ಈ ಸಾರಸ್ವತ ಉಪಕಾರಕ್ಕಾಗಿ ರಾಯರ ಮನೆಯವರಿಗೆ ವಂದನೆಗಳನ್ನು ಸಲ್ಲಿಸುತ್ತ ಅವರ ಔದಾರ್ಯದ ಪ್ರಯೋಜನವನ್ನು ಪಡೆಯೋಣ 🙏🙏" Prof. SKR's books free.
9
49
2
147
4,491
ನಾನು retweeted
ಸಾರವತ್ತಾದ ಧರ್ಮವೂ, ನಿರ್ಮಲವಾದ ಸತ್ಯವೂ - ಪಾಪದಿಂದಲೂ ಸುಳ್ಳಿನಿಂದಲೂ ಹಾನಿಗೊಳಗಾದ ವೇಳೆಯಲ್ಲಿ, ಅದನ್ನು ತಡೆಯಬಲ್ಲ ಸಾಮರ್ಥ್ಯವಿದ್ದೂ ಯಾರು ತಡೆಯುವುದಿಲ್ಲವೊ, ಅದರಿಂದ ಅವರಿಗೇ ಕೇಡಾಗುತ್ತದೆ. ಅಂಥಾ ಕಾಲಕ್ಕೆಲ್ಲ ಧರ್ಮವನ್ನು ಹಾಗೂ ಸತ್ಯವನ್ನು ಕಾಪಾಡುವುದಕ್ಕೆ ದೈವವಂತೂ ಇದ್ದೇ ಇರುತ್ತದೆ.
3
1
12
ಕಳೆದ ವರ್ಷ ಚಾಣಕ್ಯ ವಿಶ್ವವಿದ್ಯಾಲಯದಿಂದ ಆಯೋಜಿತವಾಗಿದ್ದ ಕಾರ್ತ್ತಿಕಕಾವ್ಯದೀಪೋತ್ಸವ ಸ್ಪರ್ಧೆಗೆ ಕಳುಹಿಸಿದ್ದ ಕಾವ್ಯ- ರಾಜಗ್ರಹಣಂ. ಶ್ರೀಕೃಷ್ಣದೇವರಾಯನ ಕಡೆಯ ದಿನದ ಕಥಾನಕ. ಸರಳ ತಾತ್ಪರ್ಯದ ಜೊತೆಗೆ ಈಗ ಗೂಗಲ್ ಪ್ಲೇ ಬುಕ್ಸ್ ಅಲ್ಲಿ ಲಭ್ಯವಿದೆ. ಆಸಕ್ತರು ಈ ಲಿಂಕಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. play.google.com/store/books/…
12
31
910
Sri Yoganarasimhaswamy Temple, Melukote on today's Poornima .
31
247
27
2,349
54,336
ಹಂಪಿಯಲ್ಲಿ ಇನ್ನೊಂದು ದೇಗುಲ ದೊರೆತಿದೆ !
Fascinating news from Hampi. ASI has unearthed a rare paired Vishnu and Shiva temple complex in the dvikuta (twin sanctum) style near the Lotus Mahal. A major temple discovery after years. hospet.online/paired-vishnu-…
3
12
355
ನಾನು retweeted
Fascinating news from Hampi. ASI has unearthed a rare paired Vishnu and Shiva temple complex in the dvikuta (twin sanctum) style near the Lotus Mahal. A major temple discovery after years. hospet.online/paired-vishnu-…
18
483
19
2,170
36,414